ಕಣಿವೆ, ಸೆ. ೨೧: ಒಂದು ಕಾಲದಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಅತ್ಯುತ್ತಮ ರೇಷ್ಮೆ ವಲಯವಾಗಿ ಗುರುತಿಸಲ್ಪಟ್ಟ ಕೊಡಗಿನ ರೇಷ್ಮೆ ಕೃಷಿ ಹಾಗೂ ರೇಷ್ಮೆ ಇಲಾಖೆ ಎರಡೂ ಕೂಡ ಇಂದು ಅವಸಾನದ ಹಾದಿಯಲ್ಲಿವೆ.

ಹಾರಂಗಿ ನದಿ ದಂಡೆಯ ತಪ್ಪಲಿನ ಕೂಡಿಗೆ ಕೃಷಿ ಫಾರಂ ಒಳಗೆ ಸುಮಾರು ೨೫ ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿದ್ದ ರೇಷ್ಮೆ ಕೃಷಿ ಸಂಕೀರ್ಣ ಇಂದು ಹೇಳ ಹೆಸರಿಲ್ಲದಂತಿದೆ.

ಅAದರೆ ಕೂಡಿಗೆಯ ರೇಷ್ಮೆ ಫಾರಂ ಒಬ್ಬರು ಜಿಲ್ಲಾ ಉಪನಿರ್ದೇಶಕರು, ಇಬ್ಬರು ಸಹಾಯಕ ನಿರ್ದೇಶಕರು, ಮೂವರು ರೇಷ್ಮೆ ಕೃಷಿ ವಿಸ್ತರಣಾಧಿಕಾರಿಗಳು, ಒಂದಷ್ಟು ಕಚೇರಿ ಸಿಬ್ಬಂದಿಗಳು ಸೇರಿದಂತೆ ಎಲ್ಲಾ ಸೌಕರ್ಯಗಳೊಂದಿಗೆ ರೇಷ್ಮೆ ಬೆಳೆಗಾರರ ಪಾಲಿನ ಆಲಯವಾಗಿದ್ದ ಈ ರೇಷ್ಮೆ ವಲಯ ಇಂದು ಒಬ್ಬರೇ ಒಬ್ಬರು ಸಿಬ್ಬಂದಿ ಕೂಡ ಇಲ್ಲದ ರೀತಿಯಲ್ಲಿ ಹಾಳಾಗಿದೆ.

ಕಚೇರಿಗಳು ಧೂಳು ಹಿಡಿದಿವೆ. ಸಿಬ್ಬಂದಿ ವಸತಿ ನಿಲಯಗಳು ಹೇಳತೀರದಾಗಿವೆ. ರೇಷ್ಮೆ ಮೊಟ್ಟೆ ಸಂಸ್ಕರಣಾ ಘಟಕದ ಕಟ್ಟಡ ನಿರ್ನಾಮವಾಗಿದೆ. ರೇಷ್ಮೆ ಸೊಪ್ಪು ಬೆಳೆಯುತ್ತಿದ್ದ ಸ್ಥಳದಲ್ಲಿ ಕಾಡು ಬೆಳೆದು ನಿಂತಿದೆ.

ರೇಷ್ಮೆ ಕೃಷಿಕರಿಗೆ ಸೂಕ್ತ ತರಬೇತಿಯೊಂದಿಗೆ ಊಟ ಹಾಗೂ ವಸತಿ ಸೌಕರ್ಯ ನೀಡುತ್ತಿದ್ದ ಕಟ್ಟಡಗಳು ಬಳಕೆ ಹಾಗೂ ನಿರ್ವಹಣೆ ಇಲ್ಲದೆ ಹಾಳಾಗಿವೆ.

ನೂರು ಎಕರೆಯಲ್ಲಿ ರೇಷ್ಮೆ ಕೃಷಿ : ಕುಶಾಲನಗರ ತಾಲೂಕಿನ ಕೂಡಿಗೆ ಹಾಗೂ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದಿಗೂ ಸರಿ ಸುಮಾರು ನೂರು ಎಕರೆಗೂ ಹೆಚ್ಚಿನ ರೇಷ್ಮೆ ಬೆಳೆಯುವ ಬೆಳೆಗಾರರಿದ್ದಾರೆ.

ಅಂತಹ ಬೆಳೆಗಾರರಿಗೆ ಸರ್ಕಾರದಿಂದ ಸಿಗುತ್ತಿರುವಂತಹ ಸೌಲಭ್ಯಗಳ ಬಗ್ಗೆ ಅಗತ್ಯ ಮಾಹಿತಿ ನೀಡುವ ಹಾಗೂ ಸೌಕರ್ಯಗಳನ್ನು ಒದಗಿಸುವಂತಹ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೇ ಇಲ್ಲದ ಕಾರಣ ರೇಷ್ಮೆ ಬೆಳೆಗಾರರು ಹೈರಾಣಾಗಿದ್ದಾರೆ.

ಅಂದರೆ ಕಳೆದ ಎರಡು ದಶಕಗಳ ಹಿಂದೆ ಕೂಡಿಗೆ ರೇಷ್ಮೆ ಕೃಷಿ ಫಾರಂ ನ ಅಧಿಕಾರಿಗಳ ಮಾತು ಕೇಳಿ ತಮ್ಮ ಜಮೀನುಗಳನ್ನು ರೇಷ್ಮೆ ತೋಟಗಳಾಗಿ ಪರಿವರ್ತಿಸಿ ಸಾಲ ಸೋಲ ಮಾಡಿ ರೇಷ್ಮೆ ಬೆಳೆಯುವ ಮನೆಗಳನ್ನು ಕಟ್ಟಿಕೊಂಡಿರುವ ಬೆಳೆಗಾರರು ಇದೀಗ ಸಿಬ್ಬಂದಿ ಕೊರತೆಯಿಂದಾಗಿ ದಿಕ್ಕು ತೋಚದಾಗಿದ್ದಾರೆ.

ಇಲಾಖೆಯಿಂದ ದೊರಕುವ ಆಧುನಿಕ ಬೆಳೆ ಪದ್ಧತಿಯ ಮಾಹಿತಿ, ಸಹಾಯ ಧನದ ಮಾಹಿತಿ ಮತ್ತಿತರ ಸೌಲಭ್ಯಗಳನ್ನು ಒದಗಿಸುವವರೇ ಇಲ್ಲದ ಕಾರಣ ರೇಷ್ಮೆ ಕೃಷಿಯನ್ನು ಕೈಬಿಡುವ ಚಿಂತನೆಯಲ್ಲಿದ್ದಾರೆ.

ಕೃಷಿಕರಿಗೆ ವರದಾನವಾದ ರೇಷ್ಮೆ : ಇತರ ಬೆಳೆಗಳಿಗೆ ಹೋಲಿಸಿದಲ್ಲಿ ಕೃಷಿಕರಿಗೆ ಈ ಆಧುನಿಕ ಪದ್ಧತಿಯ ರೇಷ್ಮೆ ಬೇಸಾಯ ರೈತರಿಗೆ ವರದಾನವಾಗಿದೆ.

(ಮೊದಲ ಪುಟದಿಂದ) ವರ್ಷಕ್ಕೆ ನಾಲ್ಕರಿಂದ ಐದು ಬೆಳೆಗಳನ್ನು ತೆಗೆಯುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು ಎಂದು ಪ್ರಗತಿ ಪರ ರೇಷ್ಮೆ ಕೃಷಿಕರಾದ ಚಿಕ್ಕತ್ತೂರು ಗ್ರಾಮದ ಡಿ.ಎಸ್.ಗಣೇಶ, ವೈ.ಸಿ.ಕೃಷ್ಣ ಮತ್ತು ಚಿಕ್ಕಹೊಸೂರಿನ ರೈತ ನಟರಾಜು ಹಾಗೂ ಸೋಮಶೇಖರ್ ಹೇಳುತ್ತಾರೆ.

ಇತರ ವಾಣಿಜ್ಯ ಬೆಳೆಗಳಿಗೆ ಹೋಲಿಸಿದರೆ ರೇಷ್ಮೆ ಕೃಷಿ ಕಡಿಮೆ ಖರ್ಚು ಹಾಗೂ ಕಡಿಮೆ ಸಮಯದಲ್ಲಿ ಹೆಚ್ಚು ಆದಾಯ ಗಳಿಸಬಹುದಾದ ಕೃಷಿಯಾಗಿದೆ. ಆದರೆ ಕಳೆದ ಎರಡು ದಶಕಗಳ ಹಿಂದೆ ಇಲಾಖೆಯಿಂದ ರೈತರಿಗೆ ಸಿಗುತ್ತಿರುವ ಪ್ರೋತ್ಸಾಹ ಹಾಗೂ ಸೌಕರ್ಯಗಳು ಇದೀಗ ದೊರಕುತ್ತಿಲ್ಲ ಎಂಬುದು ಕೃಷಿಕರ ಅಳಲಾಗಿದೆ.

ರೈತರ ತರಬೇತಿ ಕೇಂದ್ರವಾಗಿತ್ತು : ಕೂಡಿಗೆ ಕೃಷಿ ಫಾರಂ ಒಳಗಿರುವ ರೇಷ್ಮೆ ಕೃಷಿ ಕ್ಷೇತ್ರ ಕೊಡಗು ಸೇರಿದಂತೆ ಸುತ್ತಲಿನ ಹಲವು ಜಿಲ್ಲೆಗಳ ಕೃಷಿಕರ ಪಾಲಿಗೆ ಕಾಮಧೇನು ಆಗಿತ್ತು.

ರೇಷ್ಮೆ ಬೆಳೆಯುವ ರೈತರಿಗೆ ಇಲ್ಲಿ ಆಗಿಂದಾಗ್ಗೆ ಅಗತ್ಯ ತರಬೇತಿ ಹಾಗೂ ಸೂಕ್ತ ಮಾರ್ಗದರ್ಶನಗಳೊಂದಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿತ್ತು.

ತರಬೇತಿ ಕಾರ್ಯಾಗಾರಗಳನ್ನು ನಡೆಸುವಂತೆ ರೇಷ್ಮೆ ಕೃಷಿಕರಿಗೆ ಇಲ್ಲಿ ಊಟ ಹಾಗೂ ವಸತಿ ಸೌಲಭ್ಯವನ್ನು ಒದಗಿಸಲಾಗುತ್ತಿತ್ತು. ರೈತರ ಮನೆ ಬಾಗಿಲಿಗೆ ರೇಷ್ಮೆ ಇಲಾಖೆ ಅಧಿಕಾರಿಗಳು ಖುದ್ದು ಬಂದು ರೇಷ್ಮೆ ಕೃಷಿಗೆ ರೈತರನ್ನು ಪ್ರಚೋದಿಸುವ ಮೂಲಕ ಆರ್ಥಿಕವಾಗಿ ಸದೃಢರನ್ನಾಗಿಸುವ ಕೆಲಸವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರೇಷ್ಮೆ ಕೃಷಿಕರ ಅನುಕೂಲಕ್ಕಾಗಿ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿ ಕೋಟ್ಯಂತರ ರೂ.ಗಳ ಹಣ ವ್ಯಯಿಸಿ ಸುಸಜ್ಜಿತ ರೇಷ್ಮೆ ಮಾರುಕಟ್ಟೆಯನ್ನೂ ಕೂಡ ತೆರೆಯಲಾಗಿತ್ತು. ನಂತರ ಜಿಲ್ಲೆಗೆ ಬಂದ ಇಲಾಖೆಯ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ, ಸರ್ಕಾರದ ನಿರ್ಲಕ್ಷö್ಯ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಬೇಜವಬ್ದಾರಿಯಿಂದಾಗಿ ರೇಷ್ಮೆ ಕೃಷಿ ದಿನೇ ದಿನೇ ಅವಸಾನದ ಹಾದಿ ಹಿಡಿಯಿತು.

ರೇಷ್ಮೆ ಬೆಳೆಗಾರರಿಗೆ ನಿರ್ಮಿಸಿದ ಕೂಡ್ಲೂರು ರೇಷ್ಮೆ ಗೂಡು ಮಾರುಕಟ್ಟೆ ಇಂದು ಕುಶಾಲನಗರದ ಗ್ರಾಮಾಂತರ ಪೊಲೀಸ್ ಠಾಣೆಯಾಗಿದೆ.

ರೇಷ್ಮೆ ಬೆಳೆಯುತ್ತಿದ್ದ ಇಲಾಖೆಯ ವಿಶಾಲ ಜಾಗ ಮೊರಾರ್ಜಿ ಶಾಲೆಯಾಗಿದೆ. ಅಳಿದುಳಿದ ಜಾಗ ಬೇರೆ ಬೇರೆ ಇಲಾಖೆಗಳ ಪಾಲಾಗುತ್ತಿದೆ. ಒಟ್ಟಾರೆ ಚಿನ್ನ ಬೆಳೆಯುತ್ತಿದ್ದ ರೇಷ್ಮೆ ಬೆಳೆಗಾರರ ಪಾಡು ಹೇಳತೀರದ್ದಾಗಿದೆ.

ಕ್ಷೇತ್ರದ ಶಾಸಕರಾದ ಡಾ.ಮಂಥರ್‌ಗೌಡ ಅವರು ಜಿಲ್ಲಾಡಳಿತ ನಿರ್ಲಕ್ಷಿತ ಕೂಡಿಗೆಯ ಈ ರೇಷ್ಮೆ ಕೃಷಿ ಫಾರಂಗೆ ಒಮ್ಮೆ ಭೇಟಿ ಕೊಟ್ಟು ರೇಷ್ಮೆ ಬೆಳೆಗಾರರ ನೋವು ನಲಿವುಗಳಿಗೆ ಸ್ಪಂದಿಸುವAತೆ ರೇಷ್ಮೆ ಕೃಷಿಕರು ಮನವಿ ಮಾಡಿದ್ದಾರೆ.