ಮಡಿಕೇರಿ: ಮಡಿಕೇರಿ ಸಮೀಪದ ಮೇಕೇರಿಯ ಶ್ರೀ ಗೌರಿ ಶಂಕರ ದೇವಾಲಯದಲ್ಲಿ ಶ್ರೀ ಗಣೇಶ ಸೇವಾ ಸಮಿತಿಯ ಆಶ್ರಯದಲ್ಲಿ ೩೧ನೇ ವರ್ಷದ ಅದ್ಧೂರಿಯ ಗೌರಿ ಗಣೇಶೋತ್ಸವ ಶ್ರದ್ಧಾ ಭಕ್ತಿಯೊಂದಿಗೆ ವೈಶಿಷ್ಟö್ಯ ಪೂರ್ಣವಾಗಿ ನೆರವೇರಿತು.

ಶ್ರೀ ಗೌರಿ ಶಂಕರ ದೇವಾಲಯದಲ್ಲಿ ಮಂಗಳವಾರ ಬೆಳಿಗ್ಗಿನಿಂದಲೇ ವಿಶೇಷ ಪೂಜಾ ವಿಧಿಗಳು ನೆರವೇರಿದವು. ಬೆಳಗ್ಗೆ ೯ ಗಂಟೆಯಿAದ ಗಣಪತಿ ಹೋಮ, ಶ್ರೀ ಗೌರಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನೆರವೇರಿತು. ಬಳಿಕ ನಡೆದ ಧಾರ್ಮಿಕ ಪ್ರವಚನದಲ್ಲಿ ಮಾತನಾಡಿದ ಸೇವಾ ಭಾರತಿಯ ಕೊಡಗು ಜಿಲ್ಲಾಧ್ಯಕ್ಷರಾದ ಟಿ.ಸಿ ಚಂದ್ರನ್ ಅವರು, ಇಂದಿನ ಆಧುನಿಕ ಯುಗದಲ್ಲಿ ಸಂಸ್ಕಾರಯುತ ಜೀವನ ಮರೆಯಾಗುತ್ತಿದ್ದು ಮಕ್ಕಳು ದುಶ್ಚಟಗಳಿಗೆ ಒಳಗಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮನೆಯಿಂದಲೇ ಮಕ್ಕಳಿಗೆ ಮೌಲ್ಯಯುತ ಜೀವನ ಸಿಗುವಲ್ಲಿ ಪೋಷಕರು ಶ್ರಮ ವಹಿಸಬೇಕೆಂದು ಕರೆ ನೀಡಿದರು.

ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗ್ರಾಮದ ೧೬ ಮಂದಿ ಸಾಧಕರನ್ನು ಶ್ರೀ ಗಣೇಶ ಸೇವಾ ಸಮಿತಿಯ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಮೇಕೇರಿಯ ಗೌರಿ ಶಂಕರ ದೇವಾಲಯದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಕೆ. ಪೂರ್ಣಯ್ಯ, ಹಾಕತ್ತೂರು ವಿ.ಎಸ್.ಎಸ್.ಎನ್‌ನ ನೂತನ ನಿರ್ದೇಶಕರಾಗಿ ಚುನಾಯಿತರಾದ ಚೋಂಡಿರ ಜಿ. ಚಂಗಪ್ಪ, ತೋರೇರ ಅಯ್ಯಪ್ಪ, ಲೋಕೇಶ್ ಟಿ.ವಿ. ದೇವಾಲಯದ ಅರ್ಚಕ ಕೃಷ್ಣ ಭಟ್, ಗಣೇಶ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷ ಟಿ.ಕೆ ದಿವಾಕರ್, ಸ್ಥಾಪಕ ಕಾರ್ಯದರ್ಶಿಗಳು ಹಾಗೂ ಗುತ್ತಿಗೆದಾರರಾದ ಪಿ.ಕೆ ಬಾಲಕೃಷ್ಣ, ೩ ಬಾರಿ ಕೊಡಗು ಜಿಲ್ಲಾ ಚುನಾವಣಾ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ ಸಿ.ಕೆ ಈಶ್ವರಿ, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಕ್ತದಾನಿ ರಾಮಪ್ಪ, ರ‍್ಯಾಲಿ ಪಟು ಅಬಿನ್ ರೈ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೆ.ಡಿ. ಇಂಪನ, ಲಿಪಿಕಾ ಕಾವೇರಮ್ಮ, ಪಿ.ಎ ದೀಕ್ಷಾ, ಕೆ.ಎಸ್ ಆರ್ಯ, ಎಸ್. ಮೇಘಾ ಹಾಗೂ ಟಿ.ಕೆ.ಯುಕ್ತಾ ಅವರುಗಳು ಸನ್ಮಾನಕ್ಕೆ ಭಾಜನರಾದರು.

ಬಳಿಕ ಮಧ್ಯಾಹ್ನ ಶ್ರೀ ಗೌರಿ ಗಣೇಶ ಮೂರ್ತಿಗೆ ಮಹಾಮಂಗಳಾರತಿ ನಡೆದು ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನದ ನಂತರ ಶ್ರೀ ಗೌರಿ ಗಣೇಶ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಮಂಗಳೂರಿನ ಖ್ಯಾತ ಧ್ವನಿವರ್ದಕ ತಂಡದ ಸೌಂಡ್ಸ್ ಸಿಸ್ಟಮ್‌ನೊಂದಿಗೆ ಮೆರವಣಿಗೆ ಸಾಗಿ ಸುಭಾಶ್ ನಗರದ ನದಿಯಲ್ಲಿ ಗೌರಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಚೆಯ್ಯಂಡಾಣೆ: ಸ್ಥಳೀಯ ಗಣೇಶ ಸೇವಾ ಸಮಿತಿಯ ವತಿಯಿಂದ ಲಕ್ಷ್ಮಿ ಮಹಿಳಾ ಸಮಾಜದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುವ ಶ್ರೀ ಗೌರಿ ಗಣೇಶೋತ್ಸವ ವಿಜೃಂಭಣೆ ಯಿಂದ ನಡೆಯಿತು.

ಬೆಳಿಗ್ಗೆ ೬ ಗಂಟೆಗೆ ಶ್ರೀ ಗಣಪತಿ ಹೋಮ ನಂತರ ಗೌರಿ ಮತ್ತು ಮಹಾ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ನೆರದಿದ್ದ ಭಕ್ತದಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು.

ಪೂಜಾ ಕಾರ್ಯಗಳನ್ನು ಅರ್ಚಕರಾದ ಪೃಥ್ವಿ ಅವರು ನೆರವೇರಿಸಿದರು. ಮಧ್ಯಾಹ್ನದ ನಂತರ ಮಹಾಗಣಪತಿ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಕರಡ ಹೊಳೆಯಲ್ಲಿ ವಿಸರ್ಜಿಸಲಾಯಿತು.*ಗೋಣಿಕೊಪ್ಪ: ಶ್ರೀ ಉಮಾಮಹೇಶ್ವರಿ ದೇವಸ್ಥಾನದ ವತಿಯಿಂದ ಗಣೇಶಚತುರ್ಥಿ ಪ್ರಯುಕ್ತ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯಿತು. ಬೆಳಿಗ್ಗೆ ಸಾಮೂಹಿಕ ಅಷ್ಠೋತ್ತರ ಗಣಹೋಮದ ನಂತರ ೧೧.೩೦ಕ್ಕೆ ತುಲಾ ಲಗ್ನದಲ್ಲಿ ಮೂರ್ತಿ ಪ್ರತಿಷ್ಠೆ ಯನ್ನುಅರ್ಚಕ ವೃಂದ ನೆರೆವೇರಿಸಿತು.

ಸೋಮವಾರ ಸ್ವರ್ಣಗೌರಿಯ ಪ್ರತಿಷ್ಠಾಪನೆ ಮಾಡಲಾಯಿತು. ತಾ. ೨೧ರಂದು, ರಾತ್ರಿ ೮ ಗಂಟೆಗೆ ಹೂವಿನ ಮಂಟಪದಲ್ಲಿ ಗೌರಿಗಣೇಶ ಮೆರವಣಿಗೆ ನಡೆಸಿ ಸೀಗೆತೋಡುವಿನಲ್ಲಿರುವ ಚಿತ್ರ ರಮೇಶ್ ಅವರ ಕೆರೆಯಲ್ಲಿ ಗಣೇಶ ವಿಸರ್ಜನೆ ನಡೆಯಲಿದೆ.

ಪ್ರತಿಷ್ಠಾಪನ ದಿನದಿಂದ ವಿಸರ್ಜನಾ ದಿನದವರೆಗೆ ಮಧ್ಯಾಹ್ನ ಮತ್ತು ಸಂಜೆ ಗೌರಿ ಗಣೇಶನಿಗೆ ವಿಶೇಷ ಪೂಜೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ ಎಂದು ಮ್ಯಾನೇಜಿಂಗ್ ಟ್ರಸ್ಟಿ ಜಪ್ಪೆಕೊಡಿ ರಾಜ ಉತ್ತಪ್ಪ ಮಾಹಿತಿ ನೀಡಿದ್ದಾರೆ. ಈ ಸಂದರ್ಭ ಕುಲ್ಲಚಂಡ ಪ್ರಮೋದ್ ಗಣಪತಿ, ಶೋಭಿತ್ ಪಿ.ವಿ., ಕೊಪ್ಪಿರ ಸನ್ನಿ ಸೋಮಯ್ಯ, ಸುರೇಶ್, ವ್ಯವಸ್ಥಾಪಕ ಮಧು ಹಾಜರಿದ್ದರು.ವೀರಾಜಪೇಟೆ: ವೀರಾಜಪೇಟೆಯ ಪಂಜರುಪೇಟೆಯ ವಿನಾಯಕ ಸೇವಾ ಸಮಿತಿ ವತಿಯಿಂದ ೨೯ ನೇ ವರ್ಷದ ಗೌರಿ ಗಣೇಶೋತ್ಸವವನ್ನು ಆಚರಿಸಲಾಯಿತು.

ಈ ಸಂದರ್ಭ ಗಣಪತಿ, ಗೌರಿ ಮೂರ್ತಿಗಳ ಪ್ರತಿಷ್ಠಾಪನೆ, ಗಣಪತಿ ಹೋಮ, ಮಹಾಪೂಜೆ ನೆರವೇರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ವಿತರಣೆ ಹಾಗೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ವಿನಾಯಕ ಸಮಿತಿಯ ಎಲ್ಲ ಸದಸ್ಯರುಗಳು, ಭಕ್ತಾದಿಗಳು ಪಾಲ್ಗೊಂಡಿದ್ದರು.ಗುಡ್ಡೆಹೊಸೂರು: ಇಲ್ಲಿನ ಸಮುದಾಯಭವನದಲ್ಲಿ ೨೯ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭ ವಿನಾಯಕ ಸೇವಾ ಸಮಿತಿಯ ಸದಸ್ಯರು ಹಾಜರಿದ್ದರು. ಅರ್ಚಕ ರಾಜಪ್ಪ ಅವರು ಪೂಜಾಕಾರ್ಯ ನಡೆಸಿದರು. ವೀರಾಜಪೇಟೆ: ವೀರಾಜಪೇಟೆ ಪಟ್ಟಣದ ಮೀನುಪೇಟೆಯ ಶ್ರೀ ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿಯ ವತಿಯಿಂದ ಗೌರಿ ಗಣೇಶೋತ್ಸವವನ್ನು ಆಚರಿಸಲಾಯಿತು.

ಗಣಪತಿ, ಗೌರಿ ಮೂರ್ತಿಗಳ ಪ್ರತಿಷ್ಠಾಪನೆ, ಗಣಪತಿ ಹೋಮ, ವಿಶೇಷ ಪೂಜೆಯನ್ನು ನಡೆಸಲಾಯಿತು. ಅರ್ಚಕರಾದ ವೇಣುಗೋಪಾಲ್ ಭಟ್ ಮಹಾಪೂಜೆಯನ್ನು ನೆರವೇರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಪ್ರಸಾದ ವಿತರಣೆ ಹಾಗೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ವಿಶ್ವ ವಿನಾಯಕ ಸಮಿತಿಯ ಸದಸ್ಯರುಗಳು, ಭಕ್ತಾದಿಗಳು ಉಪಸ್ಥಿತರಿದ್ದರು.ಕರಿಕೆ ಹಳೆ ವಿದ್ಯಾರ್ಥಿ ಸಂಘ

ಕರಿಕೆ: ಇಲ್ಲಿನ ಚೆತ್ತುಕಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ೪೩ನೇ ವರ್ಷದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸ ಲಾಯಿತು. ಬೆಳಿಗ್ಗೆ ಆರು ಗಂಟೆಗೆ ಗಣಹೋಮ ದಿಂದ ಆರಂಭ ಗೊಂಡು ನಂತರ ವಿಘ್ನ ವಿನಾಯಕ ದೇವರ ಪ್ರತಿಷ್ಠಾಪನೆ, ಭಜನಾ ಕಾರ್ಯಕ್ರಮ, ಮಹಾಪೂಜೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ ಜರುಗಿತು. ದಾನಿಗಳ ನೆರವಿನಿಂದ ಅನ್ನದಾನ ಏರ್ಪಡಿಸಲಾಗಿತ್ತು. ನಂತರ ಸಾರ್ವಜನಿಕ ಮೆರವಣಿಗೆಯಲ್ಲಿ ತೆರಳಿ ಭಕ್ತಾದಿಗಳಿಂದ ಅಲ್ಲಲ್ಲಿ ಹಣ್ಣುಕಾಯಿ ಸೇವೆಯನ್ನು ಸ್ವೀಕರಿಸಿ ಅಂತಿಮವಾಗಿ ಚಂದ್ರಗಿರಿ ನದಿಯಲ್ಲಿ ಗಣಪನ ವಿಗ್ರಹ ವಿಸರ್ಜನೆ ಮಾಡಲಾಯಿತು.ಕರಿಕೆ ಹಳೆ ವಿದ್ಯಾರ್ಥಿ ಸಂಘ

ಕರಿಕೆ: ಇಲ್ಲಿನ ಚೆತ್ತುಕಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ೪೩ನೇ ವರ್ಷದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸ ಲಾಯಿತು. ಬೆಳಿಗ್ಗೆ ಆರು ಗಂಟೆಗೆ ಗಣಹೋಮ ದಿಂದ ಆರಂಭ ಗೊಂಡು ನಂತರ ವಿಘ್ನ ವಿನಾಯಕ ದೇವರ ಪ್ರತಿಷ್ಠಾಪನೆ, ಭಜನಾ ಕಾರ್ಯಕ್ರಮ, ಮಹಾಪೂಜೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ ಜರುಗಿತು. ದಾನಿಗಳ ನೆರವಿನಿಂದ ಅನ್ನದಾನ ಏರ್ಪಡಿಸಲಾಗಿತ್ತು. ನಂತರ ಸಾರ್ವಜನಿಕ ಮೆರವಣಿಗೆಯಲ್ಲಿ ತೆರಳಿ ಭಕ್ತಾದಿಗಳಿಂದ ಅಲ್ಲಲ್ಲಿ ಹಣ್ಣುಕಾಯಿ ಸೇವೆಯನ್ನು ಸ್ವೀಕರಿಸಿ ಅಂತಿಮವಾಗಿ ಚಂದ್ರಗಿರಿ ನದಿಯಲ್ಲಿ ಗಣಪನ ವಿಗ್ರಹ ವಿಸರ್ಜನೆ ಮಾಡಲಾಯಿತು.ಕರಿಕೆ ಹಳೆ ವಿದ್ಯಾರ್ಥಿ ಸಂಘ

ಕರಿಕೆ: ಇಲ್ಲಿನ ಚೆತ್ತುಕಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ೪೩ನೇ ವರ್ಷದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸ ಲಾಯಿತು. ಬೆಳಿಗ್ಗೆ ಆರು ಗಂಟೆಗೆ ಗಣಹೋಮ ದಿಂದ ಆರಂಭ ಗೊಂಡು ನಂತರ ವಿಘ್ನ ವಿನಾಯಕ ದೇವರ ಪ್ರತಿಷ್ಠಾಪನೆ, ಭಜನಾ ಕಾರ್ಯಕ್ರಮ, ಮಹಾಪೂಜೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ ಜರುಗಿತು. ದಾನಿಗಳ ನೆರವಿನಿಂದ ಅನ್ನದಾನ ಏರ್ಪಡಿಸಲಾಗಿತ್ತು. ನಂತರ ಸಾರ್ವಜನಿಕ ಮೆರವಣಿಗೆಯಲ್ಲಿ ತೆರಳಿ ಭಕ್ತಾದಿಗಳಿಂದ ಅಲ್ಲಲ್ಲಿ ಹಣ್ಣುಕಾಯಿ ಸೇವೆಯನ್ನು ಸ್ವೀಕರಿಸಿ ಅಂತಿಮವಾಗಿ ಚಂದ್ರಗಿರಿ ನದಿಯಲ್ಲಿ ಗಣಪನ ವಿಗ್ರಹ ವಿಸರ್ಜನೆ ಮಾಡಲಾಯಿತು.ಮಡಿಕೇರಿ : ಗೋಳಿಕಟ್ಟೆ ಹೊಸ ಬಡಾವಣೆಯ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ೨ನೇ ವರ್ಷದ ಗೌರಿ ಗಣೇಶೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮುಂಜಾನೆ ಗಣ ಹೋಮ ನೆರವೇರಿತು. ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಂತರ ವಿಶೇಷ ಪೂಜೆ ಜರುಗಿತು. ಬಳಿಕ ಪ್ರಸಾದ ವಿತರಣೆ ಹಾಗೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.

ನಂತರ ಗಣೇಶ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಕೊಂಡೊಯ್ದು ಗಬ್ಬಲಡ್ಕ ಬಾಣೆಯ ಹೊಳೆಯಲ್ಲಿ ವಿಸರ್ಜಿಸಲಾಯಿತು. ಈ ಸಂದರ್ಭ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸದಸ್ಯರು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ಹಾಜರಿದ್ದರು.

ಶನಿವಾರಸಂತೆ: ಪಟ್ಟಣದ ಬ್ರೆöÊಟ್ ಅಕಾಡೆಮಿ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣೇಶೋತ್ಸವವನ್ನು ಆಚರಿಸಿ ಸಂಭ್ರಮಿಸಿದರು.

ವಿದ್ಯಾರ್ಥಿಗಳು ಜೇಡಿ ಮಣ್ಣು, ಗೋಧಿ ಹಾಗೂ ಮೈದಾ ಹಿಟ್ಟು ಬಳಸಿ ಪರಿಸರ ಸ್ನೇಹಿ ಗಣಪತಿ ಮೂರ್ತಿ ತಯಾರಿಸಿದರು. ಹೂವುಗಳಿಂದ ಅಲಂಕರಿಸಿ ಶ್ರದ್ಧಾಭಕ್ತಿಯಿಂದ ಪೂಜಿಸಿದರು. ಸಿಹಿ ಹಂಚಿ, ಶುಭಾಶಯ ವಿನಿಮಯ ಮಾಡಿಕೊಂಡರು. ವಿದ್ಯಾಸಂಸ್ಥೆ ಕಾರ್ಯದರ್ಶಿ ಹೇಮಾ ಪರಮೇಶ್ ಹಾಗೂ ಮುಖ್ಯಶಿಕ್ಷಕಿ ಚೈತ್ರಾ ಮಾತನಾಡಿ, ಗೌರಿ-ಗಣೇಶೋತ್ಸವ ವಿಶೇಷತೆ, ಹಬ್ಬಾಚರಣೆ, ಪರಿಸರ ಮಾಲಿನ್ಯ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿಯರು, ಸಿಬ್ಬಂದಿ ಹಾಜರಿದ್ದರು.

ಶನಿವಾರಸಂತೆ: ಪಟ್ಟಣದ ಬ್ರೆöÊಟ್ ಅಕಾಡೆಮಿ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣೇಶೋತ್ಸವವನ್ನು ಆಚರಿಸಿ ಸಂಭ್ರಮಿಸಿದರು.

ವಿದ್ಯಾರ್ಥಿಗಳು ಜೇಡಿ ಮಣ್ಣು, ಗೋಧಿ ಹಾಗೂ ಮೈದಾ ಹಿಟ್ಟು ಬಳಸಿ ಪರಿಸರ ಸ್ನೇಹಿ ಗಣಪತಿ ಮೂರ್ತಿ ತಯಾರಿಸಿದರು. ಹೂವುಗಳಿಂದ ಅಲಂಕರಿಸಿ ಶ್ರದ್ಧಾಭಕ್ತಿಯಿಂದ ಪೂಜಿಸಿದರು. ಸಿಹಿ ಹಂಚಿ, ಶುಭಾಶಯ ವಿನಿಮಯ ಮಾಡಿಕೊಂಡರು. ವಿದ್ಯಾಸಂಸ್ಥೆ ಕಾರ್ಯದರ್ಶಿ ಹೇಮಾ ಪರಮೇಶ್ ಹಾಗೂ ಮುಖ್ಯಶಿಕ್ಷಕಿ ಚೈತ್ರಾ ಮಾತನಾಡಿ, ಗೌರಿ-ಗಣೇಶೋತ್ಸವ ವಿಶೇಷತೆ, ಹಬ್ಬಾಚರಣೆ, ಪರಿಸರ ಮಾಲಿನ್ಯ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿಯರು, ಸಿಬ್ಬಂದಿ ಹಾಜರಿದ್ದರು.

ಗೋಣಿಕೊಪ್ಪಲು: ಗ್ರಾಮಸ್ಥರೆಲ್ಲರೂ ಒಂದೆಡೆ ಒಗ್ಗೂಡುವ ಮೂಲಕ ಗೌರಿ ಗಣೇಶ ಹಬ್ಬವನ್ನು ಆಚರಿಸಿದರು. ಗೋಣಿಕೊಪ್ಪ ಸಮೀಪದ ಕಾಳಪ್ಪ ಕಾಲೋನಿಯ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಮೊದಲ ಬಾರಿಗೆ ಸ್ವರ್ಣ ಗೌರಿ ಹಾಗೂ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯ ನಡೆಸಿದರು.

ಸಂಘದ ಪದಾಧಿಕಾರಿಗಳು ಮುಂಜಾನೆಯ ವೇಳೆ ಸಾಂಪ್ರದಾಯಿಕವಾಗಿ ಗಣೇಶ ಹಾಗೂ ಗೌರಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ವಿಶೇಷ ಪೂಜೆ ನಡೆಸಿದರು.

ಸಮಿತಿಯ ಅಧ್ಯಕ್ಷ ಮಧು ಪ್ರಧಾನ ಕಾರ್ಯದರ್ಶಿ ಸುಜಿತ ನಾಗೇಂದ್ರ, ಸಂಚಾಲಕರಾದ ಸಿಂಗಿ ಸತೀಶ್, ಉಪಾಧ್ಯಕ್ಷರಾದ ಪುರುಷೋತ್ತಮ, ಖಜಾಂಚಿಯಾದ ನಿರ್ಮಲಾ, ಸಹಕಾರ್ಯದರ್ಶಿಯಾದ ಸವಿತಾ ಮಂಜು, ನಿರ್ದೇಶಕರುಗಳಾದ ಸುಮಿತಾ, ರಮ್ಯಾ, ಆಶಾ, ಮಹಾದೇವ್, ಪ್ರಸಾದ್ ರಾವ್ ಹಾಗೂ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.ಗೋಣಿಕೊಪ್ಪಲು: ಗ್ರಾಮಸ್ಥರೆಲ್ಲರೂ ಒಂದೆಡೆ ಒಗ್ಗೂಡುವ ಮೂಲಕ ಗೌರಿ ಗಣೇಶ ಹಬ್ಬವನ್ನು ಆಚರಿಸಿದರು. ಗೋಣಿಕೊಪ್ಪ ಸಮೀಪದ ಕಾಳಪ್ಪ ಕಾಲೋನಿಯ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಮೊದಲ ಬಾರಿಗೆ ಸ್ವರ್ಣ ಗೌರಿ ಹಾಗೂ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯ ನಡೆಸಿದರು.

ಸಂಘದ ಪದಾಧಿಕಾರಿಗಳು ಮುಂಜಾನೆಯ ವೇಳೆ ಸಾಂಪ್ರದಾಯಿಕವಾಗಿ ಗಣೇಶ ಹಾಗೂ ಗೌರಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ವಿಶೇಷ ಪೂಜೆ ನಡೆಸಿದರು.

ಸಮಿತಿಯ ಅಧ್ಯಕ್ಷ ಮಧು ಪ್ರಧಾನ ಕಾರ್ಯದರ್ಶಿ ಸುಜಿತ ನಾಗೇಂದ್ರ, ಸಂಚಾಲಕರಾದ ಸಿಂಗಿ ಸತೀಶ್, ಉಪಾಧ್ಯಕ್ಷರಾದ ಪುರುಷೋತ್ತಮ, ಖಜಾಂಚಿಯಾದ ನಿರ್ಮಲಾ, ಸಹಕಾರ್ಯದರ್ಶಿಯಾದ ಸವಿತಾ ಮಂಜು, ನಿರ್ದೇಶಕರುಗಳಾದ ಸುಮಿತಾ, ರಮ್ಯಾ, ಆಶಾ, ಮಹಾದೇವ್, ಪ್ರಸಾದ್ ರಾವ್ ಹಾಗೂ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.