ಮಡಿಕೇರಿ, ಸೆ. ೧೨: ಬೆಂಗಳೂರು - ಮೈಸೂರು ರಾಷ್ಟಿçÃಯ ಹೆದ್ದಾರಿಯಲ್ಲಿ (ಎಕ್ಸ್ಪ್ರೆಸ್ವೇ) ಭಾನುವಾರ ರಾತ್ರಿ ಕೊಡಗಿನ ದಂಪತಿ ದುಷ್ಕರ್ಮಿಗಳಿಂದ ದರೋಡೆಗೆ ಒಳಗಾಗಿರುವ ಪ್ರಕರಣ ವರದಿಯಾಗಿದೆ. ಕಾರಿನಲ್ಲಿ ಕೊಡಗಿನತ್ತ ಆಗಮಿಸುತ್ತಿದ್ದ ಪತಿ - ಪತ್ನಿಯನ್ನು ದ್ವಿಚಕ್ರ ವಾಹನದಲ್ಲಿ ಅಡ್ಡಗಟ್ಟಿ ತಾವು ಪೊಲೀಸರೆಂದು ಹೇಳಿರುವ ಆರೋಪಿಗಳು, ಮಾರಕಾಸ್ತçದಿಂದ ಬೆದರಿಸಿ ಕೊಲೆ ಬೆದರಿಕೆಯೊಡ್ಡಿದ್ದು, ಚಿನ್ನಾಭರಣ ಅಪಹರಿಸಿದ್ದಾರೆ.
ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿ ಗ್ರಾಮದವರಾದ ಕರ್ನಂಡ ಬಿ. ಚಲನ್ ಹಾಗೂ ಅವರ ಪತ್ನಿ ದೀಪ್ತಿ ದರೋಡೆಗೆ ಒಳಗಾದ ದಂಪತಿ. ಭಾನುವಾರ ತಡರಾತ್ರಿ ಸುಮಾರು ೧೨.೪೦ರ ಸುಮಾರಿಗೆ ಇವರು ತಮ್ಮ ಕಾರಿನಲ್ಲಿ ಬೆಂಗಳೂರಿನಿAದ ಜಿಲ್ಲೆಯತ್ತ ಆಗಮಿಸುತ್ತಿದ್ದರು. ಈ ಸಂದರ್ಭ ಶ್ರೀರಂಗಪಟ್ಟಣ ಟೋಲ್ನಿಂದ ಸುಮಾರು ೭ ಕಿ.ಮೀ. ದೂರದಲ್ಲಿ ಕಪ್ಪುಬಣ್ಣದ ಸ್ಕೂಟಿಯಲ್ಲಿ ಕಾರನ್ನು ಹಿಂಬಾಲಿಸಿ ಬಂದ ಹೆಲ್ಮೆಟ್ ಧರಿಸಿದ್ದ ಇಬ್ಬರು ಅಪರಿಚಿತರು ಕಾರನ್ನು ಅಡ್ಡಗಟ್ಟಿ ತಾವು
(ಮೊದಲ ಪುಟದಿಂದ) ಪೊಲೀಸರು ಕಾರನ್ನು ನಿಧಾನಗತಿ ಯಲ್ಲಿ ಯಾಕೆ ಓಡಿಸುತ್ತಿದ್ದೀರಿ. ನಿಮ್ಮ ಕಾರನ್ನು ತಪಾಸಣೆ ಮಾಡಬೇಕು ಎಂದು ಹೇಳಿದ್ದಾರೆ. ಹಿಂಬದಿಯಲ್ಲಿ ಸ್ನೇಹಿತರು ಬರುತ್ತಿದ್ದಾರೆ ಈ ಕಾರಣದಿಂದ ನಿಧಾನಗತಿಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ಪೊಲೀಸರು ಬಂದಾಗ ಚಲನ್ ಕಾರು ನಿಲ್ಲಿಸಿದ್ದಾರೆ ತಕ್ಷಣ ಓರ್ವ ವ್ಯಕ್ತಿ ಕಾರಿನ ಬಾಗಿಲು ತೆರೆದು ಚಲನ್ರನ್ನು ಒಳತಳ್ಳಿ ಕೂತು ದಾಖಲೆ ತೋರಿಸಿ ಎಂದಿದ್ದಾನೆ. ಇವರು ದಾಖಲೆ ನೀಡಲು ಮುಂದಾ ಗುವಷ್ಟರಲ್ಲಿ ತಳವಾರ್ನಂತಹ ಮಾರಕಾಯುಧವನ್ನು ಅವರ ಕುತ್ತಿಗೆಗೆ ಹಿಡಿದು ಹಣ - ಚಿನ್ನಾಭರಣ ನೀಡುವಂತೆ ಬೆದರಿಸಿದ್ದು, ಕೊಲೆ ಮಾಡುವುದಾಗಿ ಎಚ್ಚರಿಸಿದ್ದಾನೆ. ಮತ್ತೋರ್ವ ವ್ಯಕ್ತಿ ಕಾರಿನ ಹೊರಗಿದ್ದು, ಈತನೂ ಬೆದರಿಕೆಯೊಡ್ಡಿದ್ದಾನೆ. ಚಲನ್ ಹಾಗೂ ದೀಪ್ತಿ ಅವರ ಬಳಿಯಿದ್ದ ಸುಮಾರು ೩೫ ಗ್ರಾಂ. ನಷ್ಟು ಚಿನ್ನಾಭರಣವನ್ನು ಒಳಗಿದ್ದ ವ್ಯಕ್ತಿ ಬಲಾತ್ಕಾರವಾಗಿ ಕಿತ್ತುಕೊಂಡಿದ್ದಾನೆ.
ನAತರ ಆತ ಕೆಳಗಿಳಿದಾಗ ಪತ್ನಿ ದೀಪ್ತಿ ೧೧೨ ಸಂಖ್ಯೆಗೆ ಪೊಲೀಸರಿಗೆ ಕರೆ ಮಾಡುವಂತೆ ಜೋರಾಗಿ ಹೇಳಿದ್ದಾರೆ. ಈ ಸಂದರ್ಭ ಚಲನ್ ಕಾರನ್ನು ಮತ್ತೆ ಚಲಾಯಿಸಿದ್ದಾರೆ. ಪೊಲೀಸರಿಗೆ ಕರೆ ಮಾಡುವಂತೆ ಹೇಳಿದ್ದರಿಂದ ಕುಪಿತಗೊಂಡ ಇಬ್ಬರು ಮತ್ತೆ ಸುಮಾರು ೩೦೦ ಮೀಟರ್ನಷ್ಟು ದೂರ ತಳವಾರ್ನೊಂದಿಗೆ ಹಲ್ಲೆ ಮಾಡಲು ಯತ್ನಿಸಿ ಕಾರನ್ನು ಹಿಂಬಾಲಿಸಿದರೆನ್ನಲಾಗಿದೆ. ಈ ವೇಳೆ ಚಲನ್ ಕಾರನ್ನು ವೇಗವಾಗಿ ಚಲಾಯಿಸಿ ಪಾರಾಗಿದ್ದಾರೆ.
ಬಳಿಕ ಸುಮಾರು ದೂರ ತಲುಪಿದ್ದು, ನಂತರದಲ್ಲಿ ಪೊಲೀಸರಿಗೆ ಕರೆ ಮಾಡಿ ಕೃತ್ಯದ ಬಗ್ಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸುವಷ್ಟರಲ್ಲಿ ದುಷ್ಕೃತ್ಯವೆಸಗಿದ ಇಬ್ಬರು ಪರಾರಿಯಾಗಿದ್ದಾರೆ. ಘಟನೆ ಬಗ್ಗೆ ಶ್ರೀರಂಗಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀರಂಗಪಟ್ಟಣ ಸಮೀಪದ ಗಂಜಾAನ ರಾಷ್ಟಿçÃಯ ಹೆದ್ದಾರಿ ಮೇಲ್ಸೇತುವೆ (ಗರುಡನ ಉಕ್ಕಡ ನಗುವನ ಹಳಿಗೇಟ್ ಬಳಿ) ಈ ಘಟನೆ ನಡೆದಿದೆ. ಈಗಾಲೇ ಈ ವ್ಯಾಪ್ತಿಯಲ್ಲಿ ಮೂರು ದರೋಡೆ ಪ್ರಕರಣಗಳು ನಡೆದಿದೆ ಎಂದು ತಿಳಿದು ಬಂದಿದ್ದು, ಪೊಲೀಸ್ ತನಿಖೆ ನಡೆಯುತ್ತಿದೆ.
ಘಟನೆ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಚಲನ್ ಅವರು ಹೆದ್ದಾರಿ ರಸ್ತೆಯಾದರೂ ಸೂಕ್ತ ಲೈಟ್ವ್ಯವಸ್ಥೆ, ಕೆಮರಾ ವ್ಯವಸ್ಥೆ ಇಲ್ಲಿಲ್ಲ. ಪ್ರಯಾಣಿಕರು ಜಾಗ್ರತೆ ವಹಿಸಬೇಕಾಗಿದೆ ಎಂದಿದ್ದಾರೆ. ಪೊಲೀಸರು ತ್ವರಿತಗತಿಯಲ್ಲಿ ತನಿಖೆ ನಡೆಸುತ್ತಿದ್ದು, ಸಹಕರಿಸುತ್ತಿರುವುದಾಗಿ ಹೇಳಿದ್ದಾರೆ.