ಮಡಿಕೇರಿ, ಸೆ. ೨೧ : ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಪರಿಸ್ಥಿತಿಯಿಂದಾಗಿ ಇಡೀ ಜಿಲ್ಲೆಯಾದ್ಯಂತ ಸಮಸ್ಯೆ ಯಾಗಿದೆ. ಈ ಕಾರಣದಿಂದ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಸರಕಾರ ಘೋಷಿಸುವಂತೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಮಹಾಸಭೆಯಲ್ಲಿ ಒತ್ತಾಯಿಸಲಾಗಿದೆ.

ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ೯೮ನೇ ವಾರ್ಷಿಕ ಮಹಾಸಭೆ ಜರುಗಿತು. ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಅವರು ಮಾತನಾಡಿ, ಬ್ಯಾಂಕಿನಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಸಭೆಯ ಮುಂದಿಟ್ಟು, ಬ್ಯಾಂಕು ಪ್ರಗತಿ ಪಥದಲ್ಲಿ ಸಾಗುತ್ತಿರುವು ದಾಗಿ ಸಭೆಯ ಗಮನಕ್ಕೆ ತಂದರು.

ಶೇ. ೧೨ರಷ್ಟು ಡಿವಿಡೆಂಡ್ ಘೋಷಣೆ ಮಾಡಲಾಗಿದ್ದು, ಇದು ಕರ್ನಾಟಕದಲ್ಲೇ ಅತೀ ಹೆಚ್ಚು ಡಿವಿಡೆಂಡ್ ಘೋಷಿಸುವ ಬ್ಯಾಂಕು ಎಂದು ಅಪೆಕ್ಸ್ ಬ್ಯಾಂಕಿನ ಮಹಾಸಭೆ ಯಲ್ಲಿ ಪ್ರಶಂಸೆ ವ್ಯಕ್ತವಾಗಿರುವುದಾಗಿ ಅವರು ತಿಳಿಸಿದರು.

ಆಡಿಟ್ ವರ್ಗೀಕರಣದಲ್ಲಿ ನಿರಂತರ ಎ ತರಗತಿ ಪಡೆಯುತ್ತಿದ್ದು, ೨೦೧೧-೧೨ನೇ ಸಾಲಿನ ಕಾರ್ಯ ಸಾಧನೆಗಾಗಿ ಅಪೆಕ್ಸ್ ಬ್ಯಾಂಕಿನಿAದ ‘ಅತ್ಯುತ್ತಮ ಸಾಧನಾ ಪ್ರಶಸ್ತಿ’ ಪಡೆದಿರುವುದಕ್ಕೆ ಹಾಗೂ ಬ್ಯಾಂಕು ಉತ್ತಮವಾಗಿ ಕಾರ್ಯ ನಿರ್ವಹಿಸು ತ್ತಿರುವುದಕ್ಕೆ ಬ್ಯಾಂಕಿನ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದ ಬಗ್ಗೆ ಸದಸ್ಯರು ಶ್ಲಾಘಿಸಿದರು.

(ಮೊದಲ ಪುಟದಿಂದ) ಅಧ್ಯಕ್ಷ ಗಣಪತಿ ಸ್ವಾಗತಿಸಿ, ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ವಂದಿಸಿದರು.

ಉಪಾಧ್ಯಕ್ಷ ಕೇಟೋಳಿರ ಎಸ್. ಪೂವಯ್ಯ, ನಿರ್ದೇಶಕರಾದ ಬಿ.ಕೆ. ಚಿಣ್ಣಪ್ಪ, ಬಿ.ಡಿ. ಮಂಜುನಾಥ್, ಹೊಟ್ಟೇಂಗಡ ಎಂ. ರಮೇಶ್, ಪಟ್ರಪಂಡ ರಘು ನಾಣಯ್ಯ, ಎಸ್.ಬಿ. ಭರತ್ ಕುಮಾರ್, ಹೊಸೂರು ಜೆ. ಸತೀಶ್ ಕುಮಾರ್, ಕನ್ನಂಡ ಸಂಪತ್, ಕೋಲತಂಡ ಎ. ಸುಬ್ರಮಣಿ, ಅಪ್ಪಚಟ್ಟೋಳಂಡ ಮನು ಮುತ್ತಪ್ಪ, ಕಿಮ್ಮುಡಿರ ಎ. ಜಗದೀಶ್, ಜಲಜಾ ಶೇಖರ್, ಅಪೆಕ್ಸ್ ಬ್ಯಾಂಕ್ ನಾಮಿನಿಯಾದ ಕೆ. ಅರುಣ್ ಭೀಮಯ್ಯ, ವೃತ್ತಿಪರ ನಿರ್ದೇಶಕರಾದ ಎ. ಗೋಪಾಲಕೃಷ್ಣ, ಕೇಕಡ ಎ. ದೇವಯ್ಯ, ಜಿಲ್ಲಾ ಉಪನಿಬಂಧಕರದ ಎಂ.ಎಸ್. ಕೃಷ್ಣಪ್ರಸಾದ್, ಅಪೆಕ್ಸ್ ಬ್ಯಾಂಕ್ ಉಪಪ್ರಧಾನ ವ್ಯವಸ್ಥಾಪಕರಾದ ಎಂ.ಕೆ. ಬೆಳ್ಯಪ್ಪ, ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಮಾಕಾಂತ ಹಾಗೂ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕಿ ಎ.ಎಸ್. ಪಾರ್ವತಿ ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಹಾಗೂ ೨೩೨ ಸದಸ್ಯ ಸಹಕಾರ ಸಂಘಗಳ ಪ್ರತಿನಿಧಿಗಳು ಹಾಜರಿದ್ದರು.