ಚೆಯ್ಯಂಡಾಣೆ, ಸೆ. ೨೦: ಸ್ಥಳೀಯ ನರಿಯಂದಡ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಚೆಯ್ಯಂಡಾಣೆ, ಕರಡ ಹಾಗೂ ಚೇಲಾವರದಲ್ಲಿ ಕಾಡಾನೆಗಳ ಹಾವಳಿ ಮರುಕಳಿಸಿದೆ.

ಚೆಯ್ಯಂಡಾಣೆ ತಟ್ಟಮಕ್ಕಿ ಪೈಸಾರಿಯ ಬಾಲಕೃಷ್ಣ ಎಂಬವರ ಕೊಟ್ಟಿಗೆಯನ್ನು ನಿನ್ನೆ ರಾತ್ರಿ ಕಾಡಾನೆ ದಾಳಿ ಮಾಡಿ ತುಳಿದು ನಾಶಪಡಿಸಿದೆ. ಕೊಟ್ಟಿಗೆಯಲ್ಲಿ ಹಸುಗಳಿಲ್ಲದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ.

ಕರಡ ಗ್ರಾಮದ ಎನ್. ಜಿಮ್ಮಿ ಎಂಬವರ ಗದ್ದೆಗೆ ತೆರಳುವ ಗೇಟನ್ನು ಕಾಡಾನೆ ತುಳಿದು ಹಾನಿಗೊಳಿಸಿದೆ. ಇದೇ ಗ್ರಾಮದ ಐತಿಚಂಡ ದಿನೇಶ್ ಅವರ ಮನೆಯ ಅಂಗಳಕ್ಕೆ ನುಗ್ಗಿದ ಒಂಟಿ ಸಲಗ ಅವರ ಮನೆಯ ಸಾಕು ನಾಯಿಯನ್ನು ಓಡಿಸುವ ವಿಡಿಯೋ ದಿನೇಶ್ ಅವರ ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚೇಲಾವರ ಗ್ರಾಮದ ಕೋಳಿಮಾಡು ಉತ್ತಪ್ಪ, ಹರೀಶ್ ಕುಮಾರ್ ಹಾಗೂ ಮತಿತ್ತರರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಕಾಫಿ, ಅಡಿಕೆ, ಒಳ್ಳೆಮೆಣಸು, ಬಾಳೆ, ಬೈನೆ ಮರವನ್ನು ನಾಶ ಮಾಡಿವೆ. ಕೂಡಲೇ ಸಂಬAಧ ಪಟ್ಟ ಅರಣ್ಯ ಇಲಾಖೆ ಕಾಡಾನೆ ಕಾರ್ಯಾ ಚರಣೆ ನಡೆಸಿ ಕಾಡಾನೆಯನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು, ನಷ್ಟ ಅನುಭವಿಸಿದ ತೋಟದ ಮಾಲೀ ಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.