ಪೊನ್ನಂಪೇಟೆ, ಸೆ. ೨೨: ವಿಶ್ವ ಶಿಟೋರಿಯೋ ಕರಾಟೆ ಮಂಡಳಿಯ ನೂತನ ನಿರ್ದೇಶಕರಾಗಿ ಅಖಿಲ ಭಾರತ ಶಿಟೋರಿಯೋ ಕರಾಟೆ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಭಾರತದ ಹಿರಿಯ ಕರಾಟೆಪಟು ಕೊಡಗಿನ ಚೆಪ್ಪುಡಿರ ಎಸ್. ಅರುಣ್ ಮಾಚಯ್ಯ ಆಯ್ಕೆಯಾಗಿದ್ದಾರೆ.
ಇಂಡೋನೇಷ್ಯಾದಲ್ಲಿ ನಡೆಯು ತ್ತಿರುವ ೧೦ನೇ ಅಂತರಾಷ್ಟಿçÃಯ ಶಿಟೋರಿಯೋ ಕರಾಟೆ ಚಾಂಪಿಯನ್ ಶಿಪ್ನ ಅಂಗವಾಗಿ ಆಯೋಜಿಸ ಲಾಗಿದ್ದ ವಿಶ್ವ ಶಿಟೋರಿಯೋ ಕರಾಟೆ ಮಂಡಳಿಯ ಚುನಾವಣಾ ಪ್ರಕ್ರಿಯೆ ಸಭೆಯಲ್ಲಿ ತೆರಳಿರುವ ಅರುಣ್ ಮಾಚಯ್ಯ ಅವರನ್ನು ಏಷ್ಯಾ ಮತ್ತು ಪೆಸಿಫಿಕ್ ಖಂಡದ ನಿರ್ದೇಶಕರಾಗಿ ಅವಿರೋಧವಾಗಿ ನೇಮಕ ಗೊಳಿಸಲಾಗಿದೆ ಎಂದು ವಿಶ್ವ ಶಿಟೋರಿಯೋ ಕರಾಟೆ ಮಂಡಳಿಯ ಅಧ್ಯಕ್ಷರಾಗಿರುವ ಕೆನ್ ಜೋ ಈವಾಟ ಪ್ರಕಟಿಸಿದ್ದಾರೆ.
ಅರುಣ್ ಮಾಚಯ್ಯ ಅವರು ಮುಂದಿನ ಮೂರು ವರ್ಷಗಳ ಕಾಲ ವಿಶ್ವ ಶಿಟೋರಿಯೋ ಕರಾಟೆ ಮಂಡಳಿಯ ಸ್ಟಾö್ಯಂಡಿAಗ್ ನಿರ್ದೇಶಕರಾಗಿ ವಿಶ್ವಮಟ್ಟದಲ್ಲಿ ಏಷ್ಯಾ ಮತ್ತು ಪೆಸಿಫಿಕ್ ಖಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಹಿಂದೆಯೂ ಇವರು ೧೯೯೬ರಿಂದ ೨೦೦೨ರವರೆಗೆ ಜಾಗತಿಕ ಮಟ್ಟದಲ್ಲಿ ಇದೇ ಹುದ್ದೆಯನ್ನು ಅಲಂಕರಿಸಿದ್ದರು. ಇದೀಗ ೨ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಅಲ್ಲದೆ ವಿಶ್ವ ಕರಾಟೆ ಮಂಡಳಿಯಲ್ಲಿ ೨ನೇ ಬಾರಿಗೆ ನಿರ್ದೇಶಕರಾಗಿರುವ ಭಾರತದ ಮೊದಲ ಕರಾಟೆಪಟು ಎಂಬ ಹೆಗ್ಗಳಿಕೆಗೂ ಅರುಣ್ ಮಾಚಯ್ಯ ಪಾತ್ರರಾಗಿದ್ದಾರೆ.