ಮಡಿಕೇರಿ, ಸೆ. ೨೪: ಬದುಕಿನಲ್ಲಿ ಜೀವನದ ಮೌಲ್ಯವನ್ನು ಅರಿತು ಬಾಳಿದರೆ ಮಾತ್ರ ಬದುಕು ಹಸನಾಗಲು ಸಾಧ್ಯ ಎಂದು ರಾಜ್ಯ ಯುವ ಪ್ರಶಸ್ತಿ ವಿಜೇತ ಹಾಗೂ ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಾಟು ಮೊಣ್ಣಪ್ಪ ಅಭಿಪ್ರಾಯ ಪಟ್ಟರು.

ಕಾವೇರಿ ಪದವಿ ಕಾಲೇಜು ಗೋಣಿಕೊಪ್ಪಲುವಿನ ರಾಷ್ಟಿçÃಯ ಸೇವಾ ಯೋಜನೆ ವತಿಯಿಂದ ಆಯೋಜಿಸಿದ್ದ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಜೀವನದ ಮೌಲ್ಯಗಳನ್ನು ಅರಿತುಕೊಂಡರೆ ಬದುಕು ಸುಲಭ ಸಾಧ್ಯ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಬಿ.ಕಾವೇರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಸ್ತಕದ ಜ್ಞಾನಕ್ಕಿಂತ ಹೊರ ಜಗತ್ತಿನ ಜ್ಞಾನ ಅತ್ಯವಶ್ಯಕ ಎಂದರು. ನಿಮಾನ್ಸ್ ಸಂಸ್ಥೆಯ ಸಂಶೋಧನಾ ಸಂಯೋಜಕರಾದ ವೀಕ್ಷಾ ರೈ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಅಧಿಕಾರಿ ವನಿತ್ ಕುಮಾರ್ ಎಂ.ಎನ್ ಮತ್ತು ರೀತಾ ಎನ್.ಪಿ. ಹಾಗೂ ಎನ್.ಎಸ್.ಎಸ್ ವಿದ್ಯಾರ್ಥಿಗಳು ಹಾಜರಿದ್ದರು.