ಮಡಿಕೇರಿ, ಸೆ. ೧೧: ನಗರದ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್ನಲ್ಲಿ ವೈದ್ಯರು (ಮೆಡಿಕಲ್ ಆಫೀಸರ್) ತಾ. ೧೨ ರಂದು ಲಭ್ಯವಿರುವುದಿಲ್ಲ. ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್ ಮಡಿಕೇರಿಯ ದಂತ ವೈದ್ಯರು (ಡೆಂಟರ್ ಆಫೀಸರ್) ತಾ. ೧೫ ರಿಂದ ಮೂರು ತಿಂಗಳವರೆಗೆ ರಜೆಯಲ್ಲಿ ಇರಲಿದ್ದು, ವೀರಾಜಪೇಟೆ ಪಾಲಿಕ್ಲಿನಿಕ್ನ ದಂತ ವೈದ್ಯರು ವಾರದಲ್ಲಿ ಒಂದು ದಿನ (ಬುಧವಾರ) ಮಾತ್ರ ಮಡಿಕೇರಿ ಪಾಲಿಕ್ಲಿನಿಕ್ನಲ್ಲಿ ಲಭ್ಯವಿರುತ್ತಾರೆ. ಮಾಜಿ ಸೈನಿಕರು ಮತ್ತು ಅವಲಂಬಿತರು ದಂತ ತಪಾಸಣೆಗೆ ಮುಂಗಡ ಅಪಾಯಿಂಟ್ ಮೆಂಟ್ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ೦೮೨೭೨-೨೨೦೦೨೪ ಮತ್ತು ೯೪೮೨೧೯೩೫೦೯ ಸಂಖ್ಯೆಯನ್ನು ಸಂಪರ್ಕಿಸುವAತೆ ಕೋರಿದೆ.