ಸುಂಟಿಕೊಪ್ಪ, ಸೆ. ೨೨: ಮನೆಯ ಮುಂದೆ ನಿಲ್ಲಿಸಿದ್ದ ಆಟೋರಿಕ್ಷಾಕ್ಕೆ ಕಾರು ಡಿಕ್ಕಿಯಾಗಿ ಆಟೋ ರಿಕ್ಷಾ ಜಖಂಗೊAಡಿದೆ. ಕೊಡಗರಹಳ್ಳಿಯ ನಿವಾಸಿ ಜಗದೀಶ ಅವರಿಗೆ ಸೇರಿದ ಆಟೋವನ್ನು ಮನೆಯ ಮುಂಭಾಗ ನಿಲ್ಲಿಸಿ ಮನೆಗೆ ತೆರಳಿದ್ದು, ಅದೇ ಸಮಯದಲ್ಲಿ ಮೈಸೂರು ಕಡೆಗೆ ತೆರಳುತ್ತಿದ್ದ ಕಾರು ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಅಲ್ಲದೆ, ಸಮೀಪವಿರುವ ಅಂಗಡಿಗೂ ಹಾನಿಯಾಗಿದೆ. ಕಾರು ಡಿಕ್ಕಿ ಹೊಡೆದು ತೋಟದೊಳಗೆ ನುಗ್ಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.