ಮಡಿಕೇರಿ, ಸೆ. ೨೩: ಮೂಲತಃ ಜಿಲ್ಲೆಯ ನಿವಾಸಿ ಬೆಂಗಳೂರಿನಲ್ಲಿ ನೆಲೆಸಿರುವ ಕಂಗಾAಡ ಬೇಬಿ ಕಾಳವ್ವ (ತಾಮನೆ ಉದಿಯಂಡ) ಅವರಿಗೆ ನೂರು ವರ್ಷ ಪ್ರಾಯ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಶತಾಯುಷಿಗಳನ್ನು ಬೆಂಗಳೂರು ಕೊಡವ ಸಮಾಜದ ಮೂಲಕ ನಡೆದ ಕೈಲ್‌ಪೊಳ್ದ್ ಸಂತೋಷ ಕೂಟ ಸಂದರ್ಭ ಸನ್ಮಾನಿಸಲಾಯಿತು. ದಾಸರಹಳ್ಳಿಯ ಕೊಡವ ಸಂಘದ ಮೂಲಕವೂ ಇವರನ್ನು ಪ್ರತ್ಯೇಕವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜದ ಪದಾಧಿಕಾರಿಗಳು, ಕಾಳವ್ವ ಅವರ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಸಂಸಾರದವರು, ಬಂಧುಮಿತ್ರರು ಪಾಲ್ಗೊಂಡು ಅವರನ್ನು ಗೌರವಿಸಿದರು.