ಸುಂಟಿಕೊಪ್ಪ, ಸೆ. ೨೫: ಕಳ್ಳನೊಬ್ಬ ರಾತ್ರಿ ವೇಳೆ ಕಳ್ಳತನ ಮಾಡುವುದು ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸುಂಟಿಕೊಪ್ಪ ಪೊಲೀಸರು ಕಳ್ಳನ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿ ಬೀಡಾ ಅಂಗಡಿ ನಡೆಸುತ್ತಿದ್ದ ಅಜಯ್ ಎಂಬವರ ಅಂಗಡಿಗೆ ಸೋಮವಾರ ನಸುಕಿನ ಜಾವ ೩.೨೫ ವೇಳೆ ಕಳ್ಳನೊಬ್ಬ ಪ್ರವೇಶಿಸಿ ಗಲ್ಲಾ ಪೆಟ್ಟಿಗೆಯನ್ನು ಮುರಿದು ಅದರಲ್ಲಿದ್ದ ಹಣ ಹಾಗೂ ಬೀಡಿ ಸಿಗರೇಟನ್ನು ಕಳ್ಳತನ ಮಾಡಿರುವುದಾಗಿ ಅಂಗಡಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ. ಅಕ್ಕಪಕ್ಕದ ಅಂಗಡಿಯ ಸಿ.ಸಿ. ಕ್ಯಾಮರಾವನ್ನು ಪರಿಶೀಲಿಸಿದಾಗ ಕಳ್ಳ ಹಳದಿ ಬಣ್ಣದ ರೈನ್ ಕೋಟು ಧರಿಸಿ ಕಳ್ಳತನ ಮಾಡುವುದು ಗೋಚರಿಸಿದೆ. ಅಂಗಡಿ ಮಾಲೀಕ ಸುಮಾರು ಆರು ಸಾವಿರ ರೂ.ಗಳ ಸಾಮಗ್ರಿಗಳನ್ನು ಖರೀದಿಸಿದ್ದು, ಗಲ್ಲಾ ಪೆಟ್ಟಿಗೆಯಲ್ಲಿದ್ದ ಸಿಗರೇಟು ಹಾಗೂ ಚಿಲ್ಲರೆ ನಾಣ್ಯಗಳನ್ನು ಎಗರಿಸಿ ಪರಾರಿಯಾಗಿದ್ದಾನೆ.