ವೀರಾಜಪೇಟೆ, ಸೆ. ೨೪: ವೀರಾಜಪೇಟೆ ಕೊಡವ ಸಮಾಜ ನೂರು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶತಮಾನೋತ್ಸವ ಸಮಾರಂಭ (ನೂರಾಂಡ್ ನಮ್ಮೆ) ವಿಜೃಂಭಣೆ ಯಿಂದ ಜರುಗಿತು. ಈ ಪ್ರಯುಕ್ತ ನಿನ್ನೆ ಕ್ರೀಡೋತ್ಸವ ನಡೆದಿದ್ದು, ಇಂದು ಮುಖ್ಯ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಹಲವಾರು ಅತಿಥಿ ಗಣ್ಯರು, ಜನಪ್ರತಿನಿಧಿಗಳು, ಸಮಾಜದ ಪ್ರಮುಖರ ಉಪಸ್ಥಿತಿಯಲ್ಲಿ ಬೆಳಿಗ್ಗೆಯಿಂದ ಸಾಂಸ್ಕೃತಿಕ ಮೆರವಣಿಗೆ, ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ದಿನವಿಡೀ ಸಮಾಜದ ಆವರಣದಲ್ಲಿರುವ ತ್ರಿವೇಣಿ ಶಾಲೆಯ ಜಿಮ್ಮಿ ಕಲಾವೇದಿಕೆಯಲ್ಲಿ ಜರುಗಿತು.

ವಿಶಿಷ್ಟ ಸಂಸ್ಕೃತಿ- ಆಚಾರ ವಿಚಾರದ ಉಳಿಕೆ-ಪರಿಪಾಲನೆ ಯೊಂದಿಗೆ ಕೊಡಗು ಜಿಲ್ಲೆಯ ಹಿತ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಕರೆ ನೀಡಿದರು.

ನೂರಾಂಡ್ ನಮ್ಮೆಯ ಅಂಗವಾಗಿ ಬೆಳಿಗ್ಗೆ ಕೊಡವ ಸಮಾಜದ ಪ್ರಮುಖರು, ಸದಸ್ಯರುಗಳು ಹಾಗೂ ಜನಾಂಗ ಬಾಂಧವರು ಕೊಡವ ಸಾಂಪ್ರದಾಯಿಕ ಉಡುಪಿ ನೊಂದಿಗೆ ಪಟ್ಟಣದಲ್ಲಿರುವ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಗಡಿಯಾರ ಕಂಬದಿAದ ದೊಡ್ಡಟ್ಟಿ ಚೌಕಿ, ಅಪ್ಪಯ್ಯಸ್ವಾಮಿ ರಸ್ತೆ ಮೂಲಕ ದುಡಿಕೊಟ್ಟ್ಪಾಟ್, ಒಡ್ಡೋಲಗ ಸಹಿತವಾಗಿ ಮೆರವಣಿಗೆಯಲ್ಲಿ ಸಮಾಜದ ಜಿಮ್ಮಿಕಲಾ ವೇದಿಕೆಗೆ ಆಗಮಿಸಿದರು.

ದೇಶಪ್ರೇಮ ರಕ್ತಗತ: ಪ್ರಪಂಚದಲ್ಲೇ ವಿಶಿಷ್ಟ ಸಂಸ್ಕೃತಿ, ಭಾಷೆ, ಆಚಾರ ವಿಚಾರವನ್ನು ಹೊಂದಿರುವ ಕೊಡವ ಜನಾಂಗದ ರಕ್ತದಲ್ಲೇ ದೇಶಪ್ರೇಮ ಅಡಗಿದೆ. ಇಂತಹ ಜನಾಂಗ ಹಾಗೂ ಸಂಸ್ಕೃತಿಯನ್ನು ಬೇರೆಯೆಲ್ಲೂ ಕಾಣುವುದಕ್ಕೆ ಸಾಧ್ಯವಿಲ್ಲ ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು ವಿಶಿಷ್ಟ ಸಂಸ್ಕöÈತಿಗಳನ್ನು ಹೊಂದಿರುವ ಕೊಡವ ಜನಾಂಗದವರು ಸೇನೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಕೊಡವರು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿ ಯಲ್ಲಿದ್ದಾರೆ. ಕೊಡವರ ಸಂಖ್ಯೆ ಕ್ಷೀಣಿಸುತ್ತಿದೆ. ಕೊಡವರ ಜನಸಂಖ್ಯೆ ಹೆಚ್ಚಾಗಬೇಕು, ಚಿಕ್ಕ ಜನಾಂಗದಲ್ಲಿ ಶ್ರಿಮಂತ ಸಂಸ್ಕೃತಿ, ಆಚಾರ ವಿಚಾರ ಅಡಗಿದೆ. ಒಳ್ಳೆಯ ಕೆಲಸ ಮಾಡಲು ಸಮಾಜದ ಮುಖಾಂತರ ಏನು ಬೇಕಾದರೂ ಕೇಳಿ, ಸಂಸದನಾಗಿ ಮಾಡಲು ಸಿದ್ಧನಿದ್ದೇನೆ. ಸಮುದಾಯಗಳನ್ನು ಒಟ್ಟುಗೂಡಿಸಲು ಒಂದು ವೇದಿಕೆ ಬೇಕು. ಮುಂದಿನ ದಿನಗಳಲ್ಲಿ ವೀರಾಜಪೇಟೆಗೆ ಸುಸಜ್ಜಿತ ಕೊಡವ ಸಮುದಾಯ ನಿರ್ಮಾಣ ಮಾಡುವಂತಾಗಬೇಕು ಎಂದು ಹೇಳಿದರು.

ಒಗ್ಗಟ್ಟು ಅಗತ್ಯ: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಮಾತನಾಡಿ ನೂರಾಂಡ್ ನಮ್ಮೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿರುವುದು ಶ್ಲಾಘನೀಯ. ನಾವೆಲ್ಲರೂ ಪರಸ್ಪರ ಒಗ್ಗಟ್ಟು, ಹೊಂದಾಣಿಕೆಯೊAದಿಗೆ ಜೀವನ ಸಾಗಿಸಬೇಕು ಹಾಗೂ ಜೀವಿತಾವಧಿ ಯಲ್ಲಿ ಆದಷ್ಟು ಸಮಾಜಮುಖಿ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿ ಬದುಕನ್ನು ಅರ್ಥ ಪೂರ್ಣಗೊಳಿಸಬೇಕು. ನಮ್ಮ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವಲ್ಲಿ ನಾವು ಮುನ್ನಡಿಯಿಡಬೇಕು ಎಂದರು.

ಕೊಡವ ಸಂಪ್ರದಾಯ ವಿಶಿಷ್ಟವಾಗಿದ್ದು ಪ್ರತಿಯೊಂದರಲ್ಲೂ ತನ್ನತನವನ್ನು ಕಾಪಾಡಿಕೊಂಡು ಬಂದಿದೆ. ಇದು ಮುಂದಿನ ಪೀಳಿಗೆಗೂ ಮುಂದುವರೆಯಬೇಕು. ನಮ್ಮ ಸಂಸ್ಕೃತಿ ಉಳಿಸುವ ಜವಾಬ್ದಾರಿ ಕೊಡವ ಸಮಾಜಗಳ ಮೇಲಿದೆ. ನಮ್ಮ ಜನಾಂಗದ ಸಮಸ್ಯೆ ಬಗ್ಗೆ ಸರಕಾರದ ಗಮನ ಸೆಳೆದು ೩ಏಳನೇ ಪುಟಕ್ಕೆ (ಮೊದಲ ಪುಟದಿಂದ) ಕೆಲಸ ಮಾಡಿಕೊಡುವ ಜವಾಬ್ದಾರಿ ನನ್ನದು. ಸಮಾಜದ ಸೇವಕನಾಗಿ ಸಂಸ್ಕೃತಿಯ ಉಳಿವಿಗಾಗಿ ನಾನು ನಿಮ್ಮೊಡನೆ ಸದಾ ಸಹಕರಿಸುತ್ತೇನೆ. ನಮಗೆ ರಾಜಕೀಯ ಬೇಡ. ಒಗ್ಗಟ್ಟಿನ ರಾಜಕೀಯ ಬೇಕು. ಹಾಗೆಯೇ ಕೊಡವ ಪದಬಳಕೆಯ ಆದೇಶ ಸರಕಾರದಿಂದ ಅಧಿಕೃತವಾಗಿದ್ದು ಕೆಲವೇ ದಿನಗಳಲ್ಲಿ ಆದೇಶ ಬಂದು ಕೊಡವರಿಗೆ ಕೊಡವ ಅನ್ನುವ ಸರ್ಟಿಫಿಕೇಟ್ ಇರುತ್ತದೆ. ಜಮ್ಮಾ ಬಾಣೆ, ಕೋವಿ ಹಕ್ಕು ಮುಂತಾದ ವಿಚಾರಗಳಲ್ಲಿ sಸರಕಾರದ ಗಮನಸೆಳೆಯಲಾಗಿದೆ. ಎಲ್ಲಾ ಸಮಸ್ಯೆಗಳಿಗೂ ಹಂತಹAತವಾಗಿ ಪರಿಹಾರ ದೊರಕಲಿವೆ ಎಂದರು.

ಆಸ್ತಿ ಮಾರದಿರಿ: ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಕೊಡವ ಸಮಾಜ ಶತಮಾನೋತ್ಸವ ಆಚರಿಸುತ್ತಿರುವುದು ಸಂತೋಷದ ವಿಚಾರ. ಸಮಾಜ ಇನ್ನಷ್ಟು ಗಟ್ಟಿಗೊಳ್ಳಲಿ ಎಂದು ಆಶಿಸಿದರಲ್ಲದೆ ಕೊಡವರು ತಮ್ಮ ಆಸ್ತಿ-ಪಾಸ್ತಿಗಳನ್ನು ಪರರಿಗೆ ಮಾರುವುದನ್ನು ಬಿಟ್ಟು ತಮ್ಮ ನೆಲದಲ್ಲಿ ತಾವು ನಿಲ್ಲುವಂತಾಗಬೇಕು. ಹಿರಿಯರು ಮಾಡಿಟ್ಟ ಆಸ್ತಿಯನ್ನು ಮಾರಿ ನಮ್ಮ ನೆಲದಲ್ಲಿ ಪರಕೀಯರಾಗದಿರಲು ಕರೆ ನೀಡಿದರು.

ನಮ್ಮ ಕೃಷಿ ಭೂಮಿಯನ್ನು ಹಾಳುಮಾಡುತ್ತಿದ್ದೇವೆ. ಗದ್ದೆಗಳನ್ನು ಹಡಿಲು ಬಿಟ್ಟಿದ್ದೇವೆ. ಈಗಾಗಿ ನಮಗೆ ಕಾಲ ಕಾಲಕ್ಕೆ ತಕ್ಕಂತೆ ಮಳೆ ಬೆಳೆಯಾಗದೆ ಸಂಕಷ್ಟ ಪಡುತ್ತಿದ್ದೇವೆ. ಮಲೆನಾಡು ಪ್ರದೇಶವಾದ ಕೊಡಗಿಗೆ ಗದ್ದೆ ಮಾಡಲು ಸಬ್ಸಿಡಿ ನೀಡುವಂತೆ ಮಾಡಲು ಸರಕಾರದ ಗಮನ ಸೆಳೆಯಲಾಗಿದೆ. ಹಾಗೆಯೇ ನಮ್ಮ ಭಾಷೆ ಉಳಿಯಲು ಅದನ್ನು ಎಲ್ಲರೂ ಬಳಸಬೇಕು, ಭಾಷೆ ಉಳಿದರೆ ಆಚಾರ ವಿಚಾರ ಉಳಿಯುತ್ತದೆ ಎಂದರು.

ಸೇನೆ ಸೇರ್ಪಡೆಗೆ ಸಲಹೆ : ಮುಖ್ಯ ಅತಿಥಿಗಳಾಗಿದ್ದ ಲೆಫ್ಟಿನೆಂಟ್ ಜನರಲ್ ಚೆನ್ನಿರ ಬನ್ಸಿ ಪೊನ್ನಪ್ಪ ಮಾತನಾಡಿ, ದೇಶ ವಿದೇಶಗಳಲ್ಲಿ ತನ್ನದೇ ಛಾಪನ್ನು ಮೂಡಿಸಿ ಹೆಸರುವಾಸಿಯಾದವರು ಹಲವರಿದ್ದಾರೆ. ಪ್ರಸ್ತುತ ಎಲ್ಲಾ ಕ್ಷೇತ್ರದಲ್ಲಿ ಕೊಡವರು ಪದಾರ್ಪಣೆ ಮಾಡಿದ್ದು ಗಣನೀಯ ಸಾಧನೆ ಮಾಡಿರುವುದು ಕೊಡವರ ಹೆಗ್ಗುರುತು. ಉನ್ನತ ಮಟ್ಟದ ಶಿಕ್ಷಣ ಮತ್ತು ಪದವಿಗೆ ಮಾತ್ರ ಸೀಮಿತವಾಗದೆ, ಪೋಷಕರು ತಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಆ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಪೊಷಕರು ತಮ್ಮ ಮಕ್ಕಳನ್ನು ದೈಹಿಕವಾಗಿ ಮಾನಸಿಕವಾಗಿ ಸದೃಢಗೊಳಿಸಿ ಸೇನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ಪ್ರಸ್ತುತ ಸೇನೆಯಲ್ಲಿ ಹಲವಾರು ಅವಕಾಶಗಳಿದ್ದು, ಸೇನೆ ಸೇರ್ಪಡೆಗೆ ಅವರು ಸಲಹೆಯಿತ್ತರು.

ಭವಿಷ್ಯದ ಚಿಂತನೆ ಬೇಕು: ಇನ್ನೋರ್ವ ಮುಖ್ಯ ಅತಿಥಿ ಡೈರೆಕ್ಟರ್ ಜನರಲ್ ಆಫ್ ಎನ್.ಎಸ್.ಜಿ ಮನೆಯಪಂಡ ಎ ಗಣಪತಿ ಮಾತನಾಡಿ ಯಾವುದೇ ಸಂಸ್ಕೃತಿ, ಆಚಾರ-ವಿಚಾರ ತಳಮಟ್ಟದಿಂದಲೇ ಬರಬೇಕು. ನಮ್ಮ ಆಚರಣೆ ಕೇವಲ ತೋರಿಕೆಗೆ ಇರಬಾರದು. ನಮ್ಮ ಮಣ್ಣಿನ ಸಂಸ್ಕೃತಿಯನ್ನು ಅರಿತು ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವುದರೊಂದಿಗೆ ಅದರ ಉಳಿವಿಗೆ ಶ್ರಮಿಸಬೇಕು. ಕೊಡಗು ಪ್ರಸ್ತುತ ಸಾಕಷ್ಟು ಬದಲಾಗುತ್ತಿದೆ. ಜಲ್ಲೆಯನ್ನು ಈ ಹಿಂದಿನAತೆ ಕಾಪಾಡಬೇಕು. ಇದರೊಂದಿಗೆ ಸಂಸ್ಕೃತಿಯ ಉಳಿವಿಗೂ ಮುಂದಾಗುವAತೆ ಅವರು ಕರೆ ನೀಡಿದರು.

ಚೀಫ್ ಎಲೆಕ್ಟಿçಕಲ್ ಇನ್ಸ್ಪೆಕ್ಟರ್ ತೀತಿರ ರೋಷನ್ ಅಪ್ಪಚ್ಚು ಮಾತನಾಡಿ, ನಮ್ಮ ಜನಾಂಗದ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಬೇಕು, ಉನ್ನತ ವ್ಯಾಸಂಗದ ಕಡೆ ಗಮನಹರಿಸಬೇಕು, ಆದಷ್ಟು ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆದ್ಯತೆ ನೀಡಿ ಉನ್ನತ ಸ್ಥಾನ ಅಲಂಕರಿಸಬೇಕು, ಇದಕ್ಕೆ ಪೋಷಕರು ಉತ್ತೇಜನ ನೀಡಬೇಕು ಎಂದು ಕಿವಿಮಾತು ಹೇಳಿದರಲ್ಲದೆ ನಮ್ಮ ಮಕ್ಕಳು ನಮ್ಮ ಆಚಾರ ವಿಚಾರ ತಿಳಿಯುವಂತಾಗಬೇಕು ಎಂದರು.

ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಕೆ ಸುಬ್ರಮಣಿ ಮಾತನಾಡಿ ಈ ನೆಲ, ಜಲ, ಸಂಸ್ಕೃತಿ, ಆಚಾರ ವಿಚಾರಗಳನ್ನು ನಾವು ಉಳಿಸಿ ಬೆಳೆಸುವುದರೊಂದಿಗೆ ನಮ್ಮ ಮುಂದಿನ ಪೀಳಿಗೆಗೂ ಪರಿಚಯಿಸುವಂತಾಗಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜದ ಅಧ್ಯಕ್ಷ ಕುಂಬೇರ ಮನು ಕುಮಾರ್ ಅವರು, ಸಮಾಜದ ಏಳಿಗೆಗೆ ಶ್ರಮಿಸಿದವರನ್ನು ಸ್ಮರಿಸಿ ತ್ರಿವೇಣಿ ಶಾಲೆಯ ಅಭಿವೃದ್ಧಿಯ ಕುರಿತು ಮಾತನಾಡಿದರು.

ಕೊಡವ ಸಮಾಜದ ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಕೊಡವ ಸಮಾಜ ನಡೆದು ಬಂದ ಹಾದಿ ಅದರ ಹಿನ್ನೆಲೆ ಹಾಗೂ ಅದರ ಸ್ಫಾಪನೆಗೆ ಸಹಕರಿಸಿದ ಮಹನೀಯರುಗಳನ್ನು ಸಮಾಜ ನಡೆದು ಬಂದ ದಾರಿಯ ಕುರಿತು ವಿವರವಿತ್ತರು.

ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತೆ ಐಮುಡಿಯಂಡ ರಾಣಿ ಮಾಚಯ್ಯ, ಅಂರ‍್ರಾಷ್ಟಿçÃಯ ಹಾಕಿ ತರಬೇತುದಾರ ಬೊಳ್ಯಪಂಡ ಜೆ. ಕಾರ್ಯಪ್ಪ, ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ, ಲೆಫ್ಟಿನೆಂಟ್ ಜನರಲ್ ಚೆನ್ನಿರ ಬನ್ಸಿ ಪೊನ್ನಪ್ಪ, ಡೈರೆಕ್ಟರ್ ಜನರಲ್ ಆಫ್ ಎನ್.ಎಸ್.ಜಿ ಮನೆಯಪಂಡ ಎ ಗಣಪತಿ, ಚೀಫ್ ಎಲೆಕ್ಟಿçಕಲ್ ಇನ್ಸ್ಪೆಕ್ಟರ್ ತೀತಿರ ರೋಷನ್ ಅಪ್ಪಚ್ಚು, ಸಮಾಜದ ನಿಕಟಪೂರ್ವ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು. ಸಮಾರಂಭದ ವೇದಿಕೆಯಲ್ಲಿ ಕೊಡವ ಸಮಾಜದ ಉಪಾಧ್ಯಕ್ಷರಾದ ಕುಯ್ಮಂಡ ಕಿರಣ್ ಇದ್ದರು.

ಇದೇ ಸಂದರ್ಭ ಸ್ಮರಣ ಸಂಚಿಕೆ ಜ್ಞಾನೋಲೆಯನ್ನು ವೇದಿಕೆಯಲ್ಲಿದ್ದ ಅತಿಥಿ ಗಣ್ಯರು ಅನಾವರಣಗೊಳಿಸಿದರು.

ಶತಮಾನೋತ್ಸವ ಅಂಗವಾಗಿ ನಡೆದ ಕ್ರೀಡಾಕೂಟಗಳಾದ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಭಾರದ ಗುಂಡು ಎಸೆತ, ವಾಲಗತಾಟ್, ಅಂತರ ಕೊಡವ ಸಮಾಜಗಳ ಪುರುಷರು ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಪೈಪೋಟಿಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಸಭಾ ಕಾರ್ಯಕ್ರಮದ ಬಳಿಕ ತ್ರಿವೇಣಿ ಶಾಲಾ ಮಕ್ಕಳಿಂದ, ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ, ಪೊಮ್ಮಕ್ಕಡ ಕೂಟ ಹಾಗೂ ತಲಕಾವೇರಿ ತಿಂಗಕೋರ್ ಮೊಟ್ಟ್ ಕೂಟಾಳಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಸಾಂಸ್ಕೃತಿಕ ಕಾರ್ಯದರ್ಶಿ ಮಾದೇಯಂಡ ಸಂಪಿ ಪೂಣಚ್ಚ, ಕ್ರೀಡಾ ಕಾರ್ಯದರ್ಶಿ ಅಮ್ಮಣಿಚಂಡ ಸುಬ್ರಮಣಿ, ನಿರ್ದೇಶಕರುಗಳಾದ ಬಾಚಿರ ಜಗದೀಶ್, ಚೇಮಿರ ಅರ್ಜುನಾ, ತಾತಂಡ ಕಬೀರ್, ಪುಲಿಯಂಡ ಪೊನ್ನಣ್ಣ, ಚೋಕಂಡ ರೇಖಾ ಪುಷ್ಪಾವತಿ, ಮೇರಿಯಂಡ ಗಾಯತ್ರಿ, ಮುಲ್ಲೆಂಗಡ ಶೀಲಾ ಅಪ್ಪಯ್ಯ, ನಗರದ ವಿವಿಧ ಕೊಡವ ಕೇರಿಯ ಪದಾಧಿಕಾರಿಗಳು, ವಿವಿಧ ಕೊಡವ ಸಮಾಜದ ಪ್ರತಿನಿಧಿಗಳು ಹಾಗೂ ಕೊಡವ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.