ಮಡಿಕೇರಿ, ಸೆ. ೨೨ : ಕೊಡವ ಎಂಟ್ರೆಪ್ರೆನ್ಯೂರ್ಸ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಹಕಾರಿಯು ೨೦೨೩ ಮಾರ್ಚ್ ಅಂತ್ಯಕ್ಕೆ ರೂ.೯.೭ ಲಕ್ಷÀ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.೪ ರಷ್ಟು ಡಿವಿಡೆಂಟ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ ತಿಳಿಸಿದ್ದಾರೆ.
೨೦೨೨-೨೩ ನೇ ಸಾಲಿನಲ್ಲಿ ೪೭ ಮಂದಿಗೆ ೧,೨೭,೪೫೦೦೦ ರೂ. ಜಾಮೀನು ಸಾಲ ನೀಡಿದ್ದು, ವಾಯಿದೆ ಮೀರಿದ ಸಾಲ ವಸೂಲಾತಿಗೆ ಬಾಕಿ ಇರುವುದಿಲ್ಲ. ಸದಸ್ಯರ ಸಹಕಾರದಿಂದ ಶೇ.೧೦೦ ರಷ್ಟು ವಸೂಲಾತಿಯಾಗಿದೆ. ಸದಸ್ಯರ ಪಾಲು ಹಣ ೨೦೨೨ರ ಮಾರ್ಚ್ ಅಂತ್ಯಕ್ಕೆ ೧ ಕೋಟಿ ೭೦ ಸಾವಿರ ಇದ್ದು, ೨೦೨೩ರ ಮಾರ್ಚ್ ಅಂತ್ಯಕ್ಕೆ ೧ ಕೋಟಿ ೩೦ ಲಕ್ಷಗಳಷ್ಟು ಆಗಿರುತ್ತದೆ. ೨೦೨೪ರ ಅಂತ್ಯಕ್ಕೆ ರೂ.೨ ಕೋಟಿ ಗುರಿ ನಿಗದಿಪಡಿಸಲಾಗಿದೆ.
ಸಂಘ ೨೦೧೯ ಮಾ.೨೯ ರಲ್ಲಿ ಸೌಹಾರ್ದ ಕಾಯ್ದೆಯಡಿ ನೋಂದಣಿಗೊAಡು ೧೦೧ ಸಹಕಾರಿಗಳಿಂದ ರೂ.೧೮.೯೦ ಲಕ್ಷÀ ಪಾಲು ಬಂಡವಾಳದೊAದಿಗೆ ವ್ಯವಹಾರ ಪ್ರಾರಂಭಿಸಿತು. ೨೦೨೩ ಮಾ.೩೧ರ ಅಂತ್ಯಕ್ಕೆ ೩೫೩ ಸಹಕಾರಿಗಳಿಂದ ೧,೩೧,೮೦೦೦೦ ರೂ. ಪಾಲು ಬಂಡವಾಳವನ್ನು ಕ್ರೋಢೀಕರಿಸಲಾಗಿದೆ. ಸೌಹಾರ್ದದಲ್ಲಿ ಜಾಮೀನು ಸಾಲ ಮತ್ತು ಆಸ್ತಿ ಅಡಮಾನ ಸಾಲ ಸೌಲಭ್ಯವಿದ್ದು, ರೂ.೩ ಲಕ್ಷದವರೆಗೆ ಜಾಮೀನು ಸಾಲ ಹಾಗೂ ರೂ.೨೫ ಲಕ್ಷದವರೆಗೆ ಆಸ್ತಿ ಅಡಮಾನ ಸಾಲ ನೀಡಲಾಗುವುದು ಎಂದು ಹೇಳಿದ್ದಾರೆ.
೨೦೨೨-೨೩ನೇ ಸಾಲಿನ ಕೊಡವ ಎಂಟ್ರೆಪ್ರೆನ್ಯೂರ್ಸ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಹಕಾರಿಯ ೫ನೇ ವಾರ್ಷಿಕ ಮಹಾಸಭೆಯು ತಾ. ೨೩ ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.