ವೀರಾಜಪೇಟೆ, ಸೆ. ೨೦: ಪ್ರತಿಯೊಬ್ಬರು ಮೂಲ ಸಂಸ್ಕೃತಿಯನ್ನು ಪ್ರೀತಿಸಿ, ಇತರ ಸಂಸ್ಕೃತಿಯನ್ನು ಗೌರವಿಸುವಂತಾಗಬೇಕು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ನಗರದ ಶ್ರೀ ಚೈತನ್ಯ ಮಠಪುರ ಮುತ್ತಪ್ಪನ್ ದೇವಾಲಯ ಸಭಾಂಗಣದಲ್ಲಿ ಶ್ರೀ ಮುತ್ತಪ್ಪನ್ ಓಣಂ ಆಚರಣಾ ಸಮಿತಿ ವೀರಾಜಪೇಟೆ ವತಿಯಿಂದ ನಡೆದ ೧೫ನೇ ವರ್ಷದ ಓಣಂ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸಮಾಜ ಬಾಂಧವರು ಒಗ್ಗಟ್ಟಿನೊಂದಿಗೆ ಮುಂದುವರಿಯಬೇಕೆAದರು.

ಕೊಡಗು ಹಿಂದೂ ಮಲಯಾಳಿ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ. ವಿಜಯ ಮಾತನಾಡಿ, ಸಮಾಜ ಬಾಂಧವರ ಏಳಗೆಯೇ ಸಂಘಟನೆಯ ಪ್ರಮುಖ ಗುರಿಯಾಗಿದೆ ಎಂದರು.

ಕೊಡಗು ಹಿಂದೂ ಮಲಯಾಳಿ ಸಮಾಜದ ಸ್ಥಾಪಕ ಅಧ್ಯಕ್ಷ ಕೆ.ಎಸ್. ರಮೇಶ್, ಉಪಾಧ್ಯಕ್ಷ ಟಿ.ಕೆ. ಸುಧೀರ್, ಎಸ್.ಎನ್.ಡಿ.ಪಿ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್, ಮೂರ್ನಾಡು ಹಿಂದೂ ಮಲಯಾಳಿ ಸಮಾಜ ಅಧ್ಯಕ್ಷ ಕೆ.ಬಾಬು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಶ್ರೀ ಮುತ್ತಪ್ಪನ್ ಓಣಂ ಆಚರಣಾ ಸಮಿತಿ ವೀರಾಜಪೇಟೆ ಅಧ್ಯಕ್ಷರಾದ ಪಿ.ಜಿ. ಸುಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ಅಂತರರಾಷ್ಟಿçÃಯ ಕ್ರೀಡಾಪಟು ಸಿ.ಕೆ ಭಾಗ್ಯಲಕ್ಷಿö್ಮ, ಹಿಂದೂ ಮಲಯಾಳಿ ಸಮಾಜದ ವೀರಾಜಪೇಟೆ ನಗರ ಅಧ್ಯಕ್ಷ ವಿನೂಪ್ ಉಪಸ್ಥಿತರಿದ್ದರು.

ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜಂ ಎಂಬ ನೂತನ ಲಾಂಛನವನ್ನು ಗಣ್ಯರು ಅನಾವರಣಗೊಳಿಸಿದರು. ಸಮುದಾಯದ ಎಸ್.ಎಸ್.ಎಲ್.ಸಿ, ಪದವಿ ಪೂರ್ವ ಮತ್ತು ಪದವಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪೂಕಳಂ ರಂಗೋಲಿ ಸ್ಪರ್ಧೆ ನಡೆಯಿತು. ಸಮುದಾಯ ಬಾಂಧವರಿAದ ಆಕರ್ಷಕ ಮೆರವಣಿಗೆ ನಡೆಯಿತು.