ಮಡಿಕೇರಿ, ಸೆ. ೨೨: ೨೦೧೫ರಲ್ಲಿ ಟಿಪ್ಪು ಜಯಂತಿ ಸಂದರ್ಭ ವಿಶ್ವ ಹಿಂದೂ ಪರಿಷತ್ತು ಮುಖಂಡ ದೇವಪ್ಪಂಡ ಕುಟ್ಟಪ್ಪ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿ ಸ್ಥಾನದಲ್ಲಿದ್ದ ೯ ಮಂದಿ ದೋಷಮುಕ್ತರಾಗಿ ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ.
ಸುದೀರ್ಘ ವಿಚಾರಣೆ ಬಳಿಕ ಇಂದು ತೀರ್ಪು ಪ್ರಕಟಿಸಿದ ಮಡಿಕೇರಿಯ ಅಪರ ಜಿಲ್ಲಾ ಸೆಷನ್ ನ್ಯಾಯಾಲಯ ನ್ಯಾಯಾಧೀಶರಾದ ಜಿ. ಪ್ರಶಾಂತಿ ಅವರು ಪ್ರಕರಣದಲ್ಲಿದ್ದ ನೆಲ್ಯಹುದಿಕೇರಿಯ ಟಿ.ಎ. ಖಾಲಿದ್, ವಿ.ಎ. ಗಫೂರ್, ಕೆ.ವೈ. ರಜಾಕ್, ಸಿ.ಟಿ. ನೌಫಲ್, ನಲ್ವತ್ತೆಕ್ರೆಯ ಬಿ.ಎಸ್. ಅಕ್ಬರ್ ಅಲಿ, ಬಿ.ಎ. ಶಂಶೀರ್, ವಾಲ್ನೂರು ತ್ಯಾಗತ್ತೂರಿನ ಪಿ.ಎಂ. ಅಶ್ರಫ್, ಪೊನ್ನತ್ಮೊಟ್ಟೆಯ ಸೈಫುದ್ದೀನ್ ಹಾಗೂ ಗುಹ್ಯ ಗ್ರಾಮದ ಶಾಹುಲ್ ಅಮೀದ್ ಅವರುಗಳನ್ನು ನಿರ್ದೂಷಿ ಎಂದು ಖುಲಾಸೆಗೊಳಿಸಿದ್ದಾರೆ.
೧೦-೧೧-೨೦೧೫ರಲ್ಲಿ ಸರಕಾರದಿಂದ ನಿಗದಿಯಾಗಿದ್ದ ಟಿಪ್ಪು ಜಯಂತಿ ಮಡಿಕೇರಿಯಲ್ಲಿ ಆಚರಣೆ ಸಂದರ್ಭ ಜನರಲ್ ತಿಮ್ಮಯ್ಯ ವೃತ್ತದಲ್ಲಿ ೨ ಕೋಮುಗಳ ನಡುವೆ ಕಲ್ಲುತೂರಾಟ, ಘರ್ಷಣೆ ನಡೆದಿತ್ತು. ಈ ಸಂದರ್ಭ ಕಟ್ಟಡವೊಂದರ ಮೇಲಿದ್ದ ಕುಟ್ಟಪ್ಪ ಅವರು ಬಿದ್ದು ಸಾವನ್ನಪ್ಪಿದ್ದರು. ಆನಂತರ ಈ ಸಂಬAಧ ಅನೇಕರ ಮೇಲೆ ಎಫ್.ಐ.ಆರ್. ದಾಖಲಾಗಿ ತನಿಖೆ ನಡೆಸಿದ ಸಂದರ್ಭ ಒಟ್ಟು ೯ ಮಂದಿ ವಿರುದ್ಧ ನ್ಯಾಯಾಲಯಕ್ಕೆ ನಗರ ಪೊಲೀಸರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಆರೋಪಿಗಳ ಪರ ತಾನು ಸೇರಿದಂತೆ ಸಿ.ಎ. ಪುರುಷೋತ್ತಮ್ ಹಾಗೂ ಎ.ಜಿ. ಗಿರಿ ವಾದ ಮಂಡಿಸಿರುವುದಾಗಿ ತಿಳಿಸಿರುವ ಟಿ.ಹೆಚ್. ಅಬೂಬಕ್ಕರ್ ಈ ಮೇಲಿನ ಮಾಹಿತಿ ನೀಡಿದ್ದಾರೆ.