ಸಿದ್ದಾಪುರ, ಸೆ. ೨೧: ವೀರಾಜಪೇಟೆ ಅರಣ್ಯ ವಲಯ ವ್ಯಾಪ್ತಿಗೆ ಬರುವ ಗ್ರಾಮಗಳಾದ ಕಣ್ಣಂಗಾಲ, ಹಾಲುಗುಂದ, ಬೈರಂಬಾಡ, ಹಚ್ಚಿನಾಡು, ಯಡೂರು, ಪುಲಿಯೇರಿ, ಇಂಜಿಲಗೆರೆ, ಸಿದ್ದಾಪುರ, ಕರಡಿಗೋಡು ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ತಾ. ೨೨ ರಂದು (ಇಂದು) ಮರಳಿ ಕಾಡಿಗೆ ಓಡಿಸುವ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.

ತೋಟದ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸುವಂತೆ ಹಾಗೂ ಗ್ರಾಮಸ್ಥರು, ಶಾಲಾ ಮಕ್ಕಳು ಎಚ್ಚರಿಕೆಯಿಂದ ಇದ್ದು, ಕಾಡಾನೆ ಕಾರ್ಯಾಚರಣೆಗೆ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಹಾಗೂ ಆ ಸಮಯದಲ್ಲಿ ಸಾರ್ವಜನಿಕರು ಪಟಾಕಿಗಳನ್ನು ಸಿಡಿಸಬಾರದೆಂದು ತಿಳಿಸಿದೆ.

ನಾಂಗಾಲದಲ್ಲಿ

ಶ್ರೀಮAಗಲ: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಂಗಾಲ ಗ್ರಾಮದಲ್ಲಿರುವ ಕಾಡಾನೆಗಳನ್ನು ಅರಣ್ಯಕಟ್ಟಲು ಅರಣ್ಯ ಇಲಾಖೆ ತಾ.೨೨ ರಂದು (ಇಂದು) ಪೂರ್ವಾಹ್ನ ೯ ಗಂಟೆಯಿAದ ಸಂಜೆ ೬ ಗಂಟೆವರೆಗೆ ಹಮ್ಮಿಕೊಂಡಿದ್ದು, ಗ್ರಾಮಸ್ಥರು, ಕಾರ್ಮಿಕರು, ಬೆಳೆಗಾರರು ತೋಟದ ಕೆಲಸವನ್ನು ಸ್ಥಗಿತಗೊಳಿಸಿ, ಶಾಲಾ ಮಕ್ಕಳ ಬಗ್ಗೆಯೂ ಪೋಷಕರು ಎಚ್ಚರವಹಿಸಿ ಸಹಕಾರ ನೀಡುವಂತೆ ಮಾಕುಟ್ಟ ವನ್ಯಜೀವಿ ವಲಯ ಅರಣ್ಯಾಧಿಕಾರಿ ಡಿನ್ಸಿ ದೇಚಮ್ಮ ಪ್ರಕಟಣೆಯಲ್ಲಿ ಕೋರಿದ್ದಾರೆ.