ಮಡಿಕೇರಿ, ಸೆ.೨೨ : ಮಾಸ್ಟರ್ ಮೈಂಡ್ ಚೆಸ್ ಸ್ಕೂಲ್ ವತಿಯಿಂದ ಅಕ್ಟೋಬರ್ ೮ ರಂದು ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಕೊಡಗು ಜಿಲ್ಲಾ ಮಟ್ಟದ ಚದುರಂಗದ ಆಟ ಪಂದ್ಯಾವಳಿ ನಡೆಯಲಿದೆ.

ಬೆಳಿಗ್ಗೆ ೯ ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಂಜೆ ೪.೩೦ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.

ಆಟಗಾರರು ಅಕ್ಟೋಬರ್, ೦೮ ರಂದು ಬೆಳಗ್ಗೆ ೯.೩೦ ರೊಳಗೆ ಹಾಜರಿರಬೇಕು. ನೋಂದಣಿಗೆ ಅಗತ್ಯವಿರುವ ದಾಖಲೆಗಳಾದ ಹೆಸರು, ಜನ್ಮ ದಿನಾಂಕದ ಪ್ರಮಾಣಪತ್ರ, ಆಧಾರ್ ಕಾರ್ಡ್, ಶಾಲೆಯ ಹೆಸರು ಮತ್ತು ಶುಲ್ಕ ಪಾವತಿಯ ಸ್ಕಿçÃನ್‌ಶಾಟ್, ವಿವರಗಳನ್ನು ೬೩೬೧೬೪೩೦೨೪ ಗೆ ವಾಟ್ಸಾಪ್ ಮಾಡಬೇಕು. ಹೆಚ್ಚಿನ ಮಾಹಿತಿಗೆ ೬೩೬೧೬೪೩೦೨೪ ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.