ಮಡಿಕೇರಿ, ಸೆ. ೧೯: ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಭಾಗವಾಗಿರುವ ‘ಬಹುಭಾಷಾ ಕವಿಗೋಷ್ಠಿ’ಯನ್ನು ಅಕ್ಟೋಬರ್ ೧೮ ರಂದು ನಗರದ ಗಾಂಧಿ ಮೈದಾ ನದ ಕಲಾ ಸಂಭ್ರಮ ವೇದಿ ಕೆಯಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ಕವನಗಳನ್ನು ವಾಚನ ಮಾಡಲು ಆಸಕ್ತರಾಗಿರುವ ಕವಿ/ ಕವಿಯಿತ್ರಿಯರಿಂದ ಸ್ವರಚಿತ ಕವನ ಆಹ್ವಾನಿಸಲಾಗಿದೆ. ಆಸಕ್ತ ಕವಿ/ ಕವಿಯಿತ್ರಿಯರು ಯಾವುದೇ ಒಂದು ಭಾಷೆಯ ಒಂದು ಕವನವನ್ನು ಅಕ್ಟೋಬರ್ ೩ ರ ಒಳಗಾಗಿ ಕಳಹಿಸಿಕೊಡಬೇಕು. ಆ ನಂತರ ಬರುವ ಕವನಗಳನ್ನು ಪರಿಗಣಿಸಲಾಗುವುದಿಲ್ಲ. ಈ ಬಾರಿಯ ಕವಿಗೋಷ್ಠಿಯಲ್ಲಿ ವರ್ಷಂಪ್ರತಿಯAತೆ ಕನ್ನಡ, ಕೊಡವ, ಅರೆಭಾಷೆ, ತುಳು, ಕೊಂಕಣಿ, ಹವ್ಯಕ, ಬ್ಯಾರಿ, ಯರವ, ಕುಂಬಾರ, ಹಿಂದಿ, ಉರ್ದು, ತಮಿಳು, ಮಲೆ ಯಾಳಂ, ತೆಲುಗು, ಮರಾಠಿ, ಸಂಸ್ಕೃತ ಹೀಗೆ ಯಾವುದೇ ಭಾಷೆಯ ಕವನಗಳನ್ನು ‘ಕನ್ನಡ’ಲಿಪಿಯಲ್ಲಿ ಹಾಗೂ ಹಿಂದಿ ಇಂಗ್ಲಿಷ್ ಕವನವನ್ನು ಅದೇ ಭಾಷೆಯಲ್ಲಿ ಕಳುಹಿಸಿಕೊಡತಕ್ಕದ್ದು. ಕನ್ನಡ ಭಾಷೆಯ ಚುಟುಕು ಕವನ(೪ ಸಾಲಿನ ಗರಿಷ್ಠ ೪ ಕವನಗಳಿಗೆ ಮಾತ್ರ ಅವಕಾಶ)ಗಳು, ಮಕ್ಕಳ ಕವನ(೬ ರಿಂದ ೧೨ ವರ್ಷ ಒಳಪಟ್ಟವರು) ಗಳಿಗೂ ಅವಕಾಶ ಕಲ್ಪಿಸಲಾಗಿದೆ.

ಕವನಗಳನ್ನು ಕಳುಹಿಸುವವರು ತಮ್ಮ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಭಾವಚಿತ್ರವನ್ನು ತಪ್ಪದೆ ಕಳುಹಿಸಿಕೊಡಬೇಕು. ಮಾಹಿತಿಗಳಿ ಲ್ಲದ ಕವನಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಕವನಗಳನ್ನು ಮತ್ತು ಮಾಹಿತಿಯನ್ನು ವ್ಯಾಟ್ಸಾಪ್-೮೮೬೭೬೮೯೧೯೩, ಇ.ಮೇಲ್ ಜಚಿsಚಿಡಿಚಿಞಚಿvigoshಣi೨೩ @gmಚಿiಟ.ಛಿom ಮೂಲಕ ಕಳುಹಿ ಸಬಹುದು. ಈ ಸೌಲಭ್ಯ ಇಲ್ಲದಿರುವವರು ಅಂಚೆ ಮೂಲಕ ಈ ವಿಳಾಸಕ್ಕೆ ಅಗತ್ಯ ಮಾಹಿತಿಯೊಂದಿಗೆ ಕಳುಹಿಸಿಕೊಡಬ ಹುದು. ವಿಳಾಸ- ಅಧ್ಯಕ್ಷರು, ಬಹುಭಾಷಾ ಕವಿಗೋಷ್ಠಿ ಸಮಿತಿ, ಕೇರಾಫ್ ‘ಶಕ್ತಿ’ ದಿನಪತ್ರಿಕೆ, ಕೈಗಾರಿಕಾ ಬಡಾವಣೆ, ಮಡಿಕೇರಿ-೫೭೧೨೦೧ (ಕವನಗಳನ್ನು ಅಂಚೆ ಮೂಲಕ ಕಳುಹಿಸುವವರು ಲಕೋಟೆಯ ಮೇಲೆ ದೊಡ್ಡದಾಗಿ ‘ಬಹುಭಾಷಾ ಕವಿಗೋಷ್ಠಿ ಕವನ’ ಎಂದು ನಮೂದಿಸಬೇಕು).

ಕವನಗಳ ನಿಬಂಧನೆಗಳು: ಯಾವುದೇ ಭಾಷೆಯಲ್ಲಿ ಸ್ವರಚಿತ, ಸಾಮಾಜಿಕ ಜಾಲ ತಾಣ ಸೇರಿದಂತೆ ಎಲ್ಲಿಯೂ ಪ್ರಕಟವಾಗದ ಕವನಗ ಳನ್ನು ಕಳುಹಿಸಬೇಕು. ಕವನಗಳು ಗರಿಷ್ಠ ೨೦ ಸಾಲುಗಳನ್ನು ಮೀರಬಾರದು. ಯಾವುದೇ ಭಾಷೆಯ ಒಂದು ಕವನವನ್ನು ಮಾತ್ರ ಆಯ್ಕೆಗೆ ಕಳುಹಿಸಬೇಕು. ಎರಡೆರಡು ಭಾಷೆಗಳಲ್ಲಿ ಒಬ್ಬರೆ ಕವನಗಳನ್ನು ಕಳುಹಿಸಿದಲ್ಲಿ ಅವರ ಎಲ್ಲಾ ಕವನಗಳನ್ನು ತಿರಸ್ಕರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ-೯೯೭೨೦೭೩೨೯೫, ಸದಸ್ಯರಾದ ಅಬ್ದುಲ್ ಕೌಸರ್ -೭೦೧೯೧೨೪೨೭೦, ರಂಜಿತ್ ಕವಲಪಾರ-೯೧೧೩೦೬೯೮೨೭ ಇವರುಗಳನ್ನು ಸಂಪರ್ಕಿಸಬಹುದು.

ಆಯ್ಕೆಯಾದ ಕವನಗಳ ವಾಚನಕ್ಕೆ ಬಹುಭಾಷಾ ಕವಿಗೋಷ್ಠಿ ಯಂದು ಅವಕಾಶ ಒದಗಿಸಲಾಗು ತ್ತದೆ. ಗೋಷ್ಠಿಯಲ್ಲಿ ಕವಿಗಳು ಕಡ್ಡಾಯ ವಾಗಿ ಆಯ್ಕೆಯಾದ ಕವನವನ್ನಷ್ಟೆ ವಾಚಿಸಬೇಕು. ಕವನಗಳನ್ನು ಹಾಡುವಂತಿಲ್ಲ ಮತ್ತು ಯಾವುದೇ ಪೀಠಿಕೆಗಳಿಗೆ ಅವಕಾಶವಿಲ್ಲ. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮ ವಾಗಿರುತ್ತದೆ ಎಂದು ಬಹುಭಾಷಾ ಕವಿಗೋಷ್ಠಿ ಸಮಿತಿಯ ಅಧ್ಯಕ್ಷರಾದ ಉಜ್ವಲ್ ರಂಜಿತ್ ತಿಳಿಸಿದ್ದಾರೆ.