ಮಡಿಕೇರಿ, ಸೆ. ೨೦ : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ೯ ಪ್ರಮುಖ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಆರಂಭಿಸಿರುವ ಪಾದಯಾತ್ರೆಯ ಮೊದಲ ಹಂತ ಕೆದಕಲ್ ಮೂಡಗೇರಿ ನಾಡ್ ಮಂದ್‌ನಲ್ಲಿ ಪೂರ್ಣಗೊಂಡಿದೆ. ೨ನೇ ಹಂತದ ಪಾದಯಾತ್ರೆ ತಾ. ೨೭ ರಿಂದ ‘ಕುರುಳಿ ಅಂಬಲ’ ಮಂದ್‌ನಿAದ ಆರಂಭಗೊಳ್ಳಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಮೊದಲ ಹಂತದ ಕೊನೆಯ ದಿನದ ಪಾದಯಾತ್ರೆ ಮತ್ತು ಕೊಡವ ಜಾಗೃತಿ ಸಭೆ ಪಾಲೇರಿನಾಡ್ ಮಂದ್ ಹಾಗೂ ಮೂಡಗೇರಿ ನಾಡ್ ಮಂದ್‌ನಲ್ಲಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತ ನಾಡಿದ ನಾಚಪ್ಪ ಅವರು ಮೊದಲ ಹಂತದ ಪಾದಯಾತ್ರೆ ಯಶಸ್ವಿ ಯಾಗಿದ್ದು, ನಿರೀಕ್ಷೆಗೂ ಮೀರಿ ಮಡಿಕೇರಿ, ಸೆ. ೨೦ : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ೯ ಪ್ರಮುಖ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಆರಂಭಿಸಿರುವ ಪಾದಯಾತ್ರೆಯ ಮೊದಲ ಹಂತ ಕೆದಕಲ್ ಮೂಡಗೇರಿ ನಾಡ್ ಮಂದ್‌ನಲ್ಲಿ ಪೂರ್ಣಗೊಂಡಿದೆ. ೨ನೇ ಹಂತದ ಪಾದಯಾತ್ರೆ ತಾ. ೨೭ ರಿಂದ ‘ಕುರುಳಿ ಅಂಬಲ’ ಮಂದ್‌ನಿAದ ಆರಂಭಗೊಳ್ಳಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಮೊದಲ ಹಂತದ ಕೊನೆಯ ದಿನದ ಪಾದಯಾತ್ರೆ ಮತ್ತು ಕೊಡವ ಜಾಗೃತಿ ಸಭೆ ಪಾಲೇರಿನಾಡ್ ಮಂದ್ ಹಾಗೂ ಮೂಡಗೇರಿ ನಾಡ್ ಮಂದ್‌ನಲ್ಲಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತ ನಾಡಿದ ನಾಚಪ್ಪ ಅವರು ಮೊದಲ ಹಂತದ ಪಾದಯಾತ್ರೆ ಯಶಸ್ವಿ ಯಾಗಿದ್ದು, ನಿರೀಕ್ಷೆಗೂ ಮೀರಿ ಅಯ್ಯಕುಟ್ಟೀರ ಗಗನ್ ಸುಬ್ಬಯ್ಯ, ಕೆದಕಲ್ ಮೂಡಗೇರಿ ನಾಡ್ ಮಂದ್‌ನಲ್ಲಿ ಪುಲ್ಲೇರ ಕಾಳಪ್ಪ, ಪುಲ್ಲೇರ ಸ್ವಾತಿ ಕಾಳಪ್ಪ, ಪುಲ್ಲೇರ ಬೋಪಯ್ಯ, ಪುಲ್ಲೇರ ಕನ್ನಿಕೆ ಬೋಪಯ್ಯ, ಪುಲ್ಲೇರ ಅಶ್ವಿತ್ ಸೋಮಯ್ಯ, ಪುಲ್ಲೇರ ವಸಂತ, ಪುಲ್ಲೇರ ಪೆಮ್ಮಯ್ಯ, ಪುಲ್ಲೇರ ಜಮುನಾ ವಸಂತ, ಪುಲ್ಲೇರ ತಿಮ್ಮಯ್ಯ, ಚೆಪ್ಪುಡಿರ ರಾಜ ಚಿಣ್ಣಪ್ಪ, ಚೆಪ್ಪುಡಿರ ಸುನೀತ ಚಿಣ್ಣಪ್ಪ, ಕೋಣೇರಿರ ಮನೋಹರ್, ಚೇಂದ್ರಿಮಾಡ ಡಾಲಿ ಕರುಂಬಯ್ಯ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

೨ನೇ ಹಂತದ ಪಾದಯಾತ್ರೆ

ಎರಡನೇ ಹಂತದ ಯಾತ್ರೆಯಲ್ಲಿ ತಾ. ೨೭ ರಂದು ಬೆಳಿಗ್ಗೆ ೯ ಗಂಟೆಗೆ ಮತ್ತೆ ಮಡಿಕೇರಿ ತಾಲೂಕು "ಪೊರೆನಾಲ್‌ನಾಡ್'+`ನೂರೊಕ್ಕನಾಡ್' "ಕುರುಳಿ ಅಂಬಲ" ಮಂದ್‌ನಿAದ ಪುನರಾರಂಭಗೊAಡು ನೆಲ್ಲಿಯ ಪುದಿಕೇರಿನಾಡ್ ಮಧ್ಯಾಹ್ನ ೧೨ ಗಂಟೆಗೆ ಕಟ್ಟೆಮಾಡ್, ೩.೩೦ ಗಂಟೆಗೆ ಅರೆಕಾಡ್ ಮಂದ್‌ನಲ್ಲಿ ಕಾರ್ಯಕ್ರಮ, ತಾ. ೨೮ ರಂದು ಬೆಳಿಗ್ಗೆ ೧೦ಕ್ಕೆ ಕಾಣತ್ತ್ ಮೂರ್ನಾಡ್ (ಮೂರ್ನಾಡ್-ಐಕೊಳ) ಮಧ್ಯಾಹ್ನ ೩ ಗಂಟೆಗೆ ಪಾಲಂದ ಮಂದ್, ಹಾಲುಗುಂದ. ಸಂಜೆ ೫.೩೦ ಗಂಟೆಗೆ ಚೆಂಬೆಬೆಳಿಯೂರ್ ತಾ. ೨೯ ರಂದು ಬೆಳಿಗ್ಗೆ ೧೦ ಗಂಟೆಗೆ ಎಡೆನಾಲ್‌ನಾಡ್, ೨ ಗಂಟೆಗೆ ಕಳ್ಳಿರ ಬಾಣೆ ಮಂದ್ ಉಮ್ಮತನಾಡ್ ಅಮ್ಮತ್ತಿ-ಬಿಳುಗುಂದದಲ್ಲಿ ನಡೆಯಲಿದೆ ಎಂದು ನಾಚಪ್ಪ ತಿಳಿಸಿದ್ದಾರೆ.