ಸಿದ್ದಾಪುರ, ಸೆ. ೧೯: ಜಿಲ್ಲೆಯಲ್ಲಿ ಕಾಡಾನೆ ಹಾವಳಿಗೆ ಕೃಷಿಕರು ಹಾಗೂ ಸಾರ್ವಜನಿಕರು ಹೈರಾ ಣಾಗಿದ್ದು, ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ, ಸರ್ಕಾರ ವಿಫಲವಾ ಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಇದೀಗ ನೂತನ ಯಂತ್ರದ ಮೊರೆ ಹೋಗುತ್ತಿದ್ದಾರೆ. ಕಾಡುಪ್ರಾಣಿಗಳ ಉಪ ಟಳವನ್ನು ತಡೆಯುವ ನಿಟ್ಟಿನಲ್ಲಿ ವಿಜಯನಗರ ಜಿಲ್ಲೆಯ ಯುವ ರೈತ ನೋರ್ವ ಆವಿಷ್ಕಾರ ಮಾಡಿದ ರೈತ ಸ್ನೇಹಿ ಸ್ವಯಂಚಾಲಿತ ಧ್ವನಿ ವರ್ಧಕ ಯಂತ್ರವು ಇದೀಗ ಜಿಲ್ಲೆಯ ಕಾಫಿ ತೋಟಗಳಲ್ಲಿ ಅಳವಡಿಸಿ ಯಶಸ್ಸು ಕಂಡಿದೆ.

ಸ್ವಯAಚಾಲಿತ ಧ್ವನಿ ವರ್ಧಕ ಯಂತ್ರ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜಂಗಮಸೋವೆನ ಹಳ್ಳಿಯ ಯುವ ರೈತ ಗೌಡ್ರು ನಾಗರಾಜ್ ಕಳೆದ ಮೂರು ವರ್ಷಗಳ ಹಿಂದೆ ತಮ್ಮ ಕೃಷಿ ಭೂಮಿಯಲ್ಲಿ ಕಾಡು ಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸುವ ಸಲುವಾಗಿ ಸಂಶೋಧಿಸಿ ಆವಿಷ್ಕಾರ ಮಾಡಿ ಯಶಸ್ಸು ಕಂಡಿದ್ದರು. ಸೂರ್ಯನ ಬೆಳಕಿನ ಮೂಲಕ ಚಾರ್ಜ್ ಆಗುವ ಯಂತ್ರವಾಗಿದ್ದು, ಪ್ರತಿ ಹತ್ತು ನಿಮಿಷಕ್ಕೆ ಯಂತ್ರದಿAದ ಕಾಡುಪ್ರಾಣಿಗಳಿಗೆ ಇಷ್ಟವಾಗದ ವಿವಿಧ ಶಬ್ದಗಳು ಹೊರಬರುವ ಮೂಲಕ ಕಾಡುಪ್ರಾಣಿಗಳ ಹಾವಳಿಯನ್ನು ನಿಯಂತ್ರಣಕ್ಕೆ ತರಬಹುದಾಗಿದೆ. ಯಂತ್ರವು ಹಗಲು ಮತ್ತು ರಾತ್ರಿಯ ಸಮಯದಲ್ಲಿ ಧ್ವನಿವರ್ಧಕದ ಮೂಲಕ ಶಬ್ದ ಬರುತ್ತದೆ. ಇದನ್ನು ಕೇವಲ ಒಂದು ಹೊತ್ತು ಕಾರ್ಯನಿರ್ವಹಿಸುವಂತೆ ಮಾಡಬಹುದಾಗಿದೆ. ಯಂತ್ರದಲ್ಲಿ ಬೆಳಕಿನೊಂದಿಗೆ ಶಬ್ದ ಬರುವ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳು ಭಯದಿಂದ ಪ್ರದೇಶಕ್ಕೆ ಬರಲು ಹಿಂದೇಟು ಹಾಕುತ್ತದೆ. ಯಂತ್ರವು ಸ್ವಯಂ ಚಾಲಿತವಾಗಿದ್ದು ಅತ್ಯಂತ ಗುಣಮಟ್ಟದ ಬ್ಯಾಟರಿಗಳನ್ನು ಹಾಗೂ ಧ್ವನಿವರ್ಧಕಗಳನ್ನು ಒಳಗೊಂಡಿದ್ದು, ಸಂಪೂರ್ಣ ಜಲನಿರೋಧಕವಾಗಿದೆ. ಸ್ವಯಂಚಾಲಿತ ಧ್ವನಿವರ್ಧಕ ಯಂತ್ರದ ಕಾರ್ಯವು ಕಾಡುಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಸಹಕಾರಿಯಾಗಿರುವ ಹಿನ್ನೆಲೆಯಲ್ಲಿ ಶ್ರೀ ಮೂಗಬಸವೇಶ್ವರ ಎಂಟರ್‌ಪ್ರೆöÊಸಸ್ ಮೂಲಕ ಈ ಯಂತ್ರವನ್ನು ತಯಾರಿಸಲಾಗುತ್ತಿದ್ದು, ಭಾರತದ ಎಲ್ಲಾ ರಾಜ್ಯದಲ್ಲೂ ಬಹುಬೇಡಿಕೆಯಾಗಿದೆ.

ಜಿಲ್ಲೆಯಲ್ಲಿ ಬೇಡಿಕೆ: ಕಾಡಾನೆ ಹಾವಳಿಯಿಂದ ಬೇಸತ್ತ ಜಿಲ್ಲೆಯ ಕೃಷಿಕರು ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ನಾನಾ ಮಾರ್ಗಗಳನ್ನು ಅನುಸರಿಸಿ ವಿಫಲರಾಗಿದ್ದರು. ಸಾವಿರಾರು ರೂಪಾಯಿ ಖರ್ಚು ಮಾಡಿ ಸೋಲಾರ್ ಬೇಲಿ ಇನ್ನಿತರ ಮಾರ್ಗಗಳನ್ನು ಅನುಸರಿಸಿ ಭಾರಿ ನಷ್ಟ ಅನುಭವಿಸಿದ್ದರು. ಇದೀಗ ಕಡಿಮೆ ಬೆಲೆಯಲ್ಲಿ ರೈತರಿಗೆ ದೊರಕುವ ಸ್ವಯಂಚಾಲಿತ ಧ್ವನಿವರ್ಧಕ ಯಂತ್ರದತ್ತ ರೈತರು ಆಕರ್ಷಿತರಾಗಿದ್ದಾರೆ. ಅಲ್ಲದೆ ಈ ಯಂತ್ರವು ಹಲವೆಡೆ ಯಶಸ್ಸು ಕಂಡಿರುವ ಕಾರಣ ಯಂತ್ರಕ್ಕೆ ಜಿಲ್ಲೆಯಲ್ಲಿ ಬಹುಬೇಡಿಕೆ ಸೃಷ್ಟಿಯಾಗಿದೆ. ಈಗಾಗಲೇ ನೂರಕ್ಕೂ ಅಧಿಕ ಯಂತ್ರಗಳನ್ನು ಕೊಡಗು ಜಿಲ್ಲೆಯ ರೈತರು ಖರೀದಿಸಿದ್ದು, ಇನ್ನಷ್ಟು ಯಂತ್ರಗಳಿಗೆ ಬೇಡಿಕೆ ಬಂದಿದ್ದು ಪಾರ್ಸಲ್ ಸರ್ವಿಸ್ ಮೂಲಕ ಸೂಕ್ತ ಬೆಲೆಯಲ್ಲಿ ಕಳುಹಿಸಿಕೊಡಗ ಲಾಗುವುದು ಎಂದು ಸಂಶೋಧಕ ರೈತ ತಿಳಿಸಿದ್ದಾರೆ.

ಯಂತ್ರದ ವಿಶೇಷತೆಗಳು : ಸ್ವಯಂ ಚಾಲಿತ ಯಂತ್ರ, ಸೋಲಾರ್ ವಿದ್ಯುತ್, ೬೦೦೦ mಚಿh ಲಿಥಿಯಂ ಐರನ್ ಬ್ಯಾಟರಿ, ೧೦-೨೦ ತಿಚಿಣs ಧ್ವನಿವರ್ಧಕ, ೧೨ ಗಂಟೆ ಬ್ಯಾಟರಿ ಬ್ಯಾಕಪ್, ಆರು ತಿಂಗಳು ವ್ಯಾರಂಟಿ ಯಂತ್ರಕ್ಕಿದೆ. ಶಬ್ದವು ೮- ೧೦ ಎಕರೆ ವ್ಯಾಪ್ತಿಗೆ ಕೇಳುತ್ತದೆ. - ಎ.ಎನ್. ವಾಸು