ಮಡಿಕೇರಿ, ಸೆ. ೨೧ : ಯುವ ಜನತೆ ದೇಶಕ್ಕೆ ಬೆನ್ನೆಲುಬು ಆಗಿದ್ದು, ಕ್ರೀಡೆ, ನೃತ್ಯ, ಸಂಗೀತ, ಸಾಹಿತ್ಯ ಮತ್ತಿತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಅಗತ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಿ.ಜೆ.ಜವರಪ್ಪ ಅವರು ತಿಳಿಸಿದರು.

ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಭಾಂಗಣದಲ್ಲಿ ಗುರು ವಾರ ನಡೆದ ಸಾಂಸ್ಕೃತಿಕ ಕ್ರೀಡೆ, ಪಠ್ಯೇತರ ಮತ್ತು ಸಹಪಠ್ಯ ಚಟುವಟಿ ಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಓದಿನ ಜೊತೆಗೆ ಸಾಹಿತ್ಯ, ಸಂಗೀತ, ಕ್ರೀಡೆ, ಹೀಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಲ್ಲಿ ಸದಾ ಚಟುವಟಿಕೆಯಿಂದ ಇರಬಹುದು. ಇದರಿಂದ ಬೇರೆಡೆ ಗಮನ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ಆ ನಿಟ್ಟಿನಲ್ಲಿ ಲಭ್ಯವಿರುವ ಕಾಲಾ ವಕಾಶವನ್ನು ಸರಿಯಾಗಿ ಬಳಸಿ ಕೊಂಡು ಮುನ್ನಡೆಯಬೇಕು ಎಂದು ಡಿ.ಜೆ.ಜವರಪ್ಪ ಸಲಹೆ ನೀಡಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಲೇಖಕರಾದ ಡಾ.ಕೋರನ ಸರಸ್ವತಿ ಪ್ರಕಾಶ್ ಅವರು ಮಾತನಾಡಿ ಮೊಬೈಲ್ ಗೀಳನ್ನು ಬಿಟ್ಟು ಒಳ್ಳೆಯ ಪುಸ್ತಕ ಹೆಚ್ಚಾಗಿ ಓದಬೇಕು. ತಲೆಬಗ್ಗಿಸಿ ಪುಸ್ತಕ ಓದಿದರೆ ಮುಂದೊAದು ದಿನ ತಲೆ ಎತ್ತುವಂತೆ ಮಾಡುತ್ತದೆ. ತಲೆ ಬಗ್ಗಿಸಿ ಮೊಬೈಲ್ ನೋಡುತ್ತಿದ್ದರೆ ಮೊಬೈಲ್ ನೋಡಿಯೇ ಜೀವನ ಕಳೆದು ಹೋಗುತ್ತದೆ. ಆದ್ದರಿಂದ ಪುಸ್ತಕ ಓದುವ ಹವ್ಯಾಸ ರೂಢಿಸಿ ಕೊಂಡರೆ ಮಾನಸಿಕ ನೆಮ್ಮದಿಯನ್ನು ಹೆಚ್ಚು ಸಂಪಾದಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಮೊಬೈಲನ್ನು ದೂರ ಮಾಡಿ ಸಹಪಾಠಿಗಳೊಂದಿಗೆ ಬೆರೆಯಬೇಕು ಎಂದು ವಿದ್ಯಾರ್ಥಿ ಗಳಿಗೆ ಸಲಹೆ ನೀಡಿದರು.

ಪತ್ರಕರ್ತರಾದ ಪ್ರಜ್ಞಾ ಜಿ.ಆರ್. ಅವರು ಮಾತನಾಡಿ ವೈಯಕ್ತಿಕ ಬದುಕಿನಲ್ಲಿ ಪಠ್ಯೇತರ ಚಟುವಟಿ ಕೆಗಳು ಬಹಳ ಮುಖ್ಯವಾಗಿದೆ. ವಿದ್ಯಾರ್ಥಿ ಜೀವನವನ್ನು ಸುಗಮ ವಾಗಿರಿಸಲು ಪಠ್ಯೇತರ ಚಟುವಟಿಕೆ ಗಳು ಸಹಕಾರಿಯಾಗಿದೆ ಎಂದರು. ವಿದ್ಯಾರ್ಥಿ ಹಾಗೂ ವೃತ್ತಿ ಜೀವನದಲ್ಲಿ ಸಾಕಷ್ಟು ಒತ್ತಡಗಳಿದ್ದು, ಪಠ್ಯೇತರ ಚಟುವಟಿಕೆಗಳು ಈ ಒತ್ತಡವನ್ನು ತಡೆಗಟ್ಟುವಲ್ಲಿ ಸಹಕಾರಿಯಾಗುತ್ತವೆ. ಇಂದಿನ ತಾಂತ್ರಿಕ ಯುಗದಲ್ಲಿ ಮಾನವ ಸಂಬAಧಗಳು ಪ್ರಾಮುಖ್ಯತೆಯನ್ನು ಕಳೆದುಕೊಳ್ಳು ತ್ತಿದ್ದು ಖಿನ್ನತೆ, ಮಾನಸಿಕ ಅನಾ ರೋಗ್ಯ ಮಕ್ಕಳಲ್ಲಿ ಹೆಚ್ಚಾಗಲು ಕಾರಣ ವಾಗಿವೆ. ಮಾನಸಿಕ ಅನಾರೋಗ್ಯ ದಿಂದ ಬಳಲುತ್ತಿರುವವರು ತಮ್ಮ ನಿಕಟ ಸಂಬAಧಿಕರೊಡನೆ ತಮ್ಮ ಅಳಲುಗಳನ್ನು ಹಂಚಿಕೊAಡು ಧೈರ್ಯದಿಂದ, ಜೀವನದಲ್ಲಿ ಮನಶಾಂತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಮುಂದೆ ಸಾಗಬೇಕೆಂದು ಸಲಹೆ ನೀಡಿದರು. ಮಹಿಳೆಯರು ಎಲ್ಲಾ ಅವಕಾಶಗಳ ಸದುಪಯೋಗ ಪಡೆದುಕೊಂಡು ಸಬಲೀಕರಣದತ್ತ ಸಾಗಬೇಕೆಂದರು.

ಕಾರ್ಯಕ್ರಮದಲ್ಲಿ ಡಾ.ಕೋರನ ಸರಸ್ವತಿ ಪ್ರಕಾಶ್ ಅವರು ರಚಿಸಿರುವ ಪತ್ತಾಯ, ನುಡಿದೀಪ, ಅರೆಭಾಷೆ ಗಾದೆಗಳು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ರಾದ ಕೆ.ಬಸವರಾಜು ಅವರು ಪತ್ತಾಯ, ನುಡಿದೀಪ, ಅರೆಭಾಷೆ ಗಾದೆಗಳು ಪುಸ್ತಕ ಪರಿಚಯ ಮಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮ ಸಂಚಾಲಕರಾದ ಡಾ.ಡಿ.ಕನ್ನಿಕಾ, ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇತರರು ಇದ್ದರು.