ಸಿದ್ದಾಪುರ, ಸೆ. ೧೪ : ಪಾದರಕ್ಷೆಯ ಒಳಗೆ ನಾಗರ ಹಾವನ್ನು ಕಂಡು ಮನೆಯವರು ಭಯಭೀತರಾದ ಘಟನೆ ನೆಲ್ಯಹುದಿಕೇರಿಯಲ್ಲಿ ನಡೆದಿದೆ.
ನೆಲ್ಯಹುದಿಕೇರಿ ಗ್ರಾಮದ ಶಾಲಿ ಎಂಬವರ ಮನೆಯ ಆವರಣದ ಕಪಾಟುವಿನಲ್ಲಿ ಪಾದರಕ್ಷೆಯನ್ನಿರಿಸಿದ್ದರು. ಎಂದಿನAತೆ ಬೆಳಿಗ್ಗೆ ಕೆಲಸಕ್ಕೆ ತೆರಳಲು ಪಾದರಕ್ಷೆಯನ್ನು ಧರಿಸುವ ಸಲುವಾಗಿ ಕಪಾಟುವಿನಲ್ಲಿದ್ದ ಶೂ ಹೊರ ತೆಗೆದ ಸಂದರ್ಭದಲ್ಲಿ ಶೂ ಒಳಗೆ ಹಾವು ಪತ್ತೆಯಾಗಿದೆ, ಕೂಡಲೇ ಸ್ಥಳೀಯ ಉರಗ ರಕ್ಷಕ ಸ್ನೇಕ್ ಸುರೇಶ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ ಹಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಡಲಾಯಿತು.