ಮಡಿಕೇರಿ, ಸೆ. ೧೯: ಕೊಡವರಂತಹ ಸೂಕ್ಷö್ಮ ಬುಡಕಟ್ಟು ಜನಾಂಗದ ಬಗ್ಗೆ ವಿಶೇಷ ಕಾಳಜಿ ತೋರಿ ರಕ್ಷಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ರಾಜ್ಯಾಂಗದತ್ತ ಋಣಭಾರವಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಪ್ರತಿಪಾದಿಸಿದ್ದಾರೆ.

ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ಸಂವಿಧಾನದತ್ತವಾದ ೯ ಬೇಡಿಕೆಗಳ ಕುರಿತು ಕೊಡವ ನ್ಯಾಷನಲ್ ಕೌನ್ಸಿಲ್ ಜಿಲ್ಲೆಯಾದ್ಯಂತ ನಡೆಸುತ್ತಿರುವ ಪಾದಯಾತ್ರೆಯ ನಾಲ್ಕನೇ ದಿನದ ಕೊಡವ ಜಾಗೃತಿ ಸಭೆ ಸೂರ್ಲಭಿ ನಾಡ್ ಮಂದ್, ಗಡಿನಾಡು ನಾಡ್ ಮಂದ್-ಬಿಳಿಗೇರಿ-ಮಾದಾಪುರದಲ್ಲಿ ನಡೆಯಿತು.

ಪಾದಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದ ಎನ್.ಯು. ನಾಚಪ್ಪ ಅವರು, ಸಂವಿಧಾನದ ವಿಧಿಗಳಡಿಯಲ್ಲಿ ಕೊಡವ ಸಮುದಾಯಕ್ಕೆ ರಕ್ಷಣೆ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ತಂಬುಕುತ್ತೀರ ರೇಖಾ ಸೋಮಯ್ಯ, ತಂಬುಕುತ್ತೀರ ಮಾಯಮ್ಮ ತಿಮ್ಮಯ್ಯ, ತಂಬುಕುತ್ತೀರ ಸೀತಮ್ಮ ಬೋಪಯ್ಯ, ಅಪ್ಪುಡ ಶಾಂತಿ ಅಯ್ಯಪ್ಪ, ಅಪ್ಪುಡ ಸುಬ್ಬಮ್ಮ ಮುತ್ತಣ್ಣ, ಒಡಿಯಂಡ ಮುದ್ದವ್ವ ಪೂವಯ್ಯ, ಒಡಿಯಂಡ ಶ್ರಾವಣಿ ಶಿವಕುಮಾರ್, ಮುದ್ದಂಡ ನೀಲಮ್ಮ ತಿಮ್ಮಯ್ಯ, ಮುದ್ದಂಡ ಚಿನ್ನಮ್ಮ ಮುದ್ದಪ್ಪ, ಮುದ್ದಂಡ ರಾಣಿ ಮುತ್ತಪ್ಪ, ಮುದ್ದಂಡ ಪೊನ್ನವ್ವ ನಾಣಿಯಪ್ಪ, ಮುದ್ದಂಡ ಗೌರಮ್ಮ ಸುಬ್ರಮಣಿ, ನಾಪಂಡ ಶೈಲಾ ಶಿವಕುಮಾರ್, ನಾಪಂಡ ಗೌರಮ್ಮ ಈಶ್ವರ್, ನಾಪಂಡ ಪ್ರಾಪ್ತಿ ಪೊನ್ನಮ್ಮ ಮತ್ತಿತರರು ಪಾಲ್ಗೊಂಡಿದ್ದರು.