ಮಡಿಕೇರಿ, ಸೆ. ೨೨: ಮುತ್ತಾರ್ಮುಡಿ ಗ್ರಾಮದ ಕಲ್ಲುಮುಟ್ಲು ಗಣೇಶ್ ಮತ್ತು ಕಲ್ಲುಮುಟ್ಲು ಚಂದ್ರಶೇಖರ್ ಅವರ ಗದ್ದೆಗೆ ಎರಡು ಆನೆಗಳು ಇಂದು ಬೆಳಗ್ಗಿನ ಜಾವ ನುಗ್ಗಿ, ತೋಟದಲ್ಲಿ ಕಾಫಿ ಗಿಡ ಸೇರಿದಂತೆ ಇನ್ನಿತರ ಕೃಷಿ ಫಸಲನ್ನು ನಾಶ ಮಾಡಿವೆ. ಪರಿಣಾಮ ೬೦ರಿಂದ ೭೦ ಸಾವಿರದಷ್ಟು ನಷ್ಟ ಸಂಭವಿಸಿದೆ ಎಂದು ಮಾಲೀಕರು ಹೇಳಿಕೊಂಡಿದ್ದಾರೆ.