ಸೋಮವಾರಪೇಟೆ, ಸೆ. ೧೯: ರೂ. ೧೦ ಲಕ್ಷದವರೆಗೆ ಸರ್ಕಾರದ ಶೇ. ೩ರ ಬಡ್ಡಿ ರಿಯಾಯಿತಿಯಲ್ಲಿ ಸಾಲ ನೀಡಬಹುದಾಗಿದ್ದು, ರೈತ ಬಂಧುಗಳು ಸೂಕ್ತ ಕಂದಾಯ ದಾಖಲಾತಿ ಒದಗಿಸಿ ಸಾಲ ಸೌಲಭ್ಯ ಪಡೆದು ತಮ್ಮ ಅಭಿವೃದ್ಧಿಯೊಂದಿಗೆ ಬ್ಯಾಂಕಿನ ಅಭಿವೃದ್ಧಿ ಸಾಧಿಸಲು ಸಹಕರಿಸಬೇಕೆಂದು ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್ ಹೇಳಿದರು.
ಇಲ್ಲಿನ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಸಂಘದ ೬೦ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸದಸ್ಯರು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಬೇಕು. ಬ್ಯಾಂಕಿನಿAದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಲು ಆದ್ಯತೆ ನೀಡಬೇಕು. ಹಾಗಾದಾಗ ಮಾತ್ರ ಬ್ಯಾಂಕ್ನಿAದ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಬ್ಯಾಂಕ್ ಅಭಿವೃದ್ಧಿ ಹೊಂದಿದರೆ ಸದಸ್ಯರಿಗೂ ಸವಲತ್ತು ದೊರಕುತ್ತದೆ ಎಂದರು.
ಬ್ಯಾAಕಿನಲ್ಲಿ ಪ್ರಸ್ತುತ ೧೮,೪೭೦ ಸದಸ್ಯರಿದ್ದಾರೆ. ಈ ಪೈಕಿ ೧,೯೮೨ ಪೂರ್ಣ ಪ್ರಮಾಣದ ಷೇರುದಾರರು, ೧೬,೪೮೮ ಅಪೂರ್ಣ ಪ್ರಮಾಣದ ಸದಸ್ಯರಿದ್ದಾರೆ. ಇದರಲ್ಲಿ ಪೂರ್ಣ ಪ್ರಮಾಣದ ಷೇರು ಭರ್ತಿ ಮಾಡಲು ತಿಳುವಳಿಕೆ ಪತ್ರ ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು.
ವರದಿ ಸಾಲಿನಲ್ಲಿ ೫೩ ಮಂದಿ ಹೊಸ ಸದಸ್ಯರು ಸೇರ್ಪಡೆಯಾಗಿದ್ದಾರೆ. ಒಟ್ಟು ಷೇರು ಬಂಡವಾಳವು ರೂ. ೧೫೧.೯೭ ಲಕ್ಷವಿದೆ. ಸದಸ್ಯರಿಂದ ರೂ. ೧೨೩೩.೧೯ ಲಕ್ಷ ಸಾಲ ಹೊರಬಾಕಿ ಇದೆ. ವರದಿ ಸಾಲಿನಲ್ಲಿ ಶೇ. ೬೭.೯೧ ಸಾಲ ವಸೂಲಾತಿ ಸಾಧನೆಯಾಗಿದೆ. ೨೦೨೨-೨೩ನೇ ಸಾಲಿಗೆ ನಬಾರ್ಡ್ ಮತ್ತು ಕಾಸ್ಕಾರ್ಡ್ ಬ್ಯಾಂಕ್ ವಿವಿಧ ಯೋಜನೆಗಳಿಗೆ ಹೊಸ ಸಾಲ ನೀಡಲು ರೂ. ೨೦೭.೧೫ ಲಕ್ಷ ಹಾಗೂ ಕಂತು ಸಾಲ ಬಿಡುಗಡೆಗೆ ರೂ. ೯೨.೩೭ ಲಕ್ಷ ಸಾಲದ ಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಸಂಗ್ರಹ ಮಾಡಲಾಗುತ್ತಿದೆ. ಇದರೊಂದಿಗೆ ವಿವಿಧ ಸೌಲಭ್ಯಗಳನ್ನು ಸದಸ್ಯರಿಗೆ ಒದಗಿಸಲಾಗುತ್ತಿದೆ. ಸಹಕಾರಿಗಳ ಸಹಕಾರದಿಂದ ಮಾತ್ರ ಬ್ಯಾಂಕ್ ಅಭಿವೃದ್ಧಿ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಪೂವಮ್ಮ, ನಿರ್ದೇಶಕರುಗಳು, ವ್ಯವಸ್ಥಾಪಕ ಬಿ.ವಿ. ಶಿವಕುಮಾರ್ ಸೇರಿದಂತೆ ಸಿಬ್ಬಂದಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.