ಚೆಯ್ಯಂಡಾಣೆ, ಸೆ ೨೨: ಚೆಯ್ಯಂಡಾಣೆ ಕೇಂದ್ರ ಕೊಡವ ಸಮಾಜದ ವತಿಯಿಂದ ಕೈಲ್ ಮೂರ್ತ ಹಬ್ಬದ ಪ್ರಯುಕ್ತ ಸಂತೋಷಕೂಟ ಕಾರ್ಯಕ್ರಮ ತಾ. ೨೪ ರಂದು ಬೆಳಿಗ್ಗೆ ೧೧ ಗಂಟೆಗೆ ಕೊಡವ ಸಮಾಜದ ಅಧ್ಯಕ್ಷ ಮುಂಡಿಯೋಳAಡ ಬಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ಚೆಯ್ಯಂಡಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ವಿಧಾನಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ನಿವೃತ ಭೂಸೇನೆಯ ಕರ್ನಲ್ ನೆರಪಂಡ ಸಾಗರ್ ಚಿಣ್ಣಪ್ಪ, ಬಾಳುಗೋಡು ಕೊಡವ ಸಮಾಜದ ಮಹಿಳಾ ವಿಭಾಗದ ಅಧ್ಯಕ್ಷೆ ಬಲ್ಲಣಮಾಡ ರೀಟಾ ದೇಚಮ್ಮನವರು ಪಾಲ್ಗೊಳ್ಳಲಿದ್ದಾರೆ.