ಮಡಿಕೇರಿ, ಸೆ. ೨೩ : ಇತ್ತೀಚೆಗಷ್ಟೇ ವೀರಾಜಪೇಟೆಯಲ್ಲಿ ಕೊಡವ ಬ್ಯಾಡ್ಮಿಂಟನ್ ಫ್ರೆಂಡ್ಸ್ನಿAದ ಆಯೋಜನೆಗೊಂಡಿದ್ದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಡ್ಮಿಂಟನ್ ಪಟು ಮಾಳೆಯಂಡ ಅಶೋಕ್ ಪೂವಯ್ಯ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಬ್ಯಾಡ್ಮಿಂಟನ್ ಮಾಜಿ ಚಾಂಪಿಯನ್ ಕೂಡ ಆಗಿರುವ ಅಶೋಕ್ ರಾಷ್ಟಿçÃಯ ಹಾಗೂ ಅಂತರರಾಷ್ಟಿçÃಯ ಮಟ್ಟದಲ್ಲಿಯೂ ಬ್ಯಾಡ್ಮಿಂಟನ್ ಆಟವಾಡಿದ್ದಾರೆ. ಸಮಾರಂಭದಲ್ಲಿ ಅತಿಥಿಯಾಗಿದ್ದ ಇವರನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶಾಸಕ ಎ.ಎಸ್. ಪೊನ್ನಣ್ಣ ಅವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.