ವೀರಾಜಪೇಟೆ, ಸೆ. ೧೯ : ಸುಮಂಗಲಿಯರು, ಯುವತಿಯರು ಮತ್ತು ಹೆಣ್ಣು ಮಕ್ಕಳು ಅತ್ಯಂತ ಶ್ರದ್ಧೆಯಿಂದ ಆಚರಿಸುವ ಮಂಗಳ ಗೌರಿ ವೃತಾಚರಣೆಯು ಕಳೆದ ನಾಲ್ಕು ವಾರಗಳ ಹಿಂದಿನಿAದ ಅಂದರೆ ವರಮಹಾಲಕ್ಷಿö್ಮÃ ದಿನದಿಂದ ಆರಂಭವಾಗಿ ಮಂಗಳವಾರ ಗೌರಿ ದೇವಿ ಉತ್ಸವ ಆಗಮನದೊಂದಿಗೆ ಸಂಪನ್ನಗೊAಡಿತು.

ವೀರಾಜಪೇಟೆ ನಗರದ ರಾಜಬೀದಿಯೆಂದು ಪ್ರಖ್ಯಾತಿ ಪಡೆದ ಜೈನರ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀ ಬಸವೇಶ್ವರ ದೇವಾಲಯದ ಗೌರಿ ದೇವಿಯು ನಗರ ಪ್ರದಕ್ಷಿಣೆ ಬಂದು ಮುಂಜಾನೆ ಶ್ರೀ ದೇವಿಯ ಉತ್ಸವ ಮೂರ್ತಿಯನ್ನು ದೇವರ ಜಳಕದ ಬಳಿಕ ವಿವಿಧ ಕನಕಾಭರಣಗಳಿಂದ ಮತ್ತು ಬಗೆಬಗೆಯ ಹೂವಿನಿಂದ ಶೃಂಗರಿಸಿ ದೇವಿಗೆ ಪ್ರಿಯವಾದ ಕುಂಕುಮ, ಅರಶಿಣ, ಗಂಧ, ವಿವಿಧ ರಂಗಿನ ಬಳೆಗಳು, ಹೂವು, ಮಡಿವಸ್ತç, ಗೌರಿಗೆ ಶ್ರೇಷ್ಠವಾದ ಕರಿಮಣಿ, ಬಿಚ್ಚೋಲೆಗಳನ್ನು ಬಾಗಿನದಲ್ಲಿ ಇರಿಸಿ ಈಡುಗಾಯಿ ಒಡೆದು ಪೂಜೆಗಳು ಸಮರ್ಪಣೆಗೊಂಡವು,

ನಂತರದಲ್ಲಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಪ್ರಥಮ ಪೂಜೆ ನಡೆಯಿತು. ಬಳಿಕ ಪಲ್ಲಕ್ಕಿಯಲ್ಲಿ ಪ್ರದಕ್ಷಿಣೆ ಸಾಗಿದರು. ಪಲ್ಲಕ್ಕಿಗೆ ಶುಭಪ್ರದವಾದ ಮಂಗಳಕರ ಪಂಚವಾದ್ಯವು ಮೆರೆಗು ನೀಡಿದವು. ಮುತೈದೆಯರು, ಹೆಣ್ಣು ಮಕ್ಕಳು ಶ್ರದ್ಧೆಯಿಂದ ಗೌರಮ್ಮ ದೇವಿಗೆ ಪೂಜೆಯನ್ನು ಸಲ್ಲಿಸಿ ಭಕ್ತಿಯ ಸಾರವನ್ನು ಮೆರೆದರು. ಮುಂಜಾನೆಯಿAದ ಹೊರಟ ಪಲ್ಲಕ್ಕಿಯಾತ್ರೆಯು ನಗರದ ಎಲ್ಲೆಡೆ ಸಂಚಾರ ಮಾಡಿ ಭಕ್ತರಿಂದ ಪೂಜೆಗಳು ಸ್ವೀಕರಿಸಿ ದೇವಾಲಯಕ್ಕೆ ಬಂದು ತಲುಪಿತು. ದೇವಾಲಯಲ್ಲಿ ವಿದ್ಯುತ್ ಅಲಂಕೃತ ಪೀಠದಲ್ಲಿ ಉತ್ಸವ ಮೂರ್ತಿಯನ್ನು ಇರಿಸಿ ಭಕ್ತರ ಸಮ್ಮುಖದಲ್ಲಿ ಶ್ರೀ ಗೌರಮ್ಮ ತಾಯಿಗೆ ವiಹಾಪೂಜೆ ನೆರವೇರಿಸಲಾಯಿತು. ಭಕ್ತರಿಗೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಪ್ರಸಾದ ವಿನಿಯೋಗ ನಡೆಯಿತು.