ಮಡಿಕೇರಿ, ಸೆ. ೧೧ : ಕೇಂದ್ರ ಮೌಲ್ಯಮಾಪನ ಸಮಿತಿಯ ನಿರ್ದೇಶನದ ಅನ್ವಯ ಕುಶಾಲನಗರ ಉಪನೋಂದಣಿ ಕಚೇರಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳು ಹಾಗೂ ನಿವೇಶನಗಳ ಮಾರುಕಟ್ಟೆ ಬೆಲೆಯನ್ನು ೨೦೨೩-೨೪ನೇ ಸಾಲಿಗೆ ಪರಿಷ್ಕರಿಸಲು ಉದ್ದೇಶಿಸಿ ಮಾರುಕಟ್ಟೆ ಮೌಲ್ಯ ನಿರ್ಧರಣಾ ಉಪಸಮಿತಿ ಆಗಸ್ಟ್ ೧೯ರಂದು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದ್ದು, ಪರಿಷ್ಕೃತ ದರಗಳನ್ನು ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.

ಸಾರ್ವಜನಿಕರು ತಮ್ಮ ಸಲಹೆ ಸೂಚನೆ ಹಾಗೂ ಆಕ್ಷೇಪಣೆಗಳಿದ್ದಲ್ಲಿ ಲಿಖಿತ ದಾಖಲೆಗಳ ಮೂಲಕ ೧೫ ದಿನಗಳೊಳಗೆ ಕುಶಾಲನಗರ ಉಪನೋಂದಣಾ ಅಧಿಕಾರಿ ಕಚೇರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.