ಮಡಿಕೇರಿ, ಸೆ. ೨೦: ಮಂಗಳೂರು ವಿವಿಯ ಸಮಾಜ ಶಾಸ್ತç ವಿಭಾಗ ಸಂಶೋಧಕಿಯಾಗಿರುವ ಕೆ.ಕೆ. ಮುತ್ತಮ್ಮ ಅವರಿಗೆ ವಿಶ್ವ ವಿದ್ಯಾನಿಲಯವು ಪಿಹೆಚ್‌ಡಿ ಪದವಿ ನೀಡಿ ಗೌರವಿಸಿದೆ. ಸಮಾಜಶಾಸ್ತç ವಿಭಾಗದ ಪ್ರೊ. ವಿನಯ್ ರಜತ್ ಡಿ ಅವರ ಮಾರ್ಗದರ್ಶನದಲ್ಲಿ ಮುತ್ತಮ್ಮ ಅವರು ಮಂಡಿಸಿದ ‘ಹೆಲ್ತ್ ಸ್ಟೇಟಸ್ ಆಫ್ ಟ್ರೆöÊಬಲ್ ವುಮೆನ್:ಎ ಸೊಶಿಯಾಲಾಜಿಕಲ್ ಸ್ಟಡಿ ಆನ್ ಯರವ ಟ್ರೆöÊಬಲ್ ಇನ್ ಕೊಡಗು ಡಿಸ್ಟಿçಕ್ಟ್’ ಎಂಬ ಪ್ರಬಂಧಕ್ಕೆ ಪಿಹೆಚ್‌ಡಿ ಲಭಿಸಿದೆ. ಇವರು ಹೆಬ್ಬೆಟ್ಟಗೇರಿ ಗ್ರಾಮದ ಕೊಕ್ಕಲೇರ ಕಾವೇರಿ ಕಾಳಯ್ಯ ಹಾಗೂ ದಿ. ಕಾಳಯ್ಯ ಅವರ ಪುತ್ರಿಯಾಗಿದ್ದು, ಬೇಂಗೂರು ಗ್ರಾಮದ ಪಟ್ಟಮಾಡ ಉದಯ್ ಮುತ್ತಣ್ಣ ಅವರ ಪತ್ನಿ.