ಕೂಡಿಗೆ, ಸೆ. ೨೧ : ಅಂಬೇಡ್ಕರ್ ಭಾವಚಿತ್ರವನ್ನು ಮೂಲೆಗೆಸೆದು ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ದಲಿತಪರ ಸಂಘಟನೆ ಗಳು ಕೂಡಿಗೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿವೆ.

ಅಂಬೇಡ್ಕರ್ ಫೋಟೋಗೆ ಅಪಮಾನ ಎಸಗಿದ ಗ್ರಾಮ ಪಂಚಾ ಯಿತಿ ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮವಹಿಸುವಂತೆ ಒತ್ತಾಯಿ ಸಿದರು. ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ಜಯಣ್ಣನವರಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಲಾಯಿತು.

ಈ ಸಂದರ್ಭ ಸುದ್ದಿಗಾರ ರೊಂದಿಗೆ ಮಾತನಾಡಿದ ದಲಿತಪರ ಸಂಘಟನೆಯ ಬಿ.ಡಿ. ಅಣ್ಣಯ್ಯ, ಸಂವಿಧಾನ ಪೀಠಿಕೆ ಓದುವ ಕಾರ್ಯ ಕ್ರಮದ ಸಂದರ್ಭ ಬಳಸಲಾದ ಅಂಬೇಡ್ಕರ್ ಭಾವಚಿತ್ರವನ್ನು ಕಾರ್ಯ ಕ್ರಮ ಮುಗಿದ ಬಳಿಕ ಮೂಲೆಗೆಸೆ ಯಲಾಗಿತ್ತು. ಒಂದು ವಾರಗಳ ಕಾಲ ಮೂಲೆಗುಂಪಾಗಿದ್ದ ಅಂಬೇಡ್ಕರ್ ಫೋಟೊ ಮೇಲೆ ಕಾಫಿ ಕುಡಿದ ಗ್ಲಾಸ್‌ಗಳನ್ನು ಇಡಲಾಗಿತ್ತು. ಆಕಸ್ಮಿಕ ವಾಗಿ ಇದು ಸ್ಥಳೀಯರ ಗಮನಕ್ಕೆ ಬಂದು ಆಕ್ಷೇಪ ವ್ಯಕ್ತಪಡಿಸಿದ ನಂತರ ಫೋಟೋವನ್ನು ಸ್ಥಳಾಂತರ ಮಾಡಲಾಗಿದೆ. ಪ್ರತಿಭಟನೆಯಲ್ಲಿ ದಲಿತಪರ ಸಂಘಟನೆಗಳ ಸಿದ್ದಪ್ಪ, ಕೆ.ಬಿ.ರಾಜು, ನಾಗರಾಜ್, ಚರಣ್, ಗಣೇಶ್, ಕಿರಣ್ ಸೇರಿದಂತೆ ಗ್ರಾಮ ಸ್ಥರು ಇದ್ದರು. ಈ ಸಂದರ್ಭದಲ್ಲಿ ಕುಶಾಲ ನಗರದ ವೃತ್ತ ನಿರೀಕ್ಷಕ ರಾಜೇಶ್, ಕುಶಾಲನಗರ ಗ್ರಾಮಾಂ ತರ ಠಾಣಾಧಿಕಾರಿ ಮೋಹನ್‌ರಾಜ್, ಸಂಚಾರಿ ಪೊಲೀಸ್ ಠಾಣಾಧಿಕಾರಿ ಕಾಶಿನಾಥ್ ಸೇರಿದಂತೆ ಪೊಲೀಸ್ ಸಿಬ್ಬಂದಿ ವರ್ಗದವರು ಇದ್ದರು.