ಶ್ರೀಮಂಗಲ, ಸೆ. ೧೯: ತಲಕಾವೇರಿ ಕ್ಷೇತ್ರದಲ್ಲಿ ಮುಂದಿನ ತಿಂಗಳು ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಭಕ್ತಾದಿಗಳಿಗೆ ದರ್ಶನ ನೀಡುವ ಹಿನ್ನೆಲೆ ಕಾವೇರಿ ಮಾತೆಯನ್ನು ಸ್ವಾಗತಿಸುವ ನಿಟ್ಟಿನಲ್ಲಿ ಕಾವೇರಿ ಮಾತೆಯನ್ನು ಕುಲ ದೇವರೆಂದು ಆರಾಧಿಸುವ ಕೊಡವ ಜನಾಂಗದ ೪೦೦ಕ್ಕೂ ಹೆಚ್ಚು ಭಕ್ತಾದಿಗಳು "ತಿಂಗಕೊರ್ ಮೊಟ್ಟ್ ತಲಕಾವೇರಿ" (ಕಾವೇರಿ ಭಕ್ತ ಜನ ಸಂಘ) ಆಶ್ರಯದಲ್ಲಿ ಕ್ಷೇತ್ರವನ್ನು ತೊಳೆದು ಶುಚಿಗೊಳಿಸುವ ಸೇವಾ ಕಾರ್ಯವನ್ನು ಭಾನುವಾರ ನಡೆಸಿದರು.
ಇದಕ್ಕೂ ಮೊದಲು ಕಳೆದ ೩೩ ತಿಂಗಳಿನಿAದ "ತಿಂಗಕೊರ್ ಮೊಟ್ಟ್ ತಲಕಾವೇರಿ" ಸಂಕಲ್ಪ ತೊಟ್ಟು ಪ್ರತಿ ತಿಂಗಳು ಕ್ಷೇತ್ರಕ್ಕೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿ ಪೂಜೆ ಸಲ್ಲಿಸುತ್ತಿರುವ ಸಂಘಟನೆಯ ಎಲ್ಲಾ ಭಕ್ತಾದಿಗಳು ಭಾಗಮಂಡಲ ಭಗಂಡೇಶ್ವರ ದೇವಸ್ಥಾನ ಮತ್ತು ತಲಕಾವೇರಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದರು.
"ತಿಂಗಕೊರ್ ಮೊಟ್ಟ್ ತಲಕಾವೇರಿ" ಸಂಘದಿAದ ೩೩ನೇ ತಿಂಗಳ ಸಂಕಲ್ಪದೊAದಿಗೆ ಪೂಜೆ ಸಲ್ಲಿಸಲಾಯಿತು ಮತ್ತು ನಿರಂತರ ಮೂರನೇ ವರ್ಷವೂ ಕ್ಷೇತ್ರವನ್ನು ತೊಳೆದು ಶುಚಿಗೊಳಿಸುವ ಸೇವೆಯನ್ನು ಮಾಡಲಾಯಿತು. ಸೇವೆಯಲ್ಲಿ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಪಾಲ್ಗೊಂಡು ಭಕ್ತಿ ಭಾವದಿಂದ ನೆರವೇರಿಸಿದರು. ದಿನವಿಡಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಳೆಯ ನಡುವೆಯೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಟಿ.ಶೆಟ್ಟಿಗೇರಿಯ ರೂಟ್ಸ್ ವಿದ್ಯಾಸಂಸ್ಥೆಯ ಎರಡು ಬಸ್ಸುಗಳು, ಗೋಣಿಕೊಪ್ಪ ಕಾವೇರಿ ಕಾಲೇಜು ವತಿಯಿಂದ ಒಂದು ಬಸ್ ಹಾಗೂ ಪೊನ್ನಂಪೇಟೆಯ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಟೆಕ್ನಾಲಜಿ (ಸಿ.ಐ.ಟಿ) ಕಾಲೇಜು ಒಂದು ಬಸ್ನ ಪ್ರಾಯೋಜನೆಯೊಂದಿಗೆ ಖಾಸಗಿ ವಾಹನದಲ್ಲಿ ಆಗಮಿಸಿದ ಭಕ್ತಾದಿಗಳು ಸೇವೆಯಲ್ಲಿ ಪಾಲ್ಗೊಂಡಿದ್ದರು.
ಭಾಗಮಂಡಲ ದೇವಸ್ಥಾನ ವತಿಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಯಿತು.