ವೀರಾಜಪೇಟೆ, ಸೆ. ೨೨ : ಪಟ್ಟಣದ ಚಿಕ್ಕಪೇಟೆ ಬಳಿ ಇರುವ ಕೊಡವ ಸಮಾಜ ೧೦೦ ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ‘ನೂರಾಂಡ್ ನಮ್ಮೆ’ ಕಾರ್ಯಕ್ರಮ ತಾ. ೨೪ ರಂದು ನಡೆಯಲಿದೆ.
ಕೊಡವ ಸಮಾಜವು ಪ್ರಸ್ತುತ ೨,೩೭೦ ಸದಸ್ಯರನ್ನು ಹೊಂದಿದ್ದು ಉತ್ತಮ ಸಮಾಜಮುಖಿ ಕೆಲಸಗಳÀನ್ನು ಮಾಡುತ್ತಾ ಸಾಗುತ್ತಿದೆ.
ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನುಕುಮಾರ್ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಲೆಫ್ಟಿನೆಂಟ್ ಜನರಲ್ ಚೆನ್ನಿರ ಬನ್ಸಿ ಪೊನ್ನಪ್ಪ, ಡೈರೆಕ್ಟರ್ ಜನರಲ್ ಆಫ್ ಎನ್.ಎಸ್.ಜಿ. ಮನೆಯಪಂಡ ಎ. ಗಣಪತಿ, ಚೀಫ್ ಎಲೆಕ್ಟಿçಕಲ್ ಇನ್ಸ್ಪೆಕ್ಟರ್ ತೀತಿರ ರೋಶನ್ ಅಪ್ಪಚ್ಚು, ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಕೆ. ಸುಬ್ರಮಣಿ, ಫೆಡರೇಷನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಭಾಗವಹಿಸಲಿದ್ದಾರೆ.
ಇದೇ ಸಂದರ್ಭ ಪದ್ಮಶ್ರೀ ಪ್ರಶಸ್ತಿ ವಿಜೇತೆ ಐಮುಡಿಯಂಡ ರಾಣಿ ಮಾಚಯ್ಯ, ಅಂತರಾಷ್ಟಿçÃಯ ಹಾಕಿ ತರಬೇತುದಾರ ಬೊಳ್ಯಪಂಡ ಜೆ. ಕಾರ್ಯಪ್ಪ, ಸಮಾಜದ ನಿಕಟಪೂರ್ವ ಅಧ್ಯಕ್ಷರುಗಳನ್ನು ಸನ್ಮಾನಿಸಲಾಗುತ್ತದೆ.
ಸಭಾ ಕಾರ್ಯಕ್ರಮ ಮುಗಿದ ಬಳಿಕ ತ್ರಿವೇಣಿ ಶಾಲಾ ಮಕ್ಕಳಿಂದ, ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ, ಪೊಮ್ಮಕ್ಕಡ ಕೂಟ ಹಾಗೂ ತಲಕಾವೇರಿ ತಿಂಗಕೋರ್ ಮೊಟ್ಟ್ ಕೂಟಾಳಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ತಾ. ೨೩ ರಂದು ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಭಾರದ ಗುಂಡು ಎಸೆತ, ವಾಲಗತಾಟ್, ಅಂತರ ಕೊಡವ ಸಮಾಜಗಳ ಪುರುಷರು ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಪೈಪೋಟಿಗಳನ್ನು ಆಯೋಜಿಸಲಾಗಿದೆ.