ಭಾಗಮಂಡಲ, ಸೆ. ೨೨: ಉತ್ತಮ ಕಾರ್ಯನಿರ್ವಹಣೆ ಹಾಗೂ ಉತ್ತಮ ಕಾರ್ಯ ಚಟುವಟಿಕೆ, ಅಧಿಕ ಲಾಭ, ಆಡಿಟ್ ವರ್ಗಿಕರಣದಲ್ಲಿ ಸತತವಾಗಿ ಎ ಗ್ರೇಡ್ ಹೊಂದಿರುವ ಭಾಗಮಂಡಲ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ ನಿಯಮಿತ ೨೦೨೨-೨೩ರ ಸಾಲಿನ ಸಾಧನೆಗಾಗಿ ಪ್ರಶಸ್ತಿಗೆ ಭಾಜನವಾಗಿದೆ.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಮಡಿಕೇರಿ ಇವರು ನೀಡುವ ಬಹುಮಾನಕ್ಕೆ ಸಂಘ ಭಾಜನವಾಗಿದ್ದು ಮಡಿಕೇರಿ ತಾಲೂಕಿಗೆ ಸತತ ಎರಡನೇ ಬಾರಿಗೆ ಮೊದಲನೇ ಬಹುಮಾನ ೨೫,೦೦೦ ನಗದು ಹಾಗೂ ಪ್ರಶಸ್ತಿ ಪತ್ರ ದೊರೆತಿದೆ. ರಾಜ್ಯಮಟ್ಟದಲ್ಲಿ ಉತ್ತಮ ಕಾರ್ಯ ನಿರ್ವಹಣೆಗಾಗಿ ದ್ವಿತೀಯ ಬಾರಿಗೆ ರೂ. ೧೦ ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಲಭಿಸಿದೆ.

ಈ ಪ್ರಶಸ್ತಿಗಳನ್ನು ಇತ್ತೀಚೆಗೆ ನಡೆದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಹೊಸೂರು ಜೆ. ಸತೀಶ್ ಕುಮಾರ್ ಹಾಗೂ ಸಂಘದ ನಿರ್ದೇಶಕ ಆಯ್ಯಣಿರ ದಿನೇಶ್ ಸ್ವೀಕರಿಸಿದರು.ಕೂಡಿಗೆ: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ವತಿಯಿಂದ ನೀಡುವ ಸೋಮವಾರಪೇಟೆ ತಾಲೂಕು ಮಟ್ಟದ ವಾರ್ಷಿಕ ಪ್ರಶಸ್ತಿಯನ್ನು ಈ ಬಾರಿ ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ರೈತ ಸಹಕಾರ ಸಂಘ ಪಡೆದುಕೊಂಡಿದೆ.

ಪ್ರಶಸ್ತಿಯನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಬಾಂಡ್ ಗಣಪತಿ ಪ್ರದಾನ ಮಾಡಿದರು.