ಚೆಯ್ಯಂಡಾಣೆ, ಸೆ. ೨೩: ನರಿಯಂದಡ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಅಧ್ಯಕ್ಷತೆಯಲ್ಲಿ ಸ್ಥಳೀಯ ಲಕ್ಷಿö್ಮ ಮಹಿಳಾ ಸಮಾಜದಲ್ಲಿ ನಡೆಯಿತು. ಸಾರ್ವಜನಿಕರ ಪರವಾಗಿ ಪಟ್ರಪಂಡ ಜಗದೀಶ್ ಮಾತನಾಡಿ, ಕಾಡಾನೆ ಹಾವಳಿ ಒಂದು ಕಡೆಯಾದರೆ ಇದೀಗ ಕೀಮಲೆ ಕಾಡಿನಲ್ಲಿ ಚಿರತೆ ಕೂಡ ಪ್ರತ್ಯಕ್ಷಗೊಂಡಿದ್ದು ಭಯದ ವಾತಾವರಣ ಸೃಷ್ಟಿಯಾಗಿದೆ, ಹಲವು ವರ್ಷದಿಂದ ನೀರಿನ ಸಮಸ್ಯೆ ತಲೆದೋರಿದ್ದು ಕೂಡಲೇ ನೀರಿನ ವ್ಯವಸ್ಥೆ ಸರಿಪಡಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅರಣ್ಯ ಇಲಾಖೆಯ ಪ್ರತಿನಿಧಿಗಳು ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ನೀರಿನ ಸಮಸ್ಯೆಗೆ ಜೆಜೆಎಂನ ತೌಸೀಫ್ ಮಾತನಾಡಿ, ಶೇಕಡಾ ೯೦ ಕಾಮಗಾರಿ ಪೂರ್ಣಗೊಂಡಿದ್ದು, ಕೆಲವು ಜಾಗದಲ್ಲಿ ಟ್ಯಾಂಕ್ ನಿರ್ಮಿಸಲು ಸ್ಥಳವಕಾಶದ ಕೊರತೆ ಇದ್ದು ಕೂಡಲೇ ಸ್ಥಳಾವಕಾಶ ಕಲ್ಪಿಸಿದರೆ ಕಾಮಗಾರಿ ಪೂರ್ಣಗೊಂಡು ನೀರಿನ ಸಮಸ್ಯೆ ಬಗೆ ಹರಿಯಲಿದೆ ಎಂದರು. ಚಂಡೀರ ಮುದ್ದಪ್ಪ ಮಾತನಾಡಿ ವಿದ್ಯುತ್ ಸಮಸ್ಯೆ ಒಂದು ಕಡೆಯಾದರೆ ಭತ್ತ ಬೆಳೆಯುವ ಕೃಷಿಕರಿಗೆ ಮಳೆ ಇಲ್ಲದೆ ನೀರಿನ ಸಮಸ್ಯೆ ತಲೆದೋರಿದೆ, ಮಡಿಕೇರಿಯಲ್ಲಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ತೆರಳಿದರೆ ಸಮಸ್ಯೆಯಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು. ಇದಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೌಶಿ ಕಾವೇರಮ್ಮ ಪ್ರತಿಕ್ರಿಯಿಸಿ ಮುಂದಿನ ದಿನದಲ್ಲಿ ಸೌಲಭ್ಯ ದೊರೆಯುವಂತೆ ಇಲಾಖೆಯ ಅಧಿಕಾರಿಗಳಲ್ಲಿ ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.

ಮುಂಡ್ಯೋಳAಡ ರವಿ ಸೋಮಯ್ಯ ಮಾತನಾಡಿ, ಕಂದಾಯ ಇಲಾಖೆಯ ಅಧಿಕಾರಿಗಳು ವಾರಕ್ಕೆ ೨ ದಿನವಾದರೂ ಗ್ರಾಮ ಪಂಚಾಯಿತಿ ಯಲ್ಲಿ ಕಾರ್ಯನಿರ್ವಹಿಸಬೇಕು, ಒಂದು ಅರ್ಜಿ ನೀಡಲು ನಾಪೋಕ್ಲು, ಮಡಿಕೇರಿ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ ಕೂಡಲೇ ಸಂಬAಧಪಟ್ಟವರ ಗಮನಕ್ಕೆ ತರಲು ಮನವಿ ಮಾಡಿದರು. ನಿಕಟಪೂರ್ವ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಮಾತನಾಡಿ, ಕಾಡಾನೆ ಹಾವಳಿಯಿಂದ ಜನರು ತತ್ತರಿಸಿದ್ದು ಅರಣ್ಯ ಇಲಾಖೆ, ಆಸ್ಪತ್ರೆ, ಶಾಲೆ, ಸರಕಾರಿ ಕಚೇರಿಗಳ ಅಂಗಳದಲ್ಲಿ ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸುವುದನ್ನು ಕೈ ಬಿಟ್ಟು ಬೆಟ್ಟ ಪ್ರದೇಶ, ಅರಣ್ಯ ಪ್ರದೇಶದಲ್ಲಿ ಬಾಳೆ ಗಿಡಗಳನ್ನು ನೆಟ್ಟು ಆನೆಗಳಿಗೆ ತಿನ್ನಲು ಆಹಾರಕ್ಕೆ ಅನುವು ಮಾಡಿಕೊಡುವಂತೆ ಆಗ್ರಹಿಸಿದರು.

ಗ್ರಾ.ಪಂ.ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಮಾತನಾಡಿ ಕಡಂಗ ಅರಪಟ್ಟುವಿನಲ್ಲಿ ಪಶು ವೈದ್ಯಶಾಲೆ ಇದೆ. ಆದರೆ ಅಲ್ಲಿಯ ವೈದ್ಯಾಧಿಕಾರಿ ಅರಪಟ್ಟು ಗ್ರಾಮದಲ್ಲಿರುವ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಕಾರ್ಯಾಚರಿಸುತ್ತಿಲ್ಲ. ವೈದ್ಯಶಾಲೆ ಕಟ್ಟಡ ಇರುವುದು ಅರಪಟ್ಟು ಗ್ರಾಮದಲ್ಲಿ, ವಿದ್ಯುತ್ ಉಪಯೋಗಿಸುವುದು ಅರಪಟ್ಟುವಿನದ್ದು, ಆದರೆ ಸೌಲಭ್ಯ ದೊರಕುವುದು ಬೇರೆ ಗ್ರಾಮಕ್ಕೆ ಎಂದು ಪಶು ಇಲಾಖೆಯ ಅಧಿಕಾರಿಗೆ ಸೂಕ್ತ ಮಾಹಿತಿ ನೀಡುವಂತೆ ಪ್ರಸ್ತಾಪಿಸಿದರು. ಇದಕ್ಕೆ ಪಶು ಇಲಾಖೆಯ ಅಧಿಕಾರಿ ಗುರುರಾಜ್ ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಕರಡ ಗ್ರಾಮದಲ್ಲಿ ೩ ತಿಂಗಳಿನಿAದ ವಿದ್ಯುತ್ ಬಿಲ್ ನೀಡಿಲ್ಲ ಎಂದು ಗ್ರಾಮಸ್ಥೆ ಈಶ್ವರಿ ಚೆಸ್ಕಾಂ ವಿರುದ್ಧ ಆಕ್ರೋಶ ಹೊರಹಾಕಿದರು. ಇದಕ್ಕೆ ಪ್ರತಿಕ್ರಿಯೆ ನೀಡಲು ಚೆಸ್ಕಾಂ ಇಲಾಖೆಯಿಂದ ಆಗಮಿಸಿದ ಪ್ರತಿನಿಧಿಗೆ ಯಾವುದೇ ಮಾಹಿತಿ ಇಲ್ಲ ಗ್ರಾಮ ಸಭೆಗೆ ಉನ್ನತ ಅಧಿಕಾರಿಗಳು ಬಂದು ಮಾಹಿತಿ ನೀಡಬೇಕು ಕಾಟಾಚಾರಕ್ಕೆ ಇಲಾಖೆಯಿಂದ ಬಿಲ್ ಕಲಕ್ಟರ್‌ಗಳನ್ನು ಗ್ರಾಮ ಸಭೆಗೆ ಕಳಿಸುತ್ತಾರೆ ಇವರಿಗೆ ಯಾವುದೇ ಮಾಹಿತಿ ಇರಲ್ಲ ಎಂದು ಗ್ರಾಮಸ್ಥರು ಅಸಮಾಧಾನ ಹೊರ ಹಾಕಿದರು. ಚೆಯ್ಯಂಡಾಣೆ ಆರೋಗ್ಯ ಕೇಂದ್ರದ ಸಹಾಯಕಿ ರೋಹಿಣಿ ಮಾತನಾಡಿ, ನಮ್ಮ ನೆರೆ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಅಧಿಕವಾಗುತ್ತಿದ್ದು ಮರಣ ಪ್ರಮಾಣ ಹೆಚ್ಚಾಗುತ್ತಿದೆ.

ನಿಫಾ ವೈರಸ್‌ನ ಯಾವುದೇ ಲಕ್ಷಣಗಳು ಕಂಡರೆ ಕೂಡಲೇ ರಕ್ತ ಪರೀಕ್ಷೆ ಮಾಡಿಸಿ ಹಾಗೂ ನೆರೆ ರಾಜ್ಯಕ್ಕೆ ತೆರಳಿದವರು ಹಾಗೂ ಅಲ್ಲಿಂದ ಬಂದವರು ಪರೀಕ್ಷೆ ಮಾಡಿಸಿ ರೋಗ ಹರಡದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕೆಂದರು. ಗ್ರಾಮಸ್ಥರಾದ ಮುಂಡಿಯೋಳAಡ ಮಾಚಮ್ಮ, ಸೀತಾರಾಂ, ಲಿಖಿನ್, ಪುಷ್ಪವತಿ ಮತ್ತಿತರರು ವಿವಿಧ ಕಾಮಗಾರಿ ಹಾಗೂ ಸೌಲಭ್ಯದ ಬಗ್ಗೆ ಮಾಹಿತಿ ಕೋರಿದರು. ಇದಕ್ಕೆ ಅಧ್ಯಕ್ಷರು ಹಾಗೂ ಇಲಾಖೆಯ ಪ್ರತಿನಿಧಿಗಳು ಸಮರ್ಪಕ ಮಾಹಿತಿ ನೀಡಿದರು. ಪಶು ಇಲಾಖೆಯ ಬಗ್ಗೆ ಪಶು ವೈದ್ಯಾಧಿಕಾರಿ ಗುರುರಾಜ್, ಶಿಶು ಇಲಾಖೆಯ ಬಗ್ಗೆ ಸೀತಾಲಕ್ಷಿö್ಮ, ಶಿಕ್ಷಣ ಇಲಾಖೆಯ ಬಗ್ಗೆ ಸಿಆರ್‌ಪಿ ಉಷಾ, ಆರಕ್ಷಕ ಇಲಾಖೆಯ ಬಗ್ಗೆ ವೀರಾಜಪೇಟೆ ಗ್ರಾಮಾಂತರ ಸಹಾಯಕ ಠಾಣಾಧಿಕಾರಿ ಶಾದುಲಿ, ಆಯುಷ್ ಆರೋಗ್ಯ ಆಸ್ಪತ್ರೆಯ ಬಗ್ಗೆ ಡಾ. ಶೈಲಜಾ, ಕರ್ನಾಟಕ ಬ್ಯಾಂಕ್ ಬಗ್ಗೆ ವ್ಯವಸ್ಥಾಪಕÀ ಬಾಲಕೃಷ್ಣ, ಕೃಷಿ ಇಲಾಖೆ ಹಾಗೂ ವಿವಿಧ ಇಲಾಖೆಯ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭ ನೋಡೆಲ್ ಅಧಿಕಾರಿಯಾಗಿ ಆಗಮಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾ ಲಕ್ಷಿö್ಮ, ಗ್ರಾಮ ಪಂಚಾಯಿತಿ ಸದಸ್ಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ವನಜಾ ಪ್ರಾರ್ಥಿಸಿ, ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಬಿದ್ದಪ್ಪ ಸ್ವಾಗತಿಸಿ, ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ವಂದಿಸಿದರು.