ವೀರಾಜಪೇಟೆ, ಸೆ. ೧೧: ವೀರಾಜಪೇಟೆ ಬಳಿಯ ಮಗ್ಗುಲ ಗ್ರಾಮದಲ್ಲಿರುವ ಶ್ರೀ ಶನೀಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಶ್ರಾವಣ ಮಾಸದ ಪೂಜೆ ಆ.೧೯ ರಿಂದ ಸೆ. ೯ ರವರೆಗೆ ನಾಲ್ಕು ಶನಿವಾರಗಳ ಕಾಲ ಶ್ರದ್ಧಾ ಭಕ್ತಿಯಿಂದ ನಡೆಯಿತು.
ನಾಲ್ಕು ಶ್ರಾವಣ ಶನಿವಾರಗಳು ನವಗ್ರಹ ಪೂಜೆ, ಶನಿಶಾಂತಿ ಪೂಜೆ, ಶನಿಜಪ, ಮೆಟ್ಟಿಲು ಪೂಜೆ ಸೇರಿದಂತೆ ವಿಶೇಷ ಪೂಜೆಗಳು ನಡೆದು ಮಧ್ಯಾಹ್ನ ೧ ಗಂಟೆಗೆ ಮಹಾಪೂಜೆ ಬಳಿಕ ಪ್ರಸಾದ ವಿನಿಯೋಗ ನಂತರ ಅನ್ನ ಸಂತರ್ಪಣೆ ನಡೆಯಿತು. ತಾಲೂಕಿನ ವಿವಿಧ ಭಾಗಗಳಿಂದ, ಗ್ರಾಮಾಂತರ ಪ್ರದೇಶಗಳಿಂದಲೂ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಶನೀಶ್ವರನ ಕೃಪೆಗೆ ಪಾತ್ರರಾದರು.