ಚೆಯ್ಯಂಡಾಣೆ, ಸೆ. ೧೩: ಸುಂಟಿಕೊಪ್ಪ ತಝ್ಕಿಯತ್ತು ತ್ವಲಬಾ ದರ್ಸ್ ನಲ್ಲಿ ವಿದ್ಯಾರ್ಥಿಗಳಿಗೆ ಸ್ವಾತಂತ್ರö್ಯ ದಿನದ ಪ್ರಯುಕ್ತ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಖಾಲಿದ್ ಪೊನ್ನಪ್ಪ ಸಂತೆ ಪಡೆದರೆ, ದ್ವಿತೀಯ ಸ್ಥಾನವನ್ನು ಸುಹೈಲ್ ಕಿಕ್ಕರೆ ಪಡೆದುಕೊಂಡರು. ಶೈಖುನಾ ಉಸ್ಮಾನ್ ಫೈಝಿ ಉಸ್ತಾದರು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಈ ಸಂದರ್ಭ ದರ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.