ಚೆಯ್ಯಂಡಾಣೆ, ಸೆ. ೧೯: ದವಸ ಭಂಡಾರಗಳು ಅಭಿವೃದ್ಧಿ ಹೊಂದಿದರೆ ಮಾತ್ರ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯ. ಇದಕ್ಕೆ ಸರ್ವ ಸದಸ್ಯರ ಸಹಕಾರ ಮುಖ್ಯ ಎಂದು ಬೇತು ಗ್ರಾಮದ ದವಸ ಭಂಡಾರದ ಅಧ್ಯಕ್ಷ ಕೊಂಡೀರ ಗಣೇಶ್ ನಾಣಯ್ಯ ಹೇಳಿದರು.
ಬೇತು ಗ್ರಾಮದ ದವಸ ಭಂಡಾರದ ಕಟ್ಟಡದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ನಮ್ಮ ಪೂರ್ವಜರು ಪ್ರಾರಂಭಿಸಿದ ಈ ದವಸ ಭಂಡಾರಕ್ಕೆ ಇಂದು ೭೦ ವರ್ಷ ಸಂದಿವೆ. ಈಗ ಇದು ೨೦೦ಕ್ಕಿಂತಲೂ ಹೆಚ್ಚು ಸದಸ್ಯರನ್ನು ಹೊಂದಿದ್ದು ಇದನ್ನು ಉಳಿಸಬೇಕಾದ ಕರ್ತವ್ಯ ನಮ್ಮದಾಗಿದೆ. ಅಲ್ಲದೆ ನಮ್ಮ ಯುವಪೀಳಿಗೆಗೆ ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದರು.
ನಮ್ಮ ದವಸ ಭಂಡಾರದಲ್ಲಿರುವ ಸದಸ್ಯರ ಮಕ್ಕಳಿಗೆ ೧೮ ವರ್ಷ ತುಂಬಿದ್ದರೆ ಅವರನ್ನು ಇದರ ಸದಸ್ಯರನ್ನಾಗಿಸಬೇಕು, ಇದರಿಂದ ಮುಂದೆ ದವಸ ಭಂಡಾರ ಬೆಳೆಯಲು ಸಹಕಾರಿಯಾಗಲಿದೆ ಎಂದರು. ಮುಂದೆ ಸಂಘದಿAದ ಸಮುದಾಯ ಭವನ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದ್ದು ನಿಮ್ಮೆಲ್ಲರ ಸಹಕಾರ ಇದ್ದರೆ ಸ್ಥಳ ನಿಗದಿಪಡಿಸಿ ಶಾಸಕರ ಗಮನಕ್ಕೆ ತಂದು ಕ್ರಮಕೈಗೊಳ್ಳ ಲಾಗುವುದು ಎಂದ ಅವರು, ಸಂಘದ ಮರಣನಿಧಿಯ ಹಣವನ್ನು ಎಲ್ಲಾ ಸದಸ್ಯರು ಡಿಸೆಂಬರ್ ತಿಂಗಳ ಅಂತ್ಯದೊಳಗೆ ಪಾವತಿಸಿ ಸಹಕರಿಸಬೇಕೆಂದರು.
ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆ ಮಾದಕ ವಸ್ತುಗಳ ಬಳಕೆಗೆ ದಾಸರಾಗುತ್ತಿದ್ದಾರೆ. ನಮ್ಮ ಗ್ರಾಮ ಹಾಗೂ ಇನ್ನಿತರ ಕಡೆಗಳಲ್ಲಿ ಇದನ್ನು ಬಳಸುವವರನ್ನು ಕಂಡುಬAದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಸಮಾಜದಿಂದ ಪಿಡುಗನ್ನು ನಿರ್ಮೂಲನೆ ಮಾಡಲು ಕೈಜೋಡಿಸಬೇಕು. ನಮ್ಮ ಮಕ್ಕಳನ್ನು ಇದರಿಂದ ರಕ್ಷಿಸುವುದು ಎಲ್ಲಾ ಪೋಷಕರ ಕರ್ತವ್ಯ ಎಂದರು. ಸಂಘದ ಹಾಗೂ ಗ್ರಾಮದ ಅಭಿವೃದ್ಧಿಗಾಗಿ ಎಲ್ಲಾ ರೀತಿಯಲ್ಲಿ ಸರ್ವ ಸದಸ್ಯರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಉಪಾಧ್ಯಕ್ಷ ಕಲ್ಯಾಟಂಡ ರಮೇಶ್ ಚಂಗಪ್ಪ, ಕಾರ್ಯದರ್ಶಿ ಬೊಳ್ಳೆಪಂಡ ಪೆಮ್ಮಯ್ಯ, ನಿರ್ದೇಶಕರಾದ ಕುಟ್ಟಂಜೆಟ್ಟೀರ ಶ್ಯಾಮ್ ಬೋಪಣ್ಣ, ಬೊಳ್ಳೆಪಂಡ ಪೂಣಚ್ಚ, ಕೊಂಡೀರ ಸುರೇಶ್, ಚೋಕಿರ ಪ್ರಭು, ಕಾಳೆಯಂಡ ಸಾಬಾ ತಿಮ್ಮಯ್ಯ, ಪಾತಂಡ ಜಯ, ಅಪ್ಪೇರಿಯಂಡ ಗೌರಮ್ಮ, ಮುಕ್ಕಾಟಿರ ರೋಹಿಣಿ, ಸೇರಿದಂತೆ ದವಸ ಭಂಡಾರದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.
ಕಾರ್ಯಕ್ರಮವನ್ನು ಬೊಳ್ಳೆಪಂಡ ಹರೀಶ್ ಸ್ವಾಗತಿಸಿ, ವಂದಿಸಿದರು.