ವೀರಾಜಪೇಟೆ, ಸೆ. ೨೩: ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್ ಲಾಭದಲ್ಲಿದ್ದು ಎಲ್ಲಾ ಸದಸ್ಯರುಗಳು ಬ್ಯಾಂಕಿನೊAದಿಗೆ ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸಿದರೆ ಬ್ಯಾಂಕ್ ಉನ್ನತ ಪ್ರಗತಿ ಹೊಂದಲು ಸಾಧ್ಯ. ಬ್ಯಾಂಕ್ ನೂರು ವರ್ಷಗಳನ್ನು ಪೂರೈಸಿದ್ದು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಕರ್ನಂಡ ಸೋಮಯ್ಯ ಹೇಳಿದರು.

ಬ್ಯಾಂಕ್‌ನ ಸಭಾಂಗಣದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕಿನಲ್ಲಿ ಒಟ್ಟು ೩೮೧೩ ಸದಸ್ಯರಿದ್ದಾರೆ. ರೂ. ೨,೨೯,೫೭,೪೩೦-೦೦ ಪಾಲು ಬಂಡವಾಳ ಇದೆ. ಬ್ಯಾಂಕಿನ ಒಟ್ಟು ಠೇವಣಿ ರೂ. ೫೬,೬೧,೭೬,೮೧೫-೦೦ ಇರುತ್ತದೆ. ವರದಿ ಸಾಲಿನಲ್ಲಿ ರೂ. ೨೨,೭೨,೦೫,೩೬೫.೦೦ ಸಾಲ ವಿತರಿಸಲಾಗಿದೆ. ರೂ. ೨೨,೮೦,೫೩,೯೫೬.೫೫ ಸಾಲ ವಸೂಲಿ ಮಾಡಲಾಗಿದೆ. ವರ್ಷಾಂತ್ಯಕ್ಕೆ ರೂ. ೨೮,೩೦,೪೨,೭೪೫.೮೯ ಬಾಕಿ ಇದ್ದು, ಶೇ. ೯೦ ರಷ್ಟು ಸಾಲ ವಸೂಲಾತಿ ಆಗಿದೆ. ವರದಿ ಸಾಲಿನಲ್ಲಿ ಒಟ್ಟು ರೂ. ೭೭,೨೧,೬೭೨.೧೮ ರೂ. ಲಾಭ ಗಳಿಸಿದೆ. ಆದಾಯ ತೆರಿಗೆಗೆ ಕಾಯ್ದಿರಿಸಿ ರೂ. ೨೪,೩೩,೯೫೦.೦೦ ಕಳೆದು ನಿವ್ವಳ ಲಾಭ ರೂ. ೫೨,೮೭,೭೨೨.೧೮ ಗಳಿಸಿದೆ. ಲೆಕ್ಕ ಪರಿಶೋಧನೆ ಯಲ್ಲಿ ‘ಎ’ ವರ್ಗ ಇದೆ ಎಂದು ಹೇಳಿದರು. ಮಹಾಸಭೆ ಚರ್ಚೆಯಲ್ಲಿ ಕುಲ್ಲಚಂಡ ಪೂಣಚ್ಚ, ನೆಲ್ಲಮಕ್ಕಡ ಮುತ್ತಣ್ಣ, ಚೇಂದAಡ ವಸಂತ್ ಕುಮಾರ್, ಪಟ್ಟಡ ಪೂವಣ್ಣ, ಚಂಬಾAಡ ಕಾಳಯ್ಯ, ಪಾಲೇಂಗಡ ಪೊನ್ನಪ್ಪ ಮತ್ತಿತರರು ಭಾಗಿಯಾಗಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಪಾಂಡAಡ ರಚನ್ ಮೇದಪ್ಪ, ನಿರ್ದೇಶಕರುಗಳಾದ ಕಾಂಡAಡ ಚರ್ಮಣ, ಕೋಲತಂಡ ಡಬ್ಲುö್ಯ ಬೋಪಯ್ಯ, ಕೆ.ಬಿ. ಪ್ರತಾಪ್, ಮಾದಪಂಡ ಪಿ. ಕಾವೇರಪ್ಪ, ಮಾದೇಯಂಡ ಸಂಪಿ ಪೂಣಚ್ಚ, ಮಲ್ಲಂಡ ಮಧು ದೇವಯ್ಯ, ಪಟ್ಟಡ ರಂಜಿ ಪೂಣಚ್ಚ, ಎನ್.ಕೆ. ಸುಜೀತ್, ಹೆಚ್.ಸಿ ಮುತ್ತಮ್ಮ, ಐ.ಎಂ. ಕಾವೇರಮ್ಮ, ಮಾಜಿ ವ್ಯವಸ್ಥಾಪಕ ಸಿ.ಎಸ್. ಪ್ರಕಾಶ್ ವ್ಯವಸ್ಥಾಪಕ ಚಂಬಾAಡ ಪೂವಯ್ಯ ಉಪಸ್ಥಿತರಿದ್ದರು.