ಕೂಡಿಗೆ, ಸೆ. ೨೪: ಜೇನುಕಲ್ಲು ಬೆಟ್ಟ (ಭುವನಗರಿ) ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೨-೨೩ ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಟಿ.ಕೆ. ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಬೆಳವಣಿಗೆಗೆ ಹಾಲು ಉತ್ಪಾದಕರ ಸಹಕಾರ ಬಹು ಮುಖ್ಯ. ಈ ಸಾಲಿನಲ್ಲಿ ಸಂಘವು ರೂ. ೪.೧೧ ಲಕ್ಷ ಆದಾಯವನ್ನು ಗಳಿಸಿದೆ ಎಂದರು.
ಸಭೆಯಲ್ಲಿ ಹಾಜರಿದ್ದ ರೈತ ಸದಸ್ಯರು ಸಂಘದ ಅಭಿವೃದ್ಧಿಗೆ ಪೂರಕವಾದ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ೨೦೨೨-೨೩ನೇ ಸಾಲಿನ ಆಡಿಟ್ ವರದಿ ಪರಿಶೀಲನೆ, ಅಂದಾಜು ಬಜೆಟ್ ಮಂಜೂರು, ಬೈಲಾ ತಿದ್ದುಪಡಿ ಸೇರಿದಂತೆ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ತಯಾರಿಸುವ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಹೆಚ್.ಎಂ. ಬಸವರಾಜ್ ಮಂಡಿಸಿದರು.
ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಬಿ.ವಿ. ವೀಣಾ ಅವರು ಸಂಘಕ್ಕೆ ಹಾಲು ಹಾಕುವ ಉತ್ಪಾದಕರು ಹಾಲಿನ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಸೂಚಿಸಿದರು. ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರು, ಜಯಶೀಲಾ, ಸಂಘದ ಉಪಾಧ್ಯಕ್ಷ ಕೆ.ಆರ್., ಜಗದೀಶ್, ನಿರ್ದೇಶಕಗಳಾದ ಕೆ.ಎಸ್. ಜೋಯಪ್ಪ, ನಾಗರಾಜ್.ಬಿ.ಆರ್. ಧರ್ಮದಾಸ್, ಶಂಕರನ್, ಅನ್ನಮ್ಮ ಬಿಜು, ಜ್ಯೋತಿ ವಿಜಯಕುಮಾರ್, ಎಸ್.ಆರ್. ಮಹೇಶ್, ಪಾರ್ವತಿ ಸತ್ಯವೃತ, ಸಂಘದ ಕಾರ್ಯದರ್ಶಿ ಹೆಚ್.ಎಂ. ಬಸವರಾಜ್ ಸೇರಿದಂತೆ ಹಾಲು ಉತ್ಪಾದಕರ ಸಂಘದ ಸದಸ್ಯರು ಹಾಜರಿದ್ದರು. ದಕ್ಷ ಸ್ವಾಗತಿಸಿ, ರಕ್ಷಿತಾ ಪ್ರಾರ್ಥಿಸಿ, ಬಸವರಾಜ್ ವಂದಿಸಿದರು.