ವೀರಾಜಪೇಟೆ, ಸೆ. ೨೨: ವೀರಾಜಪೇಟೆಯಲ್ಲಿ ಶ್ರೀ ಗೌರಿ-ಗಣೇಶೋತ್ಸವ ವನ್ನು ಎಲ್ಲರು ಸೇರಿ ವಿಜೃಂಭಣೆಯಿAದ ಆಚರಿಸು ವಂತಾಗಲಿ. ಪೊಲೀಸ್ ಇಲಾಖೆ ಸಹಕಾರ ನೀಡುತ್ತದೆ. ತಾ. ೨೮ ರಂದು ಗಣೇಶ ಮೂರ್ತಿ ವಿಸರ್ಜನೆಯ ದಿನದಂದೆ ಈದ್ ಮಿಲಾದ್ ಹಬ್ಬ ಇರುವುದರಿಂದ ಶಾಂತಿಯುತವಾಗಿ ಹಬ್ಬವನ್ನು ಆಚರಣೆ ಮಾಡುವಂತೆ ಡಿವೈಎಸ್‌ಪಿ ಮೋಹನ್ ಕುಮಾರ್ ಹೇಳಿದರು. ಗೌರಿ-ಗಣೇಶ ವಿಸರ್ಜನೋತ್ಸವ ಮತ್ತು ಈದ್ ಮಿಲಾದ್ ಹಬ್ಬದ ಅಂಗವಾಗಿ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೌರಿ ಗಣೇಶ ಪ್ರತಿಷ್ಠಾಪನೆ ಮಾಡುವ ೪೦ಕ್ಕೂ ಹೆಚ್ಚು ಸಮಿತಿಯ ಮುಖಂಡರುಗಳೊAದಿಗೆ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ‘ಶಾಂತಿ ಸಭೆ' ನಡೆಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೌರಿ ಗಣೇಶ ಪ್ರತಿಷ್ಠಾಪನೆ ಬಳಿಕ ವಿಸರ್ಜನೆವರೆಗು ಸಮಿತಿ ಸದಸ್ಯರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ಸರಕಾರದ ನಿಯಮ ಗಳನ್ನು ಎಲ್ಲರೂ ಪಾಲಿಸಬೇಕು. ಸಮಿತಿ ಸದಸ್ಯರು ಮತ್ತು ಸಾರ್ವ ಜನಿಕರು ಪೊಲೀಸ್ ಇಲಾಖೆ ಯೊಂದಿಗೆ ಸಹಕಾರ ನೀಡುವಂತಾಗ ಬೇಕು ಎಂದು ತಿಳಿಸಿದರು. ವೃತ್ತ ನಿರೀಕ್ಷಕ ಶಿವರುದ್ರ ಅವರು ಮಾತನಾಡಿ ಶ್ರೀ ಗೌರಿ ಗಣೇಶನ ಪ್ರತಿಷ್ಠಾಪನಾ ಸಮಿತಿಗಳು ವಿಸರ್ಜನೆ ಮೆರವಣಿಗೆ ಯಲ್ಲಿ ಭಾಗವಹಿಸುವ ವಾಹನಗಳು ಮತ್ತು ಧ್ವನಿವರ್ಧಕ ಪರವಾನಗಿಯನ್ನು ಪೊಲೀಸ್ ಠಾಣೆಗೆ ತಲುಪಿಸತಕ್ಕದ್ದು. ವಿಸರ್ಜನೆಯ ದಿನ ಮಧ್ಯಾಹ್ನ ೨ ಗಂಟೆ ನಂತರ ಮೆರವಣಿಗೆಯ ಮುಖ್ಯ ರಸ್ತೆಯಲ್ಲಿ ಯಾವುದೇ ವಾಹನ ನಿಲುಗಡೆಗೆ ಅವಕಾಶವಿಲ್ಲ, ಮದ್ಯ ಮಾರಾಟ ನಿಷೇಧ ಮಾಡಲಾಗಿರುತ್ತದೆ. ಗಣೇಶೋತ್ಸವಕ್ಕೆ ಬರುವ ವಾಹನಗಳಿಗೆ ಪಂಜರುಪೇಟೆ,

(ಮೊದಲ ಪುಟದಿಂದ) ಮೀನುಪೇಟೆ, ಸುಂಕದಕಟ್ಟೆ, ಚಿಕ್ಕಪೇಟೆ ಇತರೆಡೆ ಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿರುತ್ತದೆ. ಸಂಜೆ ನಗರದೊಳಗೆ ವಾಹನಗಳ ಪ್ರವೇಶ ಇರುವುದಿಲ್ಲ ಎಂದರು.

ಶಾಂತಿ ಸಭೆಯಲ್ಲಿ ಜನೋತ್ಸವ ಸಮಿತಿಯ ಗೌರವ ಅಧ್ಯಕ್ಷ ಕೆ.ಸಿ. ಶಭರಿಶ್, ಕಾವೇರಿ ಗಣೇಶೋತ್ಸವ ಸಮಿತಿಯ ರಾಜಪ್ಪ, ಕುಂದ ಕುಕ್ಲೂರು ಗಣಪತಿ ಸಮಿತಿಯ ಲವ, ಅಜೇಯ್ ರಾವ್, ಪ್ರದೀಪ್ ರೈ, ಜೋಕಿಂ ರಾಡ್ರಿಗಸ್, ಅಬ್ದುಲ್ ಕಡಂಗ, ಶಬೀರ್, ಅಬ್ದುಲ್ ರೆಹಮನ್ ಮಾತನಾಡಿದರು. ಈ ಸಂದರ್ಭ ನಗರ ಠಾಣಾಧಿಕಾರಿ ರವೀಂದ್ರ, ಗ್ರಾಮಾಂತರ ಠಾಣಾಧಿಕಾರಿ ಮಂಜುನಾಥ್ ಇದ್ದರು.