ಮಡಿಕೇರಿ, ಸೆ. ೧೯ : ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮಹಾಸಭೆಯು ಸಂಘದ ಅಧ್ಯಕ್ಷ ಪಿ.ಸಿ. ಜಯರಾಮ ಅವರ ಅಧ್ಯಕ್ಷತೆಯಲ್ಲಿ ಸುಳ್ಯದ ಕೊಡಿಯಾಲಬೈಲ್ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ವಾರ್ಷಿಕ ವರದಿ ಮಂಡಿಸಿದರು.
ಸAಘದ ಅಧ್ಯಕ್ಷ ಪಿ.ಸಿ.ಜಯರಾಮ ಅವರು ಮಾತನಾಡಿ ಮಾ. ೩೧, ೨೦೨೩ರ ಅಂತ್ಯಕ್ಕೆ ೧೬,೯೬೦ ಮಂದಿ ವಿವಿಧ ವರ್ಗದ ಸದಸ್ಯರಿದ್ದು ಇವರಿಂದ ರೂ. ೪.೨೬ ಕೋಟಿ ಪಾಲು ಬಂಡವಾಳ, ರೂ. ೧೫೬.೫೩ ಕೋಟಿ ಠೇವಣಿ ಸಂಗ್ರಹಿಸಿದೆ. ಸದಸ್ಯರುಗಳಿಗೆ ರೂ.೧೪೫.೪೩ ಕೋಟಿ ವಿವಿಧ ಸಾಲಗಳನ್ನು ವಿತರಿಸಲಾಗಿದೆ. ರೂ. ೧೩.೬೯ ಕೋಟಿ ವಿವಿಧ ಬ್ಯಾಂಕ್ಗಳಲ್ಲಿ ಧನ ವಿನಿಯೋಗ ಮಾಡಿದ್ದು ಸಂಘವು ಆರಂಭದಿAದಲೂ ಲಾಭದಲ್ಲಿ ನಡೆಯುತ್ತಿದ್ದು ವರದಿ ವರ್ಷದಲ್ಲಿ ರೂ. ೮೭೯.೬೫ ಕೋಟಿ ವಾರ್ಷಿಕ ವ್ಯವಹಾರ ನಡೆಸಿ ರೂ. ೧,೫೧,೮೮,೫೫೦.೬೧ ನಿವ್ವಳ ಲಾಭ ಗಳಿಸಿದ್ದು ಸಂಘದ ಸದಸ್ಯರಿಗೆ ಶೇ.೨೦ ಡಿವಿಡೆಂಡ್ ನೀಡಲಾಗುತ್ತಿದೆ. ಸಂಘದ ೧೬ ಶಾಖೆಗಳಲ್ಲಿ ಇ- ಸ್ಟಾಂಪಿAಗ್, ಸುಳ್ಯ ಶಾಖೆಯಲ್ಲಿ ಕಡಿಮೆ ಬಾಡಿಗೆಗೆ ಸೇಫ್ ಲಾಕರ್, ಗ್ರಾಹಕರ ಅನುಕೂಲಕ್ಕಾಗಿ ಆರ್.ಟಿ.ಜಿ.ಎಸ್, ನೇಫ್ಟ್ ಸೌಲಭ್ಯವನ್ನು ಕೂಡ ನೀಡುತ್ತಿದ್ದೇವೆ.
ಸಂಘವು ೨೦೨೩-೨೪ನೇ ಸಾಲಿನಲ್ಲಿ ಬೆಳ್ಳಿಹಬ್ಬವನ್ನು ಆಚರಿಸುತ್ತಿದ್ದು ಪ್ರಸ್ತುತ ರಾಜ್ಯದ ವಿವಿಧ ಭಾಗಗಳಲ್ಲಿ ೨೨ ಶಾಖೆಗಳನ್ನು ಪ್ರಾರಂಭಿಸಿದ್ದು, ಶೀಘ್ರದಲ್ಲಿ ೨೫ ಶಾಖೆಗಳನ್ನು ಹೊಂದುವ ಗುರಿ ಹೊಂದಿದೆ.
ಮುAದಿನ ವರ್ಷದಲ್ಲಿ ರೂ. ೨೫೦ ಕೋಟಿ ಠೇವಣಿ ಸಂಗ್ರಹಿಸಿ, ರೂ. ೨೦೦ ಕೋಟಿ ಸಾಲ ವಿತರಿಸಿ, ರೂ.೧,೦೦೦ ಕೋಟಿ ವಾರ್ಷಿಕ ವ್ಯವಹಾರ ನಡೆಸುವ ಯೋಜನೆಯನ್ನು ಆಡಳಿತ ಮಂಡಳಿ ಹೊಂದಿದೆ. ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. ೯೦ಕ್ಕಿಂತ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರುಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ ಎಂದು ವಿವರಿಸಿದರು.
ಸನ್ಮಾನ: ಸಹಕಾರ ರತ್ನ ಪ್ರಶಸ್ತಿ ಪಡೆದ ಸಂಘದ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ದಂಪತಿಯನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮೋಹನ್ ರಾಂ ಸುಳ್ಳಿ, ನಿರ್ದೇಶಕರಾದ ಸದಾನಂದ ಜಾಕೆÀ, ಎ.ವಿ.ತೀರ್ಥರಾಮ, ಚಂದ್ರ ಕೋಲ್ಚಾರ್, ಕೆ.ಸಿ. ನಾರಾಯಣ ಗೌಡ, ಕೆ.ಸಿ.ಸದಾನಂದ, ಪಿ.ಎಸ್.ಗಂಗಾಧರ, ದಿನೇಶ್ ಮಡಪ್ಪಾಡಿ, ದಾಮೋದರ ನಾರ್ಕೋಡು, ಜಯಲಲಿತ ಕೆ.ಎಸ್, ನಳಿನಿ ಸೂರಯ್ಯ, ಲತಾ ಎಸ್.ಮಾವಜಿ, ಹೇಮಚಂದ್ರ ಐ.ಕೆ, ನವೀನ್ ಕುಮಾರ್ ಜೆ.ವಿ., ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್, ಸಲಹಾ ಸಮಿತಿಯ ನವೀನ್ ಅಂಬೆಕಲ್ಲು, ದೇವಿಪ್ರಸಾದ್ ಪೋತಂಡ್ರ, ವೆಂಕಟ್ರಮಣ ಪಡ್ಪು ಹಾಗೂ ಹಿರಿಯರಾದ ಅಂಬೆಕಲ್ಲು ಕುಶಾಲಪ್ಪ ಗೌಡ ಹಾಗೂ ಸಿಬ್ಬಂದಿ ವರ್ಗ ಮತ್ತು ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಮೋಹನ್ ರಾಂ ಸುಳ್ಳಿ ವಂದಿಸಿದರು.