ನಾಪೋಕ್ಲು, ಸೆ. ೨೨ : ನಾಪೋಕ್ಲು ಪಟ್ಟಣದಲ್ಲಿ ತಾ. ೨೩ರಂದು (ಇಂದು) ಗಣೇಶ ಮೂರ್ತಿಯ ವಿಸರ್ಜನೋತ್ಸವ ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶನಿವಾರ ಪಟ್ಟಣದ ಮುಖ್ಯಬೀದಿಗಳಲ್ಲಿ ವಾಹನ ನಿಲುಗಡೆ ಮಾಡದಂತೆ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ್ ತಿಳಿಸಿದ್ದಾರೆ. ಇಂದಿರಾನಗರದ ವಿವೇಕಾನಂದ ಗಣೇಶೋತ್ಸವ ಸೇವಾ ಸಮಿತಿ, ಹಳೆ ತಾಲೂಕಿನ ಪೊನ್ನುಮುತ್ತಪ್ಪ ವಿನಾಯಕ ಸೇವಾ ಸಮಿತಿ, ಪಟ್ಟಣದ ರಾಮಮಂದಿರ ದೇವಸ್ಥಾನ ಸಮಿತಿ, ಹಳೆ ತಾಲೂಕು ಭಗವತಿ ದೇವಸ್ಥಾನದ ಗಣೇಶೋತ್ಸವ ಸಮಿತಿ ಹಾಗೂ ಕಕ್ಕುಂದ ಕಾಡು ವೆಂಕಟೇಶ್ವರ ದೇವಸ್ಥಾನದ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಪಟ್ಟಣದಲ್ಲಿ ಸಾಗಿ ಮೂರ್ತಿಗಳನ್ನು ಕಾರೆಕಾಡು ಬಳಿಯ ಕಾವೇರಿ ಹೊಳೆ ಸೇತುವೆ ಬಳಿ ವಿಸರ್ಜನೆ ಮಾಡಲಿರುವುದರಿಂದ ಪಟ್ಟಣದ ಹಳೆ ತಾಲೂಕಿನಿಂದ ಮಾರುಕಟ್ಟೆ ವರೆಗೆ ಹಾಗೂ ನಾಪೋಕ್ಲು ಬಸ್ ನಿಲ್ದಾಣದಿಂದ ಬೇತು ರಸ್ತೆಯ ಮಕ್ಕಿ ದೇವಸ್ಥಾನದ ಕಮಾನುಗೇಟ್‌ವರೆಗೆ ರಸ್ತೆಯ ಎರಡು ಬದಿಗಳಲ್ಲಿ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲುಗಡೆ ಮಾಡದಂತೆ ಪೊಲೀಸ್ ಇಲಾಖೆ ಪ್ರಕಟಣೆ ಕೋರಿದೆ.