ಕುಶಾಲನಗರ, ಸೆ. ೨೩: ಕುಶಾಲನಗರ ಪಟ್ಟಣದ ಪೆಟ್ರೋಲ್ ಬಂಕ್‌ನಲ್ಲಿ ಟ್ಯಾಂಕರ್ ಚಾಲಕನ ಅಚಾತುರ್ಯದಿಂದ ಪೆಟ್ರೋಲ್ ಟ್ಯಾಂಕಿಗೆ ಡೀಸೆಲ್ ತುಂಬಿಸಿದ ಘಟನೆಯೊಂದು ನಡೆದಿದೆ.

ಕುಶಾಲನಗರ ಮಡಿಕೇರಿ ರಸ್ತೆಯ ಬ್ಲೂಮೂನ್ ಪೆಟ್ರೋಲ್ ಬಂಕ್‌ನಲ್ಲಿ ಈ ಘಟನೆ ನಡೆದಿದ್ದು ಪೆಟ್ರೋಲ್ ಬಂಕ್ ಮಾಲೀಕರು ವಿಷಯವನ್ನು ಸಂಬAಧಿಸಿದ ಕಂಪೆನಿಗೆ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ಶುಕ್ರವಾರ ರಾತ್ರಿಯಿಂದ ಬಂದ್ ಆಗಿದೆ.

ಇದರೊಂದಿಗೆ ಬಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಟೋರಿಕ್ಷಾಗಳಿಗೆ ಗ್ಯಾಸ್ ತುಂಬಿಸುವ ಘಟಕ ಕೂಡ ಸ್ಥಗಿತಗೊಂಡಿದ್ದು, ಗ್ಯಾಸ್ ಅವಲಂಬಿತ ಆಟೋ ಚಾಲಕರು ಪರದಾಡಬೇಕಾದ ಸ್ಥಿತಿ ಸೃಷ್ಟಿಯಾಗಿದೆ.