ಮಡಿಕೇರಿ, ಸೆ. ೨೦: ಹಾಲಿನ ಲಾರಿಗೆ ಬೈಕ್ ಡಿಕ್ಕಿಯಾಗಿ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಯೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಡಿಕೇರಿ ಮೆಡಿಕಲ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಎಂ.ಬಿ.ಬಿ.ಎಸ್. ವ್ಯಾಸಂಗ ಮಾಡುತ್ತಿದ್ದ ಉಡುಪಿ ಮೂಲಕ ವಿಜೇಶ್ (೨೨) ಮೃತ ದುರ್ದೈವಿ. ವಿಜೇಶ್ ತನ್ನ ಸ್ನೇಹಿತ ಬೆಳಗಾಂ ಮೂಲದ ಶಿವಾನಂದ ಎಂಬಾತನೊAದಿಗೆ ಉಡುಪಿಯ ತನ್ನ ಮನೆಗೆ ತೆರಳಿ ಬೈಕ್ (ಕೆ.ಎ-೧೨ ಡಬ್ಲೂö್ಯ- ೦೩೮೧) ನಲ್ಲಿ ಹಿಂತಿರುಗುತ್ತಿದ್ದ ಸಂದರ್ಭ ಕಾಟಕೇರಿ ಸಮೀಪ ಮಡಿಕೇರಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಹಾಲಿನ ಲಾರಿಗೆ (ಟಿ.ಎನ್-೬೯ ಎ.ಎಸ್-೮೪೮೧) ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಚಾಲನೆ ಮಾಡುತ್ತಿದ್ದ ವಿಜೇಶ್ ಸಾವನ್ನಪ್ಪಿದ್ದು, ಶಿವಾನಂದ್ ಗಾಯಗೊಂಡಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.