ಮಡಿಕೇರಿ, ಸೆ. ೨೪: ಕೊಡಗು ವಿದ್ಯಾಲಯದಲ್ಲಿ ಪಿ. ಚಂದನ್ ಅವರ ಅಧ್ಯಕ್ಷತೆಯಲ್ಲಿ ಕೃಷ್ಣ ಜನ್ಮಾಷ್ಟ ಮಿಯನ್ನು ಆಚರಿಸಲಾಯಿತು.
ಈ ಸಂದರ್ಭವನ್ನು ಗುರುತಿಸಲು ಶಿಶು ವಿಹಾರದಿಂದ ೧ ನೇ ತರಗತಿವರೆಗಿನ ಪುಟಾಣಿ ಮಕ್ಕಳು ಒಟ್ಟಾಗಿ ಸೇರಿದ್ದರು. ೨೦೨೨-೨೩ ನೇ ಸಾಲಿನ ಮುಖ್ಯ ಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನ ರಾದ ಅಗ್ನಿಶಾಮಕ ಇಂಜಿನಿಯ ರಿಂಗ್ ಕ್ಷೇತ್ರದ ಪ್ರತಿಷ್ಠಿತ ವ್ಯಕ್ತಿತ್ವದ ಪಿ. ಚಂದನ್ ಉಪಸ್ಥಿತರಿದ್ದರು.
ತಮ್ಮ ಅನಿಸಿಕೆಯನ್ನು ಹಂಚಿಕೊAಡ ಪಿ. ಚಂದನ್ ಅವರು ಪೋಷಕರು ತಮ್ಮ ಅಭಿಪ್ರಾಯವನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರದೆ ಮಕ್ಕಳು ಬೆಳೆದಂತೆ ಅವರ ಆಸಕ್ತಿಗೆ ಅನುಗುಣವಾಗಿ ಅವರವರ ಆಯ್ಕೆಗೆ ಅವಕಾಶವನ್ನು ನೀಡುವುದರ ಮಹತ್ವವನ್ನು ಒತ್ತಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಮಿತಿಯ ಸದಸ್ಯರಾದ ಊರ್ವಶಿ ಮುದ್ದಯ್ಯ, ನಿಯತಾ ದೇವಯ್ಯ ಹಾಗೂ ಆಡಳಿತ ವ್ಯವಸ್ಥಾಪಕರು ಪಾಲ್ಗೊಂಡು ಯುವ ಪ್ರತಿಭೆಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೃಷ್ಣನಿಗೆ ಸಂಬAಧಿಸಿದ ನೃತ್ಯ ನಾಟಕಗಳು ಮತ್ತು ಶ್ಲೋಕಗಳನ್ನು ಪ್ರದರ್ಶಿಸಿದರು.
ಸುಮಿತ್ರಾ ಕೆ. ಎಸ್. ಅವರು ವಿದ್ಯಾರ್ಥಿಗಳ ಪ್ರದರ್ಶನಗಳಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸುವುದರ ಮೂಲಕ ಶುಭಾಶಯಗಳನ್ನು ಕೋರಿದರು. ಶಾಲೆಯ ಆಡಳಿತ ವ್ಯವಸ್ಥಾಪಕ ರವಿ ಪಿ. ಮಾತನಾಡಿದರು.