ಮಡಿಕೇರಿ, ಸೆ. ೧೯: ಕಿಗ್ಗಟ್ಟ್ನಾಡ್ ಹಿರಿಯ ನಾಗರಿಕರ ವೇದಿಕೆಯ ವತಿಯಿಂದ ೯೦ ವರ್ಷ ದಾಟಿದ ಅತೀ ಹಿರಿಯ (ಸೂಪರ್ ಸೀನಿಯರ್ ಸಿಟಿಸನ್ಸ್) ಅವರಿಗೆ ೨೦೨೨-೨೩ರ ವಾರ್ಷಿಕ ಮಹಾ ಸಭೆಯ ಸಂದರ್ಭ ಸನ್ಮಾನ ಮಾಡಲಾಯಿತು. ಮಹಾಸಭೆಯು ಪೊನ್ನಂಪೇಟೆ ಇಗ್ಗುತ್ತಪ್ಪ ಸೌಹಾರ್ದ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆಸಲಾಯಿತು. ೯೦ ವರ್ಷ ದಾಟಿದ ದೇವಕ್ಕಿ (೯೮), ಅಜ್ಜಿಕುಟ್ಟೀರ ಭೀಮಯ್ಯ ಎ.ಡಿ.ಎಲ್.ಆರ್., ತಾಣಚೀರ ನಾಣಯ್ಯ (೯೧) ಹಾಗೂ ಅವರ ಪತ್ನಿ ಸಾವಿತ್ರಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸಮಾರಂಭದಲ್ಲಿ ಸ್ಥಾಪಕ ಜೀವಾವಧಿ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಅಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ, ಕಾರ್ಯದರ್ಶಿ ಚೇಂದಿರ ಬೋಪಣ್ಣ, ಖಜಾಂಚಿ ಐನಂಡ ಮಂದಣ್ಣ, ಆಂತರಿಕ ಲೆಕ್ಕ ಪರಿಶೋಧಕ ಬೊಳಿಯಂಗಡ ದಾದು ಪೂವಯ್ಯ ಮತ್ತು ನಿರ್ದೇಶಕರುಗಳಾದ ಮಾಣಿಪಂಡ ಪಾರ್ವತಿ ಜೋಯಪ್ಪ, ಹೆಚ್.ಬಿ. ಬೋಜಮ್ಮ, ಕೇಚಟೀರ ಕಾಮುಣಿ ಪೂಣಚ್ಚ, ಮಾಚಿಮಾಡ ಲೌಲಿ ಸೋಮಯ್ಯ, ಮದ್ರೀರ ಕರುಂಬಯ್ಯ, ಕಾಟಿಮಾಡ ಡಿಕ್ಕಿ ಅಣ್ಣಯ್ಯ, ಕಳ್ಳಿಚಂಡ ಪೂವಯ್ಯ, ಚಿರಿಯಪಂಡ ರುಕ್ಮಿಣಿ, ಕೊಳ್ಳಿಮಾಡ ಕಾರ್ಯಪ್ಪ, ಕೊಳ್ಳಿಮಾಡ ಸೋಮಯ್ಯ, ಮೇಚಮಾಡ ಪೊನ್ನಪ್ಪ, ಕಾಳಿಮಾಡ ಮೋಟಯ್ಯ, ಕಳ್ಳಿಚಂಡ ಕಟ್ಟಿ ಪೂಣಚ್ಚ, ಮುಲ್ಲೇಂಗಡ ಶಂಕರಿ ಪೊನ್ನಪ್ಪ, ನೆರಿಯಂಡಮ್ಮನ ಸುಬ್ರಮಣಿ, ರಾಮಕೃಷ್ಣ ಹಾಜರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಕೊಟ್ಟುಕತ್ತಿರ ಸೋಮಣ್ಣನವರು ವಹಿಸಿದ್ದರು. ಪ್ರಾರ್ಥನೆಯನ್ನು ಪೂರ್ಣಿಮಾ, ಸ್ವಾಗತವನ್ನು ಕಾರ್ಯದರ್ಶಿ ಬೋಪಣ್ಣ ಮತ್ತು ವಂದನಾರ್ಪಣೆಯನ್ನು ಬೊಳಿಯಂಗಡ ದಾದು ಪೂವಯ್ಯ ಅವರು ಮಾಡಿದರು. ಭೋಜನದ ವ್ಯವಸ್ಥೆಯನ್ನು ದಾನಿಗಳಾದ ಮಾಜಿ ಯೋಧ ಜಪ್ಪು ಅವರ ತಂದೆ ತಾಯಿ ಹೆಸರಿನಲ್ಲಿ ಮಾಡಿದರು.