ನಾಪೋಕ್ಲು, ಸೆ. ೧೯: ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಮಡಿಕೇರಿ ವತಿಯಿಂದ ಮಡಿಕೇರಿ ಕ್ಲಸ್ಟರ್‌ನಲ್ಲಿ ಶುಕ್ರವಾರ ಮಡಿಕೇರಿಯ ಸಂತ ಮೈಕಲರ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಆಯೋಜಿಸಲಾಯಿತು.
ಕ್ಲಸ್ಟರ್‌ಗೆ ಒಳಪಡುವ ೨೪ ಶಾಲೆಗಳ ಸುಮಾರು ೫೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ೪೭ ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ವ್ಯವಸ್ಥಾಪಕ ನವೀನ್ ವಹಿಸಿದರು.
ಈ ಸಂದರ್ಭ ನಗರಸಭೆ ಸದಸ್ಯರಾದ ಬಾಳೆಯಡ ಸಬೀತಾ, ಸಂಪನ್ಮೂಲ ವ್ಯಕ್ತಿ ವೀಣಾ ರೈ, ಶಾಲಾ ಮುಖ್ಯೋಪಾಧ್ಯಾಯರು ಸೇರಿದಂತೆ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು, ಪೋಷಕರು ಹಾಜರಿದ್ದರು.
ಈ ಸಂದರ್ಭದಲ್ಲಿ ೬ ವರ್ಷಗಳಿಂದ ಪ್ರತಿಭಾ ಕಾರಂಜಿ ಮಾಡಲು ಸಹಕರಿಸಿದ ಮುಖ್ಯಶಿಕ್ಷಕರಾದ ಸಿಸ್ಟೆರ್ ಪ್ರತಿಮಾ ಅವರನ್ನು ಸನ್ಮಾನ ಮಾಡಲಾಯಿತು.