ಸೋಮವಾರಪೇಟೆ, ಸೆ. ೧೯: ಸಮೀಪದ ಯಡೂರು ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯು.ಎ.ಸಿ. ಮತ್ತು ಉದ್ಯೋಗ ಮಾಹಿತಿ ಘಟಕದ ವತಿಯಿಂದ ಪಂಡಿತ್ ದೀನ್‌ದಯಾಳ್ ಕೌಶಲ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ಬೆಂಗಳೂರು ಟ್ರಯೊ ವಿದ್ಯಾಕೇಂದ್ರ ಸಂಸ್ಥೆಯ ತರಬೇತುದಾರ ಗಗನ್, ತಂತ್ರಜ್ಞಾನದ ಜಗತ್ತಿನಲ್ಲಿ ಅಸ್ತಿತ್ವ ಉಳಿಸಿಕೊಂಡು ಬೆಳೆಯಬೇಕಾದಲ್ಲಿ ತಾಂತ್ರಿಕತೆಯ ಪರಿಣತಿ ಮತ್ತು ಕೌಶಲ್ಯಗಳ ಕಲಿಕೆ ಅನಿವಾರ್ಯ ಎಂದರು.
ಜ್ಞಾನ ಎಂದರೆ ಈ ಹಿಂದೆ ಪುಸ್ತಕಗಳನ್ನು ಓದಿ ನೆನಪಿಟ್ಟುಕೊಂಡು ಸಂದರ್ಭ ಬಂದಾಗ ಎಲ್ಲರೊಂದಿಗೆ ಹಂಚಿಕೊಳ್ಳುವುದಾಗಿತ್ತು. ಆದರೆ, ಈಗಿನ ಜಗತ್ತಿನಲ್ಲಿ ಮಾಹಿತಿ ಕ್ರೋಢೀಕರಣ, ತಂತ್ರಜ್ಞಾನಗಳನ್ನು ಬಳಸುವ ಬುದ್ಧಿವಂತಿಕೆ ಮತ್ತು ಕೌಶಲ್ಯಗಳ ಪರಿಣತಿಯೇ ಜ್ಞಾನ ಎಂಬAತಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಉದ್ಯೋಗಾಧಾರಿತ ಶಿಕ್ಷಣದ ಕಡೆ ಗಮನ ಹರಿಸಬೇಕು ಎಂದರು.
ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ದೊರೆಯುವ ತರಬೇತಿ ಕಾರ್ಯಕ್ರಮಗಳು, ಕೌಶಲ್ಯಾಭಿವೃದ್ಧಿ ಆಧಾರಿತ ಕಾರ್ಯಕ್ರಮಗಳ ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಪ್ರೊ. ಕೆ.ಹೆಚ್. ಧನಲಕ್ಷಿö್ಮÃ, ಐ.ಕ್ಯು.ಎ.ಸಿ. ಸಂಚಾಲಕ ಎಂ.ಎಸ್. ಶಿವಮೂರ್ತಿ, ಪ್ರಾಧ್ಯಾಪಕರುಗಳಾದ ಡಾ. ಕೆ.ಎನ್. ಕುಸುಮ, ಎಂ.ಎA. ಸುನೀತ ಇದ್ದರು.