ಚೆಯ್ಯಂಡಾಣೆ, ಸೆ. ೨೪: ಅರಪಟ್ಟು ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವತಿಯಿಂದ ತಾ.೨೫ (ಇಂದು) ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.

ಬೆಳಿಗ್ಗೆ ೧೧ ಗಂಟೆಗೆ ಆಯುಷ್ ಆರೋಗ್ಯ ಕ್ಷೇಮ ಕೆಂದ್ರದಲ್ಲಿ ೩೦ ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.